ಸುದ್ದಿಗಳು

ಬೆಳಕಿನಿಂದ ಕತ್ತಲೆಯೆಡೆಗೆ…. ಕ್ಯಾಪ್ಟನ್ ಪಯಣ..

ಅನಾರೋಗ್ಯದಿಂದ ಕಂಗಾಲಾಗಿರುವ ವಿಜಯಕಾಂತ್...

 ರಾಜಕೀಯ ಪ್ರವೇಶಿಸುವ   ಪೂರ್ವದಲ್ಲಿ ಚಲನಚಿತ್ರ ನಿರ್ದೇಶಕ – ನಟರಾಗಿ ಸೇವೆ ಸಲ್ಲಿಸಿದ್ಧ ಕ್ಯಾಪ್ಟನ್…

ಚೆನೈ, ಆ.29: ‘ವಿಜಯರಾಜ್ ಅಲಗರ್ಸ್ವಾಮಿ ವಿಜಯಕಾಂತ್’ ಜನನ 25 ಆಗಸ್ಟ್ 1952,  ಕ್ಯಾಪ್ಟನ್ ವಿಜಯಕಾಂತ್ ಅಥವಾ ವಿಜಯಕಾಂತ್ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಚಲನಚಿತ್ರ ನಟ ಮತ್ತು ರಾಜಕಾರಣಿಯಾಗಿ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ 2011 ರಿಂದ 2016  ರವರೆಗೆ ಸೇವೆ ಸಲ್ಲಿಸಿದ ವಿಜಯಕಾಂತ್ ರಾಜಕೀಯ ಪ್ರವೇಶಿಸುವ ಮೊದಲು  ಚಲನಚಿತ್ರ ನಿರ್ದೇಶಕ ಮತ್ತು ನಟರಾಗಿ ತಮ್ಮ ಸಾಮರ್ಥ್ಯ ರುಜುವಾತುಪಡಿಸಿದ್ದಾರೆ.

ವಿಜಯಕಾಂತ್ ಕೂಡಾ ಪ್ರಸ್ತುತ ತಮಿಳುನಾಡು  ಡಿಎಂಕೆ ಅಧ್ಯಕ್ಷರಾಗಿದ್ದಾರೆ. ‘ದೇಸಿಯ ಮುರ್ಪೋಕ್ ದ್ರಾವಿಡ ಕಳಗಂ ‘(ಡಿಎಂಡಿಕೆ) ರಾಜಕೀಯ ಪಕ್ಷದ ಡಾನ್ ಮತ್ತು ನಾಯಕರಾಗಿದ್ದಾರಲ್ಲದೆ ‘ರಿಷಿವಂಡಿಯಂ’ ಕ್ಷೇತ್ರದ ಪ್ರತಿನಿಧಿಯಾಗಿರುವ ಶಾಸನಸಭೆಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ…

ವೃತ್ತಿಜೀವನ
ವಿಜಯಕಾಂತ್ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ತಮಿಳು ಚಲನಚಿತ್ರಗಳಲ್ಲಿ ಮಾತ್ರ ನಟಿಸಿದ್ದಾದರೂ ಅವರ ಚಲನಚಿತ್ರಗಳನ್ನು ತೆಲುಗು ಮತ್ತು ಹಿಂದಿಗೆ ರಿಮೇಕ್ ಮಾಡಲಾಗಿದೆ. ಕೆಲವು ನಟರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ವ್ಯಕ್ತಿಯಲ್ಲಿ ಇವರೂ ಒಬ್ಬರು.

ರಾಜಕಾರಣಿಯ ಕತೆ

ವಿಜಯಕಾಂತ್ 1990 ರ ದಶಕದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ‘ಪುರನ್ ವಿಸರಣೈ’ (1990), ಕುಖ್ಯಾತ ಸರಣಿ ಕೊಲೆಗಾರ ಆಟೋ ಶಂಕರ್ ಅವರ ಜೀವನವನ್ನು ಆಧರಿಸಿ, ಆರ್. ಶರತ್ಕುಮಾರ್ ಅವರು ಪ್ರತಿಸ್ಪರ್ಧಿಯಾಗಿ ಅಭಿನಯಿಸಿದ್ದಾರೆ. ಆರ್.ಕೆ. ಸೆಲ್ವಮನಿ ನಿರ್ದೇಶನದ ಈ ಚಿತ್ರವು ಆ ಕಾಲದ ಅತ್ಯುತ್ತಮ ರೋಮಾಂಚಕ ಚಿತ್ರಗಳಲ್ಲಿ ಒಂದಾಗಿದೆ. ವರ್ಷದ ಅಂತ್ಯದಲ್ಲಿ, ಅವರು ‘ಸತ್ಯರೀಯನ್’ (1990) ನಲ್ಲಿ ಅಭಿನಯಿಸಿದರು. ಈ ಚಿತ್ರವನ್ನು ಮಣಿ ರತ್ನಂ ನಿರ್ಮಾಣ ಮಾಡಿದ್ದು, ಇದು ಪ್ರಾಮಾಣಿಕ ಪೋಲೀಸ್ ಮತ್ತು ಭ್ರಷ್ಟ ರಾಜಕಾರಣಿಯ ಕತೆ.

‘ವನತಾಯಿ ಪೋಲಾ’ ಚಿತ್ರಕ್ಕೆ ಎರಡು ಬಾರಿ (2000), ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ‘ವಲ್ಲರಾಸು’ (2000) ಮತ್ತು ಸಿ’ಮಸ್ಮಾನಂ’ ನಂತಹ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ಪಡೆದಿದ್ದಾರೆ..

Image result for vijaykanth wiki actor

ಪ್ರಥಮ 3D ಚಿತ್ರ

ವೈದೇಹಿ ಕಾತಿರುಂದಾಲ್  (1984) ನಂತಹ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ವರ್ಷದಲ್ಲಿ, ವಿಜಯಕಾಂತ್ ಅವರ 18 ಸಿನಿಮಾ ಬಿಡುಗಡೆಯಾಗಿದ್ದು ಒಂದು ದಾಖಲೆಯನ್ನೇ ಸೃಷ್ಟಿಮಾಡಿದೆ. ಮತ್ತು ಅವರು ಕೇವಲ ಒಂದು ವರ್ಷದಲ್ಲಿ ತಮ್ಮ ಚಿತ್ರಗಳನ್ನೆಲ್ಲಾ ಪ್ರಮುಖ ಪಾತ್ರದಲ್ಲಿ ಬಿಡುಗಡೆ ಮಾಡಿದ ಏಕೈಕ ತಮಿಳು ನಟ. ತಮಿಳು ಚಲನಚಿತ್ರೋದ್ಯಮದಲ್ಲಿ ಮಾಡಿದ ಮೊದಲ 3D ಚಿತ್ರವಾದ ‘ಅನ್ನಾಯ್ ಭೂಮಿ’ 3D (1985) ನಲ್ಲಿ ಅಭಿನಯಿಸಿದರು, ಅಲ್ಲಿ ಟೈಗರ್ ಪ್ರಭಕರರೊಂದಿಗೆ ಅಭಿನಯಿಸಿದರು. ಅವರು ಕನ್ನಡ ನಟ ವಿಷ್ಣುವರ್ಧನ್ ಜೊತೆ ಈಟ್ಟಿ (1985) ಮತ್ತು ತಮಿಳು ನಟ ಸತ್ಯಾರಾಜ್ (ಖಳನಾಯಕ) ಪಾತ್ರದಲ್ಲಿ ಸಹನಟನಾಗಿ ನಟಿಸಿದ್ದಾರೆ.

ಕತ್ತಲಾದ ಜಗತ್ತು

ಈಗ ಹೊಸ ವಿಷಯವೇನೆಂದರೆ, ವಿಜಯಕಾಂತ್ ಅವರಿಗೆ ಕಣ್ಣು ಕಾಣಿಸುತ್ತಿಲ್ಲ. ಇಷ್ಟು ದಿನ ಇವರ ಬಗ್ಗೆ ಮಾಹಿತಿಯೇ ಇರಲಿಲ್ಲ. ಮೊನ್ನೆಯಷ್ಟೇ ಕರುಣಾನಿಧಿ ನಿಧನ ಹೊಂದಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇವರ ಸಮಾಧಿಗೆ ಭೇಟಿ ನೀಡಲು ವಿಜಯಕಾಂತ್ ಬಂದಿದ್ದರು. ಆಗಲೇ ನೋಡಿ, ಸ್ಪೋಟಕ ಮಾಹಿತಿ ಹೊರಬಿದ್ದಿದ್ದು! ಕರುಣಾನಿಧಿ ಸಮಾಧಿಗೆ ನಮನ ಸಲ್ಲಿಸಲು ಬಂದಾಗ ಅವರ ಕೈ ಹಿಡಿದು ಅವರ ಕುಟುಂಬದವರು ಬರುತ್ತಿದ್ದರು.. ಅರೆ !! ಇವರಿಗೇನಾಯ್ತು ಎಂದು ಒಮ್ಮೆ ಎಲ್ಲರೂ ಅಚ್ಚರಿ ಪಟ್ಟಿದ್ದರು.

Image result for vijaykanth wiki actor

ಆವಾಗಲೇ ಕತ್ತಲೆ ಕೋಣೆಯಲ್ಲಿದ್ದ ವಿಷಯ ಬೆಳಕಿಗೆ ಬಂದಿದ್ದು….

ಬಾಲ್ಕನಿಗೆ ದೊರೆತ ಮಾಹಿತಿ ಪ್ರಕಾರ, ಕ್ಯಾಪ್ಟನ್ ಗೆ ಕೆಲವು ಗಹನವಾದ ಅನಾರೋಗ್ಯಒದಗಿದೆ. ಅವರ ಲಿವರ್ ನಲ್ಲಿ ಏರುಪೇರಾಗಿದೆ. ಅದಕ್ಕಾಗಿ ಕೆಲವಾರು ಡ್ರಗ್ಸ್, ಸ್ಟಿರಾಯಿಡ್ ಗಳ ಸೇವಿಸಿದ  ಅವರಿಗೆ ಇದೀಗ ಆ ಚಟದಿಂದ ಮುಕ್ತರಾಗುವ ಪ್ರಯಾಸದಲ್ಲಿದ್ದಾರೆ. ಆ ಡ್ರಗ್ಸ್ ಪರಿಣಾಮಗಳಿಂದ ಅವರಿಗೆ ಸ್ವತಃ ತಾವೇ ನಡೆದಾಡಲು ಸಾಧ್ಯವಾಗುತ್ತಿಲ್ಲ. ಮಾತುಕತೆಯಲ್ಲೂ ಮುಂದುಹಿಂದಾಗುತ್ತಿದೆ. ಹೊಟ್ಟೆಯೊಳಗಣ ಲಕ್ವದ ಕಾರಣ ಅವರ ಆರೋಗ್ಯ ಡೋಲಾಯಮಾಣವಾಗಿದೆ. ಕ್ಯಾಪ್ಟನ್ ಗುಣಮುಖವಾಗಲೆಂದು ಬಾಲ್ಕನಿ ಹಾರೈಕೆ .

Tags