ಸುದ್ದಿಗಳು

ಸೆನ್ಸಾರ್ ಮಂಡಳಿ ಮೆಚ್ಚಿಕೊಂಡ ‘ವಿಷ್ಣು ಸರ್ಕಲ್’ : ಚಿತ್ರಕ್ಕೆ ಸಿಕ್ತು ಯು/ಎ ಪ್ರಮಾಣ ಪತ್ರ

ಗುರುರಾಜ್ ಜಗ್ಗೇಶ್ ನಟಿಸಿರುವ ಸಿನಿಮಾ

ಬೆಂಗಳೂರು.ಏ.16: ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿರುವ ‘ವಿಷ್ಣು ಸರ್ಕಲ್’ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ನೋಡಿ, ಮೆಚ್ಚಿಕೊಂಡು ಚಿತ್ರಕ್ಕೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ.

‘ಗಿಲ್ಲಿ’, ‘ಗುರು’, ‘ಪೈಪೋಟಿ’, ‘ಸಂಕ್ರಾಂತಿ’, ‘ಮಾಸ್ ಲೀಡರ್’ ಚಿತ್ರಗಳ ನಂತರ ಗುರುರಾಜ್ ಇದೀಗ ‘ವಿಷ್ಣು ಸರ್ಕಲ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ವಿಷ್ಣು ಅಭಿಮಾನಿಯ ಕಥೆ ಇರುವ ಈ ಚಿತ್ರ ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ’ ಎನ್ನುವ ಟ್ಯಾಗ್ ಲೈನ್ ಹೊಂದಿದೆ.

ಈ ಚಿತ್ರವನ್ನು ಪ್ಯಾಲೇಸ್ ಬ್ಯಾನರ್ ಅಡಿಯಲ್ಲಿ ಆರ್.ಬಿ. ನಿರ್ಮಾಣ ಮಾಡಿದ್ದು, ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಲಕ್ಷ್ಮೀ ದಿನೇಶ್ ಅವರು. ಇವರು ಈ ಹಿಂದೆ ‘ಹಾಫ್ ಮೆಂಟಲ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಇನ್ನು ನಾಯಕ ಗುರುರಾಜ್ ರಿಗೆ ಜೋಡಿಯಾಗಿ ಸಂಹಿತಾ ವಿನ್ಯಾ ಹಾಗೂ ದಿವ್ಯಾ ಗೌಡ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಶ್ರೀವತ್ಸ ಅ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಪಿ.ಎಲ್.ರವಿ ಅವರಜನೆ ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ.

ಚಿತ್ರದಲ್ಲಿ ದತ್ತಣ್ಣ, ವಿ.ಮನೋಹರ್, ಬಿರಾದರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ, ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಂದಹಾಗೆ ಚಿತ್ರದ ಟೈಟಲ್ ಮತ್ತು ಅಡಿಬರಹ ನೋಡಿದ ಮೇಲೆ ಇದೊಂದು ವಿಷ್ಣುವರ್ಧನ್ ಅವರ ಅಭಿಮಾನಿಯ ಕುರಿಯ ಸಿನಿಮಾನಾ ಅನಿಸುತ್ತದೆ. ಆದರೆ ಈ ಬಗ್ಗೆ ತಿಳಿಯಲು ಚಿತ್ರ ಬಿಡುಗಡೆಯಾಗುವರೆಗೂ ಕಾಯಲೇಬೇಕು.

ಇದೊಂದು ಯೂಥ್ಸ್ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ಗುರುರಾಜ್ ಹೊಸ ಗೆಟೆಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಇದೊಂದು ಈಗಿನ ಟ್ರೆಂಡ್ ಗೆ ತಕ್ಕಂತ ಸಿನಿಮಾವಾಗಲಿದೆ ಎನ್ನುತ್ತದೆ ಚಿತ್ರತಂಡ.

ನನಗೆ ಸ್ಫರ್ಧೆ ಎಂದರೆ ತುಂಬಾ ಇಷ್ಟ : ಅನನ್ಯಾ ಪಾಂಡೆ

#vishnucirlce, #censar, #balkaninews #filmnews, #kannadasuddigalu

Tags