ಸುದ್ದಿಗಳು

ವಿನಯಾ ಪ್ರಕಾಶ್ ಗೆ ‘ಡಾ. ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿ

ಡಾ. ವಿಷ್ಣು ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ

ಬೆಂಗಳೂರು, ಸ.12: ಇದೇ ತಿಂಗಳ 18 ರಂದು ಹಿರಿಯ ನಟ ದಿ. ಡಾ. ವಿಷ್ಣುವರ್ಧನ್ ಅವರ 69 ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಡಾ. ಡಾ. ವಿಷ್ಣು ಸೇನಾ ಸಮಿತಿಯವರು ಸೆ.16 ರಿಂದ 18 ರವರೆಗೆ ಅಂದರೆ ಮೂರು ದಿನಗಳ ಕಾಲ ನಗರದಲ್ಲಿ  ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವವನ್ನು ಆಯೋಜಿಸಿದ್ದಾರೆ.

ಕಾರ್ಯಕ್ರಮಗಳು

ಈ ಕಾರ್ಯಕ್ರಮವನ್ನು ಸುದೀಪ್ ಉದ್ಘಾಟಿಸುವರು. ಈ ದಿನವನ್ನು ‘ರಾಷ್ಟ್ರೀಯ ಆದರ್ಶ ದಿನ’ ವನ್ನಾಗಿ ಆಚರಿಸಲು ಈ ಸಮಿತಿಯವರು ನಿರ್ಧರಿಸಿದ್ದು, ಈ ಕಾರ್ಯಕ್ರಮದ ಕೊನೆಯ ದಿನ ಅಂದರೆ ಸೆ.18 ರಂದು ಹಿರಿಯ ನಟಿ ವಿನಯಾ ಪ್ರಕಾಶ್ ಅವರಿಗೆ ‘ಡಾ. ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ನಟಿ ವಿನಯಾ ಪ್ರಕಾಶ್

ಪ್ರತಿವರ್ಷ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದು ಈ ಪ್ರಶಸ್ತಿಯನ್ನು ಕೆಲವು ಕಲಾವಿದರಿಗೆ ನೀಡಲಾಗುತ್ತದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ, ಸಚಿವರಾದ ಕೃಷ್ಣೇ ಭೈರೇ ಗೌಡ, ಡಾ. ಜಯಮಾಲಾ, ಹಾಗೂ ಶಾಸಕರಾದ ಸುರೇಶ್ ಕುಮಾರ್ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಬಹುಭಾಷಾ ನಟಿ

ಕನ್ನಡ ಸೇರಿದಂತೆ , ತೆಲುಗು, ತಮಿಳು, ತುಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ವಿನಯಾ ಪ್ರಕಾಶ್ ರವರು ಬಹು ಭಾಷಾ ನಟಿಯೆನಿಸಿಕೊಂಡರು.  1988 ರಲ್ಲಿ ಜಿ.ವಿ ಅಯ್ಯರ್ ನಿರ್ದೇಶನದ ‘ಮದ್ವಾಚಾರ್ಯ’ ಚಿತ್ರದಲ್ಲಿ ಪುಟ್ಟ ಪಾತ್ರವನ್ನು ಮಾಡುವುದರ ಮುಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಆನಂತರ ನಾಯಕಿಯಾಗಿ ‘ಗಣೇಶನ ಮದುವೆ’,’ನೀನು ನಕ್ಕರೆ ಹಾಲು ಸಕ್ಕರೆ’,’ಕರುಳಿನ ಕರೆ’,’ದುರ್ಗಾಪೂಜೆ’,’ದ್ರಾಕ್ಷಾಯಿಣಿ’,’ಯಾರಿಗೂ ಹೇಳ್ಬೇಡಿ’, ಹೀಗೆ ಸುಮಾರು ಚಿತ್ರಗಳಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ.

ಹೀಗೆ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ವಿನಯಾ ಪ್ರಕಾಶ್ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ, ‘ಡಾ. ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.

 

 

 

 

Tags