ಸುದ್ದಿಗಳು

ಗಣೇಶ ಹಬ್ಬಕ್ಕೆ ಅನಂತು ವರ್ಸಸ್ ನುಸ್ರತ್ ಸಿನಿಮಾ ಟೀಸರ್

ವಿನಯ್ ವಕೀಲರ ಪಾತ್ರದಲ್ಲಿ ..

ಬೆಂಗಳೂರು,ಸೆ.10: ಸದ್ಯ ವಿನಯ್ ರಾಜಕುಮಾರ್ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ ‘ಅನಂತು ವರ್ಸಸ್ ನುಸ್ರತ್’ ಸಿನಿಮಾ ಟೀಸರ್ ಗಣೇಶ ಹಬ್ಬಕ್ಕೆ ಬಿಡಿಗಡೆಯಾಗಲಿದೆ.

ಗಣೇಶ ಹಬ್ಬಕ್ಕೆ

ಸದ್ಯ ವಿನಯ್ ರಾಜ್ ಕುಮಾರ್ ಈಗಾಗಲೇ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಅನಂತ ವರ್ಸಸ್ ನಸ್ರುತ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕವೇ ಸಾಕಷ್ಟು ಸುದ್ದಿಯಾಗಿರೋ ಈ ಸಿನಿಮಾದ ಟೀಸರ್ ಇನ್ನೇನು ಗಣೇಶ ಹಬ್ಬಕ್ಕೆ ರಿಲೀಸ್ ಆಗಲಿದೆ.

ಹೌದು, ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ಸುಧೀರ್ ಶಾನುಭೋಗ್ ನಿರ್ದೇಶನ ಮಾಡಿದ್ದಾರೆ.  ಈ ಸಿನಿಮಾದಲ್ಲಿ ವಿನಯ್ ವಕೀಲರ ಪಾತ್ರದಲ್ಲಿ ಕಾಣಿಸಿದ್ದಾರೆ. ಇನ್ನು ವಿನಯ್ ರಾಜ್ ಕುಮಾರ್ ಗೆ ನಾಯಕಿಯಾಗಿ ಲತಾ ಹೆಗಡೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಈ ಸಿನಿಮಾಕ್ಕೆ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದ್ದು, ಸುನದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.

ಸುಮಾರು ೧೦ ತಿಂಗಳಿಂದ ಸಿನಿಮಾ ಚಿತ್ರೀಕರಣ

ಸುಮಾರು ೧೦ ತಿಂಗಳಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಇನ್ನು ಫಸ್ಟ್ ಲುಕ್ ನಲ್ಲೇ ಬಿಳಿ ಪಂಚೆಯನ್ನುಟ್ಟು ಸೆಳೆದ ಈ ನಟ ಸದ್ಯ ಟೀಸರ್ ನಲ್ಲಿ ಮತ್ತಿನ್ನೇಗೆ ಕಾಣಿಸುತ್ತಾರೆ ಅನ್ನೋದು ಅಭಿಮಾನಿಗಳಲ್ಲಿನ ಕುತೂಹಲವನ್ನ ಹೆಚ್ಚು ಮಾಡಿದೆ‌.

 

Tags

Related Articles