ಸುದ್ದಿಗಳು

ವಿನಯ್ ರಾಜಕುಮಾರ್ ಚಿತ್ರಕ್ಕೆ ಏನಿದು ಮತ್ತೊಂದು ಸಂಕಟ.

‘ರನ್ ಆ್ಯಂಟನಿ’ ಚಿತ್ರದ ಸುದೀರ್ಘ ಗ್ಯಾಫ್ ನಂತರ ನಟ ವಿನಯ್ ರಾಜ್ಕುಮಾರ ಅವರು “ಅನಂತು ವರ್ಸಸ್ ನುಸ್ರತ್” ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವನ್ನು ಸುಧೀರ್ ಶಾನುಬೋಗ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಲತಾ ಹೆಗಡೆ ನಾಯಕಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಚಿತ್ರಕ್ಕೆ ಹೈಕೋರ್ಟ್ ಬಳಿಯಿರುವ ಗೃಂಥಾಲಯದ ಆವರಣದಲ್ಲಿ ನಟ ವಿನಯ್ ರಾಜ್ ಕುಮಾರ್ ಅವರ ಫೋಟೋಶೂಟ್ ಮಾಡಲಾಗಿತ್ತು. ಈ ಬಗ್ಗೆ ದೂರನ್ನು ಸಲ್ಲಿಸಲಾಗಿತ್ತು. ಆದರೆ ಇದೆಲ್ಲಾ ಬಗೆ ಹರಿದು ಚಿತ್ರದ ಚಿತ್ರೀಕರಣವೂ ಸುಗಮವಾಗಿ ಸಾಗುತ್ತಿತ್ತು. ಆದರೂ ಚಿತ್ರ ಇನ್ನು ತೆರೆ ಕಂಡಿಲ್ಲ. ಈ ಲೇಟ್ ಗೆ ಕಾರಣ ನಾಯಕಿ ಲತಾ ಹೆಗಡೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹೌದು, ನಟಿ ಲತಾ ಹೆಗಡೆ ಈ ಚಿತ್ರಕ್ಕಾಗಿ ಕಾಡಿಸಿದ್ದು ಜಾಸ್ತಿಯಂತೆ. ಮೊದಲು ಹೇಳಿದ್ದ ಶೆಡ್ಯೂಲ್ನಂತೆ ಚಿತ್ರೀಕರಣ ನಡೆಯುವಲ್ಲಿ ಚಿತ್ರ ತಂಡದ ಕಡೆಯಿಂದಲೇ ಸ್ವಲ್ಪ ತಡವಾಗಿತ್ತು. ಅದಾದ ನಂತರ ಪಕ್ಕಾ ನಟಿ ಲತಾ ನ್ಯೂಜಿಲ್ಯಾಂಡಿಗೆ ತೆರಳಿ ಬಿಟ್ಟರಂತೆ. ಅಲ್ಲಿಂದ ತಿರುಗಿ ಬರಲು ಅನೇಕ ಶರತ್ತುಗಳನ್ನು ಹಾಕಿದ್ದರಂತೆ. ಬೇರೆ ದಾರಿ ಕಾಣದ ನಿರ್ಮಾಪಕರು ಆಕೆ ಕೇಳಿದಂತೆ ಎಕ್ಸ್ಟ್ರಾ ಕಾಸನ್ನೂ ಕೊಡಲು ಒಪ್ಪಿಕೊಂಡಾಗ ಶೂಟಿಂಗ್ ಗೆ ಬಂದು ಭಾಗವಹಿಸಿದರಂತೆ.

ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿನಯ್ ರಾಜಕುಮಾರ್ ಗೆ ಜೊತೆಯಾಗಿ ಲತಾ ಹೆಗಡೆ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪರಿಚಿತರಾಗಿರುವ ನಟಿ ನಯನ ಕಾಣಿಸಿಕೊಂಡಿದ್ದಾರೆ. ನಯನಾ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಸಹದ್ಯೋಗಿ ಶಾಂತಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸುನಧ್ ಗೌತಮ್ ಸಂಗೀತ ಸಂಯೋಜಿಸುತ್ತಿದ್ದು ಅಭಿಶೇಕ್ ಕಾಸರಗೋಡ್ ಛಾಯಾಗ್ರಹಣವಿದೆ.

Tags

Related Articles

Leave a Reply

Your email address will not be published. Required fields are marked *