ಸುದ್ದಿಗಳು

ವಿಜಯ್ ದೇವರಕೊಂಡ ಅತ್ತಿದ್ಯಾಕೆ?

ಹೈದರಾಬಾದ್,ಮೇ.15: ನಾಯಕ ವಿಜಯ್ ದೇವರಾಕೊಂಡ ರೊಮ್ಯಾನ್ಸ್ ಗೆ ಹೆಚ್ಚು ಹೆಸರುವಾಸಿ.. ಈಗಾಗಲೇ ರಶ್ಮಿಕಾ ಜೊತೆ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದ  ಎರಡನೇ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದಾರೆ..  ‘ಕಡಲಲ್ಲೇ’ ಎರಡನೇ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ..

ವಿಜಯ್ ಟ್ವೀಟ್

ಈಗ ವಿಜಯ್ ದೇವರಕೊಂಡ ಈ ಚಿತ್ರದ ಹಾಡನ್ನು ಕೇಳಿ ಅತ್ತಿದ್ದಾರಂತೆ.. ಈ ವಿಷಯವನ್ನು ಸ್ವತಃ ವಿಜಯ್ ದೇವರಕೊಂಡ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ..

“ಒಂದು ದಿನ ಬೆಳಿಗ್ಗೆ, ನಾನು ಎಚ್ಚರವಾದಾಗ – ನನಗೆ ಭರತ್ ಅವರಿಂದ ಒಂದು ಆಡಿಯೋ  ಸಂದೇಶವಿತ್ತು..

ನಾನು ಅದನ್ನು ಕೇಳಿದ್ದೇನೆ, ಅದು ನನಗೆ ಭಾವನಾತ್ಮಕತೆಯನ್ನುಂಟುಮಾಡಿದೆ, ನಾನು ಅತ್ತು ಬಿಟ್ಟೆ. ಪ್ರತಿ ಬಾರಿ ನಾನು ಆಡಿಯೋವನ್ನು ಪ್ಲೇ ಮಾಡಿದಾಗ ಮಮ್ಮಿಯ ಕಣ್ಣಿನಲ್ಲಿ ಕಣ್ಣೀರನ್ನು ನೋಡುತ್ತಿದ್ದೇನೆ. ಈಗ ಹಾಡನ್ನು ನೀವು ಕೇಳಿ, ಅದನ್ನು ಅನುಭವಿಸಿ ..

ಡಿಯರ್ ಕಾಮ್ರೇಡ್ ..”

ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ..

ವಿಭಿನ್ನವಾಗಿ ‘ಭಿನ್ನ’ ಟ್ರೇಲರ್ ಮೆಚ್ಚಿದ ಮಿಸ್ಟರ್ ಫರ್ಫೆಕ್ಟ್!!

#vijaydeverkonda #tollywood #sandalwood #kaldalllelyricalvideo

Tags