ಸುದ್ದಿಗಳು

ವಿವಿ ಆರ್ ಚಿತ್ರಕ್ಕಾಗಿ ದೇಹದಂಡಿಸಿದ ರೀತಿಯನ್ನು ವಿವರಿಸಿದ ಚೆರ್ರಿ

ಹೈದ್ರಾಬಾದ್, ಜ.11: ಮೆಘಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಅಭಿನಯದ ‘ವಿನಯ ವಿಧೇಯ ರಾಮ’ ಸದ್ಯಕ್ಕೆ ಟಿ ಟೌನ್ ನಲ್ಲಿ ಟಾಕ್ ಆಫ್ ದಿ ಸಿನಿಮಾವಾಗಿದೆ. ಜನವರಿ 11ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಬಗ್ಗೆ ಜನ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿಸಿಕೊಂಡಿದ್ದು, ಇದಕ್ಕೆ ಕಾರಣ ರಾಮ್ ಚರಣ್ ಅವರ ಮೇಲಿನ ಭರವಸೆ. ‘ರಂಗಸ್ಥಳಂ’ ಚಿತ್ರದ ಬಳಿಕ ರಾಮ್ ಚರಣ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.

ಅಷ್ಟೇ ಅಲ್ಲದೆ ವಿವಿಆರ್ ಗಾಗಿ ರಾಮ್ ಚರಣ್ ಸಿಕ್ಕಾಪಟ್ಟೆ ದೇಹ ದಂಡಿಸಿದ್ದು, ಅವರ ದೇಹದಾಡ್ಯತೆ ನೋಡುಗರನ್ನು ಹುಚ್ಚೆಬ್ಬಿಸುತ್ತಿದೆ. ಇತ್ತೀಚೆಗಷ್ಟೇ ಅವರ ಪತ್ನಿ ರಾಮ್ ಚರಣ್ ಅವರು ಸೆಟ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ರಿಯಲ್ ಹಿರೋ ಎಂಬ ಕ್ಯಾಪ್ಶನ್ ನೀಡಿದ್ದು ಬಹಳಷ್ಟು ವೈರಲ್ ಆಗಿತ್ತು. ಅಂದಹಾಗೆ ಚಿತ್ರಕ್ಕಾಗಿ ರಾಮ್ ಚರಣ್ ಸಿಕ್ಕಾಪಟ್ಟೆ ಫಿಟ್ ಆಗಿದ್ದು ಅವರ 6 ಪ್ಯಾಕ್ ನೋಡುಗರಲ್ಲಿ ಹೊಟ್ಟೆಕಿಚ್ಚು ಉಂಟು ಮಾಡುತ್ತಿದೆಯಂತೆ.ಹೊಸ ಲುಕ್ ಹಿಂದಿನ ಪರಿಶ್ರಮದ ಬಗ್ಗೆ ರಾಮ್ ಚರಣ್ ಏನಂದ್ರು ಗೊತ್ತೆ..?

ರಾಮ್ ಚರಣ್ ಅವರ ತಮ್ಮ ಬಹುನಿರೀಕ್ಷಿತ ವಿವಿಆರ್ ಸಿನಿಮಾದ ಹಿಂದಿನ ಕಠಿಣ ಪರಿಶ್ರಮ, ಹೊಸ ಲುಕ್ ಗಾಗಿ ಪಟ್ಟ ಕಷ್ಟ, ನೋವುಗಳನ್ನು ಇದೀಗ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರೇಕ್ಷಕ ಇಟ್ಟ ನಿರೀಕ್ಷೆಯನ್ನು ನಿಜಮಾಡಬೇಕು ಎಂದರೆ ಒಬ್ಬ ನಟ ಎಷ್ಟೆಲ್ಲಾ ಪರಿಶ್ರಮ ಪಡಬೇಕು ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗುತ್ತಿದೆ. ತೆರೆ ಮೇಲೆ ಎಲ್ಲರಿಗೂ ಇಷ್ಟವಾಗುವ ತನ್ನ 6 ಪ್ಯಾಕ್ ಹಿಂದೆ ನನ್ನ ಡೇಡಿಕೇಷನ್ ಇದೆ ಎಂದಿರುವ ಅವರು, ‘ರಂಗಸ್ಥಳಂ’ ಚಿತ್ರದಲ್ಲಿ ನಾನು ದುಂಡಗೆ ಕಾಣಿಸಿಕೊಂಡಿದ್ದೆ. ಆದರೆ ‘ವಿನಯ ವಿಧೇಯ ರಾಮ’ ಇದಕ್ಕೆ ಸಂಪೂರ್ಣ ವಿಭಿನ್ನವಾಗಿದ್ದು, ನಿರ್ದೇಶಕ ಬೊಯಪತಿ ನನಗೆ ಕೇವಲ ಎರಡು ತಿಂಗಳು ಸಮಯಾವಕಾಶ ವನ್ನು ನೀಡಿ 6 ಪ್ಯಾಕ್ ಚಾಲೆಂಜ್ ನೀಡಿದ್ದರು.ಸಾಮಾನ್ಯವಾಗಿ ದೇಹ ಕಂಪ್ಲೀಟ್ ಮೇಕ್ ಓವರ್ ಆಗಲು 6 ತಿಂಗಳು ಬೇಕೆ ಬೇಕು. ಆದರೆ ಬೋಯಪತಿ ಅವರು ನೀಡಿದ ಸಮಯವನ್ನು ಚಾಲೆಂಜ್ ಆಗಿ ತೆಗೆದುಕೊಂಡ ನಾನು ದಿನಕ್ಕೆ 12 ಗಂಟೆಗಳ ಕಾಲ ಡಯೆಟ್ ಗೆ ಮೀಸಲಿಟ್ಟೆ. ಸಲಾಡ್, ನಟ್ಸ್, ಬ್ರೌನ್ ರೈಸ್, ಬಾದಾಮಿ ಹಾಲು, ಸೂಪ್, ಮೊಟ್ಟೆ, ಮೀನು ಮತ್ತು ತರಕಾರಿಗಳನ್ನು ಪ್ರತಿ ಮೂರು ಗಂಟೆಗೊಮ್ಮೆ ನಾನು ಸೇವಿಸುತ್ತಿದ್ದೆ. ಇದಾದ ಬಳಿಕ ದ್ರವಾಹಾರವನ್ನಷ್ಟೇ ತೆಗೆದುಕೊಳ್ಳುತ್ತಿದ್ದೆ. ದಿನದ ಮೂರು-ನಾಲ್ಕು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದೆ. ಕೈ , ಕಾಲು, ಎದೆ ಭಾಗಕ್ಕೆ , ಹೆಚ್ಚಿನ ವರ್ಕೌಟ್ ಅಗತ್ಯವಾಗಿತ್ತು. ಇದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಿದೆ. ಅಷ್ಟೇ ಅಲ್ಲ ಅತೀ ಹೆಚ್ಚು ನೀರು ಕುಡಿಯುತ್ತಿದೆ ಎಂದು ತಮ್ಮ ಡಯೆಟ್ ಸೂತ್ರವನ್ನು ಬಿಚ್ಚಿಟ್ಟಿದ್ದಾರೆ ಚೆರ್ರಿ.

ಇನ್ನೂ  ಅಜೆರ್ ಬೈಜಾನ್ ನಲ್ಲಿ 3-7 ಡಿಗ್ರಿ ಟೆಂಪರೇಚರ್ ನಲ್ಲಿ ಸಂಪೂರ್ಣ ಕೆಸರಿನಲ್ಲಿ ಶರ್ಟ್ ಇಲ್ಲದೆ ನಡೆದ ಶೂಟಿಂಗ್ ನನಗೆ ಸಿಕ್ಕಾಪಟ್ಟೆ ಚಾಲೆಂಜಿಗ್ ಆಗಿತ್ತು. ನಿರ್ದೇಶಕರು ನನಗೆ ಇಂತಹ ಅದ್ಬುತ ಅವಕಾಶವನ್ನು ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ ರಾಮ್ ಚರಣ್.#tollywood #vvr #vinayavidheyarama #vinayavidheyaramamovie2019 #ramcharan #balkaninews

Tags