ಸುದ್ದಿಗಳು

‘ರಂಗಸ್ಥಳಂ’ ಗಳಿಕೆಯನ್ನು ಮೀರಲಿದೆಯೇ ‘ವಿನಯ ವಿಧೇಯ ರಾಮ’…?

ಹೈದ್ರಾಬಾದ್, ಜ.13: ‘ವಿನಯ ವಿಧೇಯ ರಾಮ’… ತೆಲುಗು ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟ ಸಿನಿಮಾ ಎಂದೇ ಖ್ಯಾತಿ ಪಡೆದಿದೆ.  ಸಿನಿಮಾದ ಮೂಹೂರ್ತ ಆರಂಭವಾದಾಗಿನಿಂದ ಸುದ್ದಿಯಲ್ಲಿರುವ ‘ವಿನಯ ವಿಧೇಯ ರಾಮ’ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಸಿನಿಪಂಡಿತರು ಚಿತ್ರದ ಸೋಲು ಗೆಲುವಿನ ಕುರಿತಂತೆ ಲೆಕ್ಕಾಚಾರದಲ್ಲಿ ತೊಡಗಿದ್ದು, ಒಂದು ಮೂಲಗಳ ಪ್ರಕಾರ ಚಿತ್ರ ‘ರಂಗಸ್ಥಳಂ’ ಗಳಿಕೆಯನ್ನು ಕೂಡ ಮೀರಿಸಲಿದೆ ಎನ್ನಲಾಗುತ್ತಿದೆ.90 ಪ್ಲಸ್ ಕೋಟಿಗೆ ಮಾರಾಟವಾಯ್ತು ಥಿಯೇಟರ್ ರೈಟ್ಸ್

‘ವಿನಯ ವಿಧೇಯ ರಾಮ’ ದೇಶ ವಿದೇಶಗಳಲ್ಲೂ ತೆರೆ ಕಾಣುತ್ತಿದ್ದು, ಒಂದು ಮೂಲಗಳ ಪ್ರಕಾರ ಚಿತ್ರದ ಥಿಯೇಟರ್ ಹಕ್ಕು 90 + ಕೋಟಿಗೂ ಅಧಿಕ ರೂಪಾಯಿಗೆ ಮಾರಾಟವಾಗಿದೆಯಂತೆ. ಹೀಗಾಗಿ ‘ವಿನಯ ವಿಧೇಯ ರಾಮ’ ಜೌಟ್ ಆಂಡ್ ಜೌಟ್ ಮಾಸ್ ಸಿನಿಮಾವಾಗಿದೆ. ಅಂದಹಾಗೆ ರಾಮ್ ಚರಣ್ ತೇಜಾ ಅವರ ಅಭಿನಯದ ‘ರಂಗಸ್ಥಳಂ’ ಚಿತ್ರ ಕೂಡ ಈ ಹಿಂದೆ 90 + ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ 123 + ಕೋಟಿ ರೂಪಾಯಿ ಗಳಿಕೆ ಮಾಡಿ, ಚಿಂದಿಉಡಾಯಿಸಿತ್ತು.

ಇದೇ ರೀತಿ ‘ವಿನಯ ವಿಧೇಯ ರಾಮ’ ಕೂಡ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಲಿದೆ ಎಂಬ ಲೆಕ್ಕಾಚಾರ ಸಾಗಿದ್ದು. ಚಿತ್ರದ ಗೆಲುವು ಖಚಿತ ಎಂಬ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ಚಿತ್ರದ ನಿರ್ದೇಶಕ ಬೊಯಪತಿ ಶ್ರೀನು, ‘ವಿನಯ ವಿಧೇಯ ರಾಮ’ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಡೇಡಿಕೆಟೆಡ್ ಆಗಿದ್ದು, ಚಿತ್ರದ ಹಿರೋ ರಾಮ್ ಚರಣ್ ಗೆ ಕೇವಲ 2 ತಿಂಗಳ ಸಮಯಾವಾಕಾಶ ನೀಡಿ ದೇಹದ ಮೇಕ್ ಓವರ್ ಗೆ ಸೂಚಿಸಿದ್ದರಂತೆ. ರಾಮ್ ಚರಣ್ ಕೂಡ ಚಿತ್ರದಲ್ಲಿ 6 ಪ್ಯಾಕ್ ಪ್ರದರ್ಶಿಸಿದ್ದು, ದೇಹದಂಡಿಸಿ ಹೊಸಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ.‘ರಂಗಸ್ಥಳಂ’ ಹಾಗೂ ‘ವಿನಯ ವಿಧೇಯ ರಾಮ’ ಚಿತ್ರ ಸಂಪೂರ್ಣ ವಿಭಿನ್ನ ಕತೆಯನ್ನು ಒಳಗೊಂಡಿದ್ದು, ‘ರಂಗಸ್ಥಳಂ’ ನಲ್ಲಿ ಮೈ ತುಂಬಿಕೊಂಡಿದ್ದ ರಾಮ್ ಚರಣ್ ಇಲ್ಲಿ, ದೇಹದಾಡ್ಯತೆ ಪ್ರದರ್ಶಿಸಿದ್ದಾರೆ.  ಹೈವೋಲ್ಟೇಜ್ ಆಕ್ಷನ್ ದೃಶ್ಯಗಳು ಚಿತ್ರದಲ್ಲಿದ್ದು, ಈ  ಕುರಿತಂತೆ ಮಾತನಾಡಿದ್ದ ರಾಮ್ ಚರಣ್, ಈ ಹಿಂದೆ ನಾನು ಇಂತಹ ಆಕ್ಷನ್ ದೃಶ್ಯದಲ್ಲಿ ನಟಿಸಿಲ್ಲ,. ನೀವು ನೋಡಿರಲಿಕ್ಕಿಲ್ಲ. ಚಿತ್ರದ ಪ್ಲಸ್ ಪಾಯಿಂಟ್ ಈ ಆಕ್ಷನ್ ದೃಶ್ಯಗಳು ಎಂದಿದ್ದರು. ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಕೈರಾ ಅದ್ವಾನಿ ನಟಿಸಿದ್ದಾರೆ.

#kairaadvani #tollywood #ramcharan #vinayavidheyarama #telugumovies #balkaninews

Tags