ಸುದ್ದಿಗಳು

‘ವಿಷ್ಣುದಾದ’ ಹುಟ್ಟುಹಬ್ಬಕ್ಕೆ ಬಂತು ಕಾಮನ್ ಡಿಪಿ

ಸೆಪ್ಟೆಂಬರ್ 18 ಬಂತು ಅಂದ್ರೆ ಸಾಕು ‘ಸಾಹಸಸಿಂಹ’ ಅಭಿಮಾನಿಗಳಿಗೆ ವಿಶೇಷ ದಿನ. ಅಭಿನಯದಲ್ಲಿ ಸರಿಸಾಟಿಯಿಲ್ಲದಂತೆ, ವ್ಯಕ್ತಿತ್ವದಲ್ಲಿ ಮೇರು ಮಟ್ಟ ತಲುಪಿ ಅಭಿಮಾನಿಗಳ ಆರಾಧ್ಯ ದೈವವಾಗಿ ಕನ್ನಡಿಗರ ಮನೆ, ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ.

ಸಾಹಸಸಿಂಹ ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 69ನೇ ಹುಟ್ಟುಹಬ್ಬವನ್ನು (ಸೆಪ್ಟೆಂಬರ್ 18, 2019) ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡು ಸಂಭ್ರಮಿಸುತ್ತಿದ್ದರು.

ಸಾಹಸಸಿಂಹ ವಿಷ್ಣು ವರ್ಧನ್ ಹುಟ್ಟುಹಬ್ಬದ ಅಂಗವಾಗಿ ಈಗ ಟ್ವಿಟರ್ ನಲ್ಲಿ #ವಿಷ್ಣುದಾದ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗ್ತಿದೆ. ಅಷ್ಟೇ ಅಲ್ಲದೆ ಕಾಮನ್ ಡಿಪಿ ಕೂಡ ಎಲ್ಲರ ಮೊಬೈಲ್ ಹಾಗೂ ಸೋಶಿಯಲ್ ಮಿಡಿಯಾಗಳಾದ ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ ನಲ್ಲಿ ರಾರಾಜಿಸುತ್ತಿದೆ.

ಅವರು ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ಬಿಟ್ಟರೆ ಈಗಲೂ ಅಷ್ಟೇ ಸಂಭ್ರಮ ಸಡಗರದಿಂದ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಾಂಗವಾಗಿ ನೆರವೇರುತ್ತಿದೆ.

ಬರ್ತಡೇ ಮುನ್ನವೇ ಟ್ವಿಟರ್ ನಲ್ಲಿ ಟ್ರೆಂಡ್ ಆದ ಡಿಬಾಸ್

#vishnuvardhanbirthday #vishnuvardhancommonDP #sahasasimha

Tags