ಸುದ್ದಿಗಳು

ವಿನಯ್ ರಾಜ್ ಕುಮಾರ್ ಗೆ ಡೈರೆಕ್ಷನ್ ಮಾಡಲಿರುವ ‘ಕೆಜಿಎಫ್’ ಸಂಗೀತ ನಿರ್ದೇಶಕ

ಬೆಂಗಳೂರು, ಏ.24:

ಸದ್ಯ ‘ಗ್ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾಗೂ ತಯಾರಿ ನಡೆಸುತ್ತಿದ್ದಾರೆ. ವಿಶೇಷ ಅಂದರೆ ಬ್ಲಾಕ್ ಬಾಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವರ ನಿರ್ದೇಶನದಲ್ಲಿ ನಟ ವಿನಯ್ ರಾಜ್ ಕುಮಾರ್ ನಟಿಸಲಿದ್ದಾರಂತೆ. ಸದ್ಯ ಇಂಥದೊಂದು ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಾಯಿದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ವಿನಯ್ ಬ್ಯುಸಿ

ಹೌದು, ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ ವಿನಯ್ ರಾಜ್ ಕುಮಾರ್ ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಮನೆಮಾತಾಗಿದ್ದಾರೆ. ತಂದೆ ದೊಡ್ಡಪ್ಪ, ಚಿಕ್ಕಪ್ಪರಂತೆ ವಿನಯ್ ಕೂಡ ಸಿನಿಮಾ ರಂಗದಲ್ಲಿ ನಟನೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸದ್ಯ ‘ಗ್ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟ ಇದೀಗ ರವಿ ಬಸ್ರೂರ್ ಅವರ ನಿರ್ದೇಶನದಲ್ಲಿ ಬರಲಿದ್ದಾರೆ. ಈಗಾಗಲೇ ಒನ್ ಲೈನ್ ಸ್ಟೋರಿ ಕೇಳಿ ಒಪ್ಪಿಗೆ ನೀಡಿದ್ದಾರಂತೆ ವಿನಯ್ ರಾಜ್ ಕುಮಾರ್.

ಮುಂದಿನ ವರ್ಷ ಹೊಸ ಸಿನಿಮಾ

ಇನ್ನೂ ‘ಗ್ರಾಮಾಯಣ’ ಸಿನಿಮಾ ನಂತರ ಈ‌ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಎನ್.ಎಸ್​ ರಾಜ್​ ಕುಮಾರ್​ ಬಂಡವಾಳ ಹೂಡುತ್ತಿದ್ದಾರಂತೆ. ವಿನಯ್​ ರಾಜ್​ಕುಮಾರ್ ​ರ ಬರ್ತ​ಡೇ ಮೇ 7ನೇ ತಾರೀಖಿನಂದು ಸಿನಿಮಾ ಟೈಟಲ್​ ಹಾಗೂ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಆಗಲಿದೆ. ಸದ್ಯ ಸಿನಿಮಾ ಮೂಲಗಳ ಪ್ರಕಾರ 2020ರಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರವಿ ಬಸ್ರೂರ್ ಕೂಡ ಬ್ಯುಸಿಯಾಗಿದ್ದಾರೆ. ಅದೇನೆ ಇರಲಿ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟ ವಿನಯ್ ಬ್ಯುಸಿಯಾಗುತ್ತಿದ್ದಾರೆ.

ರಾಜಣ್ಣನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಜಗ್ಗೇಶ್ ಕುಟುಂಬ

#balkaninews #ravibasrur #vinayrajkumar #vinayrajkumarmovies #ravibasrurmovies

Tags