ಸುದ್ದಿಗಳು

ಕೊನೆಗೂ ಮಾಸ್ಟರ್ ಡ್ಯಾನ್ಸರ್ ವೇದಿಕೆಗೆ ಏರಿದ ವಿನೋದ್ ರಾಜ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರು ಆಗಿರುವ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಚಂದನ್ ಶೆಟ್ಟಿಇದ್ದರು. ಈಗಾಗಲೇ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ‘ನಾಟ್ಯ’ ಮಯೂರಿ ಹಾಗೂ ನಟಿ ಶೃತಿ ಹರಿಹರನ್ ತೀರ್ಪುಗಾರರ ಸ್ಥಾನ ತುಂಬಿದ್ದಾರೆ.

ಇವರಿಬ್ಬರ ಜೊತೆಗೆ ಚಂದನ್ ಶೆಟ್ಟಿ ಕೂಡ ಸಾಥ್ ನೀಡಿದ್ದರು. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿಮೇಲೆ ಕಿಡಿ ಕಾರಲಾಗಿತ್ತು. ಏಕೆಂದರೆ ಚಂದನ್ ಶೆಟ್ಟಿ ಗಾಯಕ. ಆದರೆ ಮಾಸ್ಟರ್ ಡ್ಯಾನ್ಸರ್ ಒಂದು ಡಾನ್ಸ್ ಕಾರ್ಯಕ್ರಮ .ಒಬ್ಬ ಗಾಯಕನಾಗಿ ಚಂದನ್ ಶೆಟ್ಟಿ ಯನ್ನು ಆ ಶೋ ಗೆ ಕರೆದಿದ್ದು ಸರಿಯಿಲ್ಲ, ವಿನೋದ್ ರಾಜ್ ಅವರು ನಿಮ್ಮ ಕಣ್ಣಿಗೆ ಬೀಳಲಿಲ್ಲವೇ ಎಂದು ತುಂಬಾ ಜನ ಹೇಳಿದ್ದರು.

ಇದೀಗ ಈ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ಈಗ ಇಬ್ಬರು ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಇದೀಗ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ಭಾಗಿಯಾಗಿದ್ದಾರೆ.ಈಗ ಅಂತಿಮವಾಗಿ ಈ ಕಾರ್ಯಕ್ರಮಕ್ಕೆ ವಿನೋದ್ ರಾಜ್ ಅವರನ್ನು ಕರೆ ತರುವಲ್ಲಿ ‘ಮಾಸ್ಟರ್ ಡ್ಯಾನ್ಸರ್’ ಟೀಮ್ ಯಶಸ್ವಿಯಾಗಿದ್ದು,ಕಾರ್ಯಕ್ರಮದ ಪೂರ್ಣ ತೀರ್ಪಗಾರರಾಗಿ ಮಾಡದಿದ್ದರೂ ಸಹ ಅತಿಥಿ ತೀರ್ಪುಗಾರನಾಗಿ ಮಾಡಿದೆ.

ವಿನೋದ್ ರಾಜ್ ಅವರ ಈ ವಿಶೇಷ ಸಂಚಿಕೆಯ ಪ್ರೋಮೋ ಕೂಡ ಹೊರ ಬಂದಿದ್ದು, ಕಾರ್ಯಕ್ರಮದಲ್ಲಿ ಅವರ ಫೇಮಸ್ ಹಾಡಾಗಿರುವ ‘ಅಮ್ಮ ಅಮ್ಮ..’ ಹಾಡಿಗೆ ನೃತ್ಯ ಮಾಡಲಾಗಿದೆ. ಅಂದಹಾಗೆ, ಈ ಸಂಚಿಕೆ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ ‘ರಾಕ್ ಅಂಡ್ ರೋಲ್’ ಕಾರ್ಯಕ್ರಮಕ್ಕೆ ವಿನೋದ್ ರಾಜ್ ತೀರ್ಪುಗಾರರಾಗಿದ್ದರು.

Tags

Related Articles

Leave a Reply

Your email address will not be published. Required fields are marked *