ಸುದ್ದಿಗಳು

ಕತ್ತರಿ ಪ್ರಯೋಗದಲ್ಲಿ ವಿಶ್ವರೂಪಂ-2….!

ಬೆಂಗಳೂರು. ಆ.13: ಭಾರತೀಯ ಚಿತ್ರರಂಗದ ನಟ ಭಯಂಕರ ಕಮಲ್ ಹಾಸನ್.  ಇವರ ನಟನೆ ಹಾಗೂ ನಿರ್ದೇಶನದಲ್ಲಿ ನೂತನವಾಗಿ ‘ವಿಶ್ವರೂಪಂ-2’ ಚಿತ್ರ, ಹಿಂದಿ, ತೆಲಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದೆ.  ಈ ಚಿತ್ರ ಬಿಡುಗಡೆಗೂ ಮುನ್ನ ಪ್ರೇಕ್ಷಕ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೀಗ ನಿರೀಕ್ಷೆಗಳನ್ನು ಹುಸಿಗೊಳಿಸುವುದರ ಮೂಲಕ ಸಮಸ್ಯೆಯ ಸುಳಿಯಲ್ಲಿ ಈ ಚಿತ್ರ ಸಿಲುಕಿದೆ.

 ಸೆನ್ಸಾರ್ ಮಂಡಳಿ

ಅಸಲಿಗೆ ವಿಷಯ ಏನು ಗೊತ್ತಾ…? ಕಮಲ್ ಹಾಸನ್ ಅವರ ನಿರ್ದೇಶನದಲ್ಲಿ ಈ ಹಿಂದೆ ಯಾವುದೇ ಚಿತ್ರ ಸೆಟ್ಟೇರುತ್ತಿದ್ದರೂ, ಬಿಡುಗಡೆಗೂ ಮುನ್ನ ವಿವಾದಗಳನ್ನು ಸೃಷ್ಟಿಸಿಯೇ, ನಂತರ ತೆರೆ ಕಾಣುತ್ತಿದ್ದವು. ಆದರೇ ‘ವಿಶ್ವರೂಪಂ-2’ ಸಿನೆಮಾ ಮಾತ್ರ ಸಕಾರವಾಗಿ ಯಾವುದೇ ವಿವಾದಗಳಿಲ್ಲದೇ ಬೆಳ್ಳಿ ಪರದೆಗೆ ಅಪ್ಪಳಿಸಿದೆ. ಇದೀಗ ಚಿತ್ರದ ಕುರಿತಾಗಿ ಕೆಲ ಸನ್ನಿವೇಶಗಳಿಗೆ ಸೆನ್ಸಾರ್ ಮಂಳಿಯವರು ಕತ್ತರಿ ಹಾಕಿದ್ದಾರೆ.

ಕಿಸ್ಸಿಂಗ್ ಸೀನ್ ಗಳು

ಸಿನೆಮಾ ಕಥೆಗೆ ತಕ್ಕಂತೆ ಅದ್ಬುತವಾಗಿ ಮೂಡಿಬಂದಿದೆ. ಆದರೇ ಅನಾವಶ್ಯಕವಾಗಿ ಬೆಡ್ ರೂಂ ಸನ್ನಿವೇಶಗಳನ್ನು ತೋರಿಸಲಾಗಿದೆ. ಈ ಸನ್ನಿವೇಶಗಳಲ್ಲಿ ಕಿಸ್ಸಿಂಗ್ ಸೀನ್ ಗಳು ಯುವಕರನ್ನು  ಪ್ರಚೋಧಿಸುವಂತಿವೆ ಎಂದು ಕತ್ತರಿ ಪ್ರಯೋಗ ಮಾಡಿದ್ದಾರೆ. ಮತ್ತು ಮನುಷ್ಯರನ್ನು ಅಮಾನುಷವಾಗಿ ಕೊಲ್ಲುವ ಹಿಂಸಾತ್ಮಕ ಸನ್ನಿವೇಶಗಳಿಗೂ ಕೂಡ ಕತ್ತರಿ ಹಾಕಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಿಂದಿ ಚಿತ್ರದಲ್ಲಿ 12, ತಮಿಳು ಮತ್ತು ತೆಲುಗು ಚಿತ್ರದಲ್ಲಿ 22 ಸನ್ನಿವೇಶಗಳನ್ನು ತೆಗೆಯಲಾಗಿದೆ ಎಂದು ಸಿನಿಮೂಲಗಳು ತಿಳಿಸಿವೆ.

 

Tags

Related Articles