ಸುದ್ದಿಗಳು

ದರ್ಶನ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದ ‘ರಗಡ್’ ಚಿತ್ರತಂಡ

ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯ್ತು 'ರಗಡ್' ಚಿತ್ರದ ಹಾಡು

ಬೆಂಗಳೂರು, ಫೆ.16:

ಚಂದನವನದಲ್ಲಿ ಇಂದು ವಿಶೇಷವಾದ ದಿನ. ಏಕೆಂದರೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್  ಹುಟ್ಟುಹಬ್ಬ. ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬವೆಂದರೇ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ. ಹಾಗಾಗಿಯೇ ಇಂದು ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಸರಳ ರೀತಿಯಲ್ಲಿ ದಚ್ಚು ಜನ್ಮದಿನವನ್ನು ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ತಮ್ಮ ಸ್ನೇಹಿತನ ಹುಟ್ಟುಹಬ್ಬದ ಸಲುವಾಗಿ ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

ದರ್ಶನ್ ರವರ ಆಪ್ತ ಸ್ನೇಹಿತ ವಿನೋದ್ ಪ್ರಭಾಕರ್

ಹೌದು, ದರ್ಶನ್ ರವರ ಆಪ್ತ ಸ್ನೇಹಿತ ವಿನೋದ್ ಪ್ರಭಾಕರ್. ವಿನೋದ್ ಪ್ರಭಾಕರ್ ರವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ದರ್ಶನ್ ಕ್ಲಾಪ್ ಮಾಡುವುದು ಹಾಗೂ ಆ ಸಿನಿಮಾಗಳಲ್ಲಿ ಅಭಿನಯಸಿವುದು, ನನ್ನದೇ ಸಿನಿಮಾ ಎನ್ನುವಂತೆ ಬೆನ್ನುಲುಬಾಗಿರುತ್ತಾರೆ.  ಅಷ್ಟರ ಮಟ್ಟಿಗೆ ಇವರಿಬ್ಬರ ಸ್ನೇಹ ಹಿರಿದಾಗಿದೆ. ಇಂದು ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ  ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಚೈತ್ರಾ ರೆಡ್ಡಿ ಅಭಿನಯದ ‘ರಗಡ್’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

ನಟ ವಿನೋದ್ ಪ್ರಭಾಕರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ‌ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಅದರ ಸಾಲಿನಲ್ಲಿ ‘ರಗಡ್’ ಸಿನಿಮಾ ಕೂಡ ಒಂದು ಸೇರ್ಪಡೆಯಾಗಿದೆ. ಈಗಾಗಲೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಹಾಡೊಂದನ್ನು ಬಿಡುಗಡೆ ಮಾಡಿದೆ.

ಮಹೇಶ್ ಗೌಡ ನಿರ್ದೇಶನದ ಸಿನಿಮಾ

ಹೌದು, ಮಹೇಶ್‌ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ, ಅರುಣ್‌ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೂ ಸಿದ್ದವಾಗಿದೆ. ಏಯ್ಟ್‌ ಪ್ಯಾಕ್‌ ದೇಹವನ್ನು ಹೊತ್ತ ದೃಶ್ಯಾವಳಿ ಈ ಸಿನಿಮಾದಲ್ಲಿವೆ. ಇದೀಗ ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ‘ಬಾಹುಬಲಿ’ ಖ್ಯಾತಿಯ ಸಿಂಗರ್ ಸೋನಿ ಕಮಾಂಡೊರಿ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇದೊಂದು ಮೆಲೋಡಿ ಹಾಡಾಗಿದ್ದು, ಈ ಜೋಡಿಯನ್ನು ತೆರೆ ಮೇಲೆ ನೋಡಲು ತುಂಬಾ ಮುದ್ದು ಮುದ್ದಾಗಿ ಕಾಣಿಸುತ್ತಿದ್ದು, ಕೇಳುಗರಿಗೆ ಮತ್ತು ನೋಡುಗರಿಗೆ ಇನ್ನೊಮ್ಮೆ, ಮಗದೊಮ್ಮೆ ನೋಡುವಂತೆ ಮಾಡಿದೆ ಈ ಹಾಡು. ಅಷ್ಟರ ಮಟ್ಟಿಗೆ ಇವರಿಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ.

ಚಂದನವನದ ತಾರೆಯರಿಂದ ಮೆಚ್ಚುಗೆ ಪಡೆದ “ರಗಡ್” ಚಿತ್ರದ ರೊಮ್ಯಾಂಟಿಕ್ ಸಾಂಗ್

#sandalwood #kannadamovies #balkaninews #ragadkannadamovie #ragadmoviesongs #ragadmovieinvinodprabhakar #vinodprabhakarandchaithrareddy #darshanandvinodprabhakar #darshanbirthday

Tags

Related Articles