ಸುದ್ದಿಗಳು

ವಿನ್ ಡೀಸೆಲ್ ನನ್ನೇ ಮೀರಿಸುವಂತಿದೆ ಈ ನಟನ ರಗಡ್ ಲುಕ್ !!

ಚಿಯಾನ್ ವಿಕ್ರಮ್ ಹೊಸ ಸಿನಿಮಾ ಪೋಸ್ಟರ್!!

ಚೆನ್ನೈ,ನ.07: ತಮಿಳಿನ ಸೂಪರ್ ಸ್ಟಾರ್ ವಿಕ್ರಮ್ ಅವರ ಮುಂಬರುವ 56 ನೇ ಚಿತ್ರ ‘ಕಡಾರಮ್ ಕೊಂಡನ್’ ಚಿತ್ರದ ಮೊದಲ ನೋಟವನ್ನು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್  ತಮ್ಮ ಟ್ವಟಿರ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.. ಇನ್ನು ಈ ಚಿತ್ರಕ್ಕೆ ಸ್ವತಃ ಅವರೇ ನಿರ್ಮಾಪಕರಾಗಿದ್ದಾರೆ…

ವಿಕ್ರಮ್ ಕೈಗೆ ಕೋಳ

ಪೋಸ್ಟರ್ ನಲ್ಲಿ ವಿಕ್ರಮ್ ಕೈಗೆ ಕೋಳ ಹಾಕಿರುವುದನ್ನು ತೋರಿಸಲಾಗಿದೆ, ಅದರ ಸುತ್ತಲೂ ಹೊಗೆ ಸುತ್ತುವರೆದುಕೊಂಡಿದ್ದು,  ಕೌಲಾಲಂಪುರ್ ನಗರದ ಹಿನ್ನೆಲೆಯುಳ್ಳ ಕಥೆಯಾಗಿದ್ದು  ಮಲೇಷ್ಯಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಇನ್ನು ವಿಕ್ರಮ್ ಕೇಶವಿನ್ಯಾಸ ಮತ್ತು ಲುಕ್ ಗಳು   XXX ನಲ್ಲಿ ವಿನ್ ಡೀಸೆಲ್  ಹಾಕಿರುವಂತ ಹಚ್ಚೆಗಳು ವಿಕ್ರಮ್ ಗೆ ಸ್ಪೂರ್ತಿ ಎಂದು ತೋರುತ್ತದೆ.. ಅಷ್ಟೇ ಅಲ್ಲದೆ ಅವರ ಪಾತ್ರದಲ್ಲಿ ಡಬಲ್ ಶೇಡ್ ನಲ್ಲಿ  ಕಾಣಿಸಿಕೊಳ್ಳಬಹುದು ಎಂಬ ಮಾತು ಕೇಳಿ ಬರುತ್ತಿದೆ..

Image result for vikram tamil

‘ಕಡಾರಮ್ ಕೊಂಡನ್’

ಕಡಾರಮ್ ಕೊಂಡನ್, ಅಂದರೆ ಕಡರಂನ ವಿಜಯಶಾಲಿ, ಮಲೇಷಿಯಾದಲ್ಲಿನ ಇಂದಿನ ಕೇದಾದಲ್ಲಿರುವ ಕಡಾರಂ ನ ಪುರಾತನ ಪಟ್ಟಣವಾದ ಚೋಳ ಆಕ್ರಮಣದ ಇತಿಹಾಸವನ್ನು ಉಲ್ಲೇಖಿಸುತ್ತದೆ. ಆದ್ದರಿಂದ, ಈ ಚಲನಚಿತ್ರವು ಮಲೇಷಿಯಾದ ಗ್ಯಾಂಗ್ ಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಭಾರತೀಯರನ್ನು ಸೂಚಿಸುತ್ತದೆ.

ರಾಜೇಶ್ ಎಂ ಸೆಲ್ವ ನಿರ್ದೇಶನ

ಈ ಚಿತ್ರದಲ್ಲಿ ಕಲಮ್ ಹಾಸನ್ ಅವರ ಕಿರಿಯ ಮಗಳು, ಅಕ್ಷರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಕಮಲ್ ಹಾಸನ್ ಅಭಿನಯದ ‘ತೂಂಗವನಂ’ ಚಿತ್ರಕ್ಕೆ ಮೊದಲು ನಿರ್ದೇಶಿಸಿದ ರಾಜೇಶ್ ಎಂ ಸೆಲ್ವ ಅವರು ಈ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ..

Tags