ಸುದ್ದಿಗಳು

‘ನಮ್ಮೂರ ಮಂದಾರ ಹೂವೇ’ ಚಿತ್ರದ ಮಧುರ ನೆನಪುಗಳನ್ನು ಹಂಚಿಕೊಂಡ ವಿನಾಯಕ್ ಜೋಷಿ

ನಟ ವಿನಾಯಕ್ ಜೋಷಿ ಬಾಲನಟರಾಗಿ ‘ನಮ್ಮೂರ ಮಂದಾರ ಹೂವೇ’, ‘ಅಮೃತವರ್ಷಿಣಿ’, ‘ಲಾಲಿ’ , ‘ಸಿಂಹದ ಮರಿ’, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ‘ಅಪ್ಪು’, ‘ಕಂಠಿ’, ಚಿತ್ರ’, ‘ಗೋವಿಂದಯ ನಮಃ’, ‘ನನ್ನ ಕನಸಿನ ಹೂವೇ’ ಚಿತ್ರಗಳಲ್ಲಿ ನಟಿಸಿದ್ದಾರೆ.

ಅಂದ ಹಾಗೆ ವಿನಾಯಕ್ ಜೋಶಿಯವರು ‘ನಮ್ಮೂರ ಮಂದಾರ ಹೂವೆ’ ಚಿತ್ರದ ಕುರಿತಂತೆ ಒಂದು ಮಧುರ ನೆನಪನ್ನು ಹಂಚಿಕೊಂಡಿದ್ದಾರೆ. 1995 ರಲ್ಲಿ ಈ ಚಿತ್ರವು ಮುಹೂರ್ತವನ್ನು ಆಚರಿಸಿಕೊಂಡಿತ್ತು. ಈ ಚಿತ್ರಕ್ಕೆ ವರನಟ ಡಾ ರಾಜ್ ಕುಮಾರ್ ಕ್ಯಾಮರಾ ಚಾಲನೆ ಮಾಡಿದ್ದರು. ಈ ಚಿತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಚಿತ್ರದ ಕೆಲವು ವಿವರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.‘1995 ರಲ್ಲಿ ನಡೆದ ಘಟನೆಯಿದು. ಅಂದು ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಮುಹೂರ್ತ. ನನ್ನ ಜೀವನದ ಸಾದಾ ನೆನಪಿನಲ್ಲಿ ಇರುವ ದಿನ ಇದು. ಈ ಅವಕಾಶ ನೀಡಿದ್ದಕ್ಕೆ ಸುನೀಲ್ ಕುಮಾರ್ ದೇಸಾಯಿ ಹಾಗೂ ಜಯಶ್ರೀ ದೇವಿ ಮೇಡಮ್ ಗೆ ಧನ್ಯವಾದಗಳು. ನಾನು ಆಗ ಕೇವಲ 7 ವರ್ಷದ ಹುಡುಗನಾಗಿದ್ದೆ. ನಾನು ಈ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವುದೂ ಕೂಡ ತಿಳಿದಿರಲಿಲ್ಲ’ ಎಂದು ಘಟನೆಯ ಕುರಿತಂತೆ ಬರೆದುಕೊಂಡಿದ್ದಾರೆ.

ಇನ್ನು ‘ಅಪ್ಪು’ ಸಿನಿಮಾ ಮಾಡಿದಾಗ ತಮ್ಮ ಪಾತ್ರ ನೋಡಿ ಡಾ ರಾಜ್ ಕುಮಾರ್ ಮೆಚ್ಚಿಕೊಂಡು ಆಶೀರ್ವಾದ ಮಾಡಿದ್ದರು. ನಾನು ಅವರ ಜೊತೆಗೆ ಊಟ ಮಾಡಿದ್ದೇನೆ, ನಕ್ಕಿದ್ದೇನೆ, ಅವರೊಂದಿಗೆ ಸಮಯ ಕಳೆದಿದ್ದೇನೆ.’ ಎಂದು ಡಾ. ರಾಜ್ ಕುಮಾರೊಂದಿಗೆ ಕಳೆದ ಕ್ಷಣವನ್ನು ನೆನಪಿಸಿಕೊಂಡು, ಅವುಗಳನ್ನು ಹಂಚಿಕೊಂಡಿದ್ದಾರೆ.

ಅಂದ ಹಾಗೆ ‘ನಮ್ಮೂರ ಮಂದಾರ ಹೂವೇ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಹಾಗೂ ಪ್ರೇಮಾ ನಟಿಸಿದ್ದರು. ಹಾಗೆಯೇ ‘ಅಪ್ಪು’ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ನಾಯಕನಟರಾಗಿ ಚಿತ್ರರಂಗಕ್ಕೆ ಪರಿಚಿತರಾದರು.

ಬಾಲಿವುಡ್ ಕಿಂಗ್ ಖಾನ್ ಜೊತೆಯಾದ್ರಾ ನಿರ್ದೇಶಕ ರಾಜ್ಕುಮಾರ್ ಹಿರಾನಿ..!!?!!

#vinaykjoshi, #memroies, #balkaninews #vinaykjoshi, #memroies, #balkaninews #Appu,

Tags