ಸುದ್ದಿಗಳು

ಮದುವೆಯಾಗಿ ಒಂದು ವರ್ಷ ಆಗುತ್ತಿದ್ದಂತೆ ವಿರುಷ್ಕಾ ದಂಪತಿ ವಿಡಿಯೋ ವೈರಲ್!!

ಮದುವೆಯ ಒಂದು ವರ್ಷದ ಸಿಹಿ ಕಹಿ ಅನುಭವ

ಮುಂಬೈ,ನ.21: ಬಾಲಿವುಡ್ ನ ಮುದ್ದಾದ ಜೋಡಿಗಳ ಪೈಕಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ.. 2017 ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಇನ್ನು ಮುಂದಿನ ತಿಂಗಳು ಬಂದರೆ ಅವರ ವಿವಾಹವಾಗಿ 1 ವರ್ಷವಾಗುತ್ತೆ.  ಮದುವೆಯ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಜೋಡಿ ಒಂದು ತಿಂಗಳ ಮೊದಲೇ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.  ಅದು ಹೇಗೆ ಅಂತೀರಾ?

ಜಾಹಿರಾತಿನಲ್ಲಿ ಕಾಣಿಸಿಕೊಂಡ ವಿರುಷ್ಕಾ!!

ಈ ಹಿಂದೆ ಜಾಹೀರಾತಿನ ಮೂಲಕವೇ ತಮ್ಮ ಪ್ರೀತಿಯನ್ನು ಅನಾವರಣಗೊಳಿಸಿದ್ದ ವಿರುಷ್ಕಾ ದಂಪತಿ, ಅದೇ ಶೈಲಿಯಲ್ಲಿಯೇ ಮದುವೆಯ ಒಂದು ವರ್ಷದ ಸಿಹಿ ಕಹಿ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ… ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ವಿರುಷ್ಕಾ ಮದುವೆ ಸೆಟ್ ನಲ್ಲಿ ನವಜೋಡಿಗೆ ಸಾಂಸರಿಕ ಸಲಹೆಗಳನ್ನು ನೀಡಿದ್ದಾರೆ.

ಈ ವಿಡಿಯೋವನ್ನು ಒಮ್ಮೆ ನೀವು ನೋಡಲೇಬೇಕು.. ಈ ಎಲ್ಲ ತರ್ಲೆ ಮಾಡುತ್ತಾ ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ವಿರಾಟ್, ಯಾವಾಗಲೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

Tags

Related Articles