ಸುದ್ದಿಗಳು

ಚಿತ್ರಕ್ಕಾಗಿ 18 ಕೆ.ಜಿ ತೂಕ ಇಳಿಸಿಕೊಂಡ ವಿಜಯ್ ರಾಘವೇಂದ್ರ

‘ಮಾಲ್ಗುಡಿ ಡೇಸ್’ ಚಿತ್ರಕ್ಕಾಗಿ ತೂಕ ಇಳಿಕೆ

ಬೆಂಗಳೂರು.ಏ.20: ಎಂಭತ್ತರ ದಶಕದಲ್ಲಿ ಕಿರುತೆರೆಯಲ್ಲಿ ಶಂಕರ್ ನಾಗ್ ಅವರ ‘ಮಾಲ್ಗುಡಿ ಡೇಶ್’ ಧಾರಾವಾಹಿ ಸಾಕಷ್ಟು ಸದ್ದು ಮಾಡಿತ್ತು. ವಿಶೇಷವೆಂದರೆ, ಇದೇ ಹೆಸರಿನಲ್ಲೊಂದು ಚಿತ್ರ ಮೂಡಿ ಬರುತ್ತಿದ್ದು, ನಾಯಕ ನಟರಾಗಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ.

ಹೌದು, ಕಿಶೋರ್ ಮೂಡಬಿದ್ರೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕರಾಗಿದ್ದು ನಟಿಸುತ್ತಿದ್ದು, ಪಾತ್ರಕ್ಕಾಗಿ ಅವರು 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈಗಾಗಲೇ ನಾಲ್ಕು ಕೆಜಿ ತೂಕವನ್ನು ಇಳಿಸಿಕೊಂಡಿರುವ ಅವರು, ಇನ್ನೂ ಹದಿನಾಲ್ಕು ಕೆಜಿ ತೂಕ ಇಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ.

“ಮಾಲ್ಗುಡಿ ಡೇಸ್’ ಅಂದಾಕ್ಷಣ, ಶಂಕರ್ ನಾಗ್ ಅವರು ನೆನಪಾಗುತ್ತಾರೆ. ಅದರಲ್ಲೂ ಆ ಬಾಲ್ಯದ ದಿನಗಳೂ ನೆನಪಾಗುತ್ತವೆ. ಹೀಗಾಗಿ ಈ ಚಿತ್ರದ ಮೇಲೆ ವಿಶ್ವಾಸ ತುಸು ಹೆಚ್ಚಾಗಿದೆ. ಈ ಚಿತ್ರ ನನಗೆ ಹೊಸ ಇಮೇಜ್ ಕಲ್ಪಿಸಿಕೊಡುತ್ತದೆ ಎಂಬ ಭರವಸೆ ಇದೆ. ಹಾಗಂತಾ ಈ ಚಿತ್ರಕ್ಕೂ

“ಮಾಲ್ಗುಡಿ ಡೇಸ್’ಗೂ ಯಾವುದೇ ಸಂಬಂಧವಿಲ್ಲ. ಕೇವಲ ಆ ಶೀರ್ಷಿಕೆಯನ್ನು ಮಾತ್ರ ಇಲ್ಲಿ ಬಳಕೆ ಮಾಡಲಾಗುತ್ತಿದೆ” ಎಂದು ವಿಜಯ್ ರಾಘವೇಂದ್ರ ಹೇಳುತ್ತಾರೆ.

“ಚಿತ್ರದಲ್ಲಿ ವಿಜಯ್ ರಾಘವೇಂದ್ರರನ್ನು ವಿಭಿನ್ನ ಪಾತ್ರದಲ್ಲಿ ನೋಡಬಹುದು. ಪಾತ್ರ ತುಂಬ ಚಾಲೆಂಜಿಂಗ್ ಆಗಿದ್ದು, ಚಿತ್ರದಲ್ಲಿ ವಿಶೇಷವಾದ ಸ್ಥಳ, ತಲುಪಬೇಕಾದ ಗುರಿ ಮುಂತಾದವುಗಳು ಕೂಡ ಇರಲಿದ್ದು, ಅದು ಯಾತಕ್ಕಾಗಿ ಬರುತ್ತದೆ, ಅದು ಮುಂದಕ್ಕೆ ಹೋದಾಗ ನೆನಪುಗಳೊಂದಿಗೆ ಬೇರೆ ಊರಿಗೆ ಕರೆದುಕೊಂಡು ಹೋಗುತ್ತದೆ. ಹಾಗಂತ ಅದೇನೂ ಹಳೆಯದಾಗಿರುವುದಿಲ್ಲ. ಎಲ್ಲವೂ ಹೊಸ ಹೊಸ ನೆನಪುಗಳೇ ಆಗಿರುತ್ತವೆ” ಎಂದು ಚಿತ್ರತಂಡದವರು ಹೇಳುತ್ತಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣ ತೀರ್ಥಹಳ್ಳಿ, ಆಗುಂಬೆ, ಹೊರನಾಡು ಸುತ್ತಮುತ್ತ ಭಾಗದಲ್ಲಿ ನಡೆದಿದೆ. ಇಷ್ಟರಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ತಯಾರಿ ನಡೆಸಿದ್ದು, .ಪಾಂಡಿಚೇರಿಯಲ್ಲೂ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಮಂಜಿನ ನಗರಿಯ ಬೆಡಗಿ ಲತಾ ಗಿರೀಶ್ ರ ನಟನಾ ಪುರಾಣ

#vijayraghavendra, #malgudidays, #weightless, #balkaninews #filmnews, #kannadasuddigalu

Tags