ಸುದ್ದಿಗಳು

‘ವಾಕಿಂಗ್ ಡೆಡ್’ ಚಿತ್ರದಲ್ಲಿ ನಟಿಸಲಿರುವ ಆಂಡ್ರ್ಯೂ ಲಿಂಕನ್

ಹಾಲಿವುಡ್ ಜನಪ್ರಿಯ ನಟ ಆಂಡ್ರ್ಯೂ ಲಿಂಕನ್

ನವೆಂಬರ್, 6: ಆಂಡ್ರ್ಯೂ ಲಿಂಕನ್ ಅವರು ‘ವಾಕಿಂಗ್ ಡೆಡ್’ ಚಿತ್ರದಲ್ಲಿ ರಿಕ್ ಗ್ರಿಮ್ಸ್ ಪಾತ್ರದಲ್ಲಿ ಮತ್ತೊಮ್ಮೆ ನಟಿಸುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಎಎಂಸಿ ಸ್ಟುಡಿಯೋಸ್ ನಿರ್ಮಿಸಿದ ಅನೇಕ ಚಿತ್ರಗಳಲ್ಲಿಹಾಗೂ ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.  ‘ವಾಕಿಂಗ್ ಡೆಡ್’ ಚಿತ್ರದ ಚಿತ್ರೀಕರಣದ ಕೊನೆಯ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇದಾದ ನಂತರದ ಅವಧಿಯಲ್ಲಿ ಈ ಬೆಳವಣಿಗೆಗಳಾಗಿದೆ ಎಂದು ಹೇಳಲಾಗುತ್ತದೆ.

ವಾಕಿಂಗ್ ಡೆಡ್’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಲಿಂಕನ್

ಎಎಂಸಿಯ ಟಿವಿ ಸರಣಿಗಳಿಗೆ ಹೋಲಿಕೆ ಮಾಡಿದರೆ, ಚಲನಚಿತ್ರ ದೊಡ್ಡದಾಗಿದೆ ಎಂದು ಎಎಂಸಿಯ ಮುಖ್ಯ ವಿಷಯ ಅಧಿಕಾರಿ ಸ್ಕಾಟ್ ಜಿಮ್ಮಲ್ ಹೇಳಿದರು. ರಿಕ್ ಗ್ರಿಮ್ಸ್ ಅವರ ಮೊದಲ ಚಿತ್ರದ ಕಥೆಯನ್ನು ಮುಂದುವರೆಸಲಾಗುತ್ತದೆ. ಈ ಚಿತ್ರವು  ಹಿಂದೆ ಕಾಣದ ಕೆಲ ಜಗತ್ತನ್ನು ಅನ್ವೇಷಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೇ, ಈ ಚಿತ್ರದ ಮೂಲಕ ವಿಭಿನ್ನ ಕಥೆ ಹೇಳುವ ಪ್ರಯತ್ನವನ್ನು ಗ್ರಿಮ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೇ 30ರಂದು, ಲಿಂಕನ್ ರಿಕ್ ಗ್ರೀಮ್ಸ್ ಪಾತ್ರ ತೊರೆಯಲಿದೆ ಎಂದು ಅಭಿಮಾನಿಗಳು ನಿರ್ಧರಿಸಿದ್ದರು. ಆದರೆ ಸೆಪ್ಟೆಂಬರ್ ನಲ್ಲಿ, ನಟ ತನ್ನ ಮನಸ್ಥಿತಿ ಬದಲಾಯಿಸಿಕೊಂಡರು. ಹಿಟ್ ಟಿವಿ ಸರಣಿಗೆ ಅವರು ನಟನಾಗಿ ಅಲ್ಲದೇ, ನಿರ್ದೇಶಕರಾಗಿ ವಾಪಸ್ ಬರುವುದಾಗಿ ಘೋಷಿಸಿದರು.

Tags

Related Articles