ಸುದ್ದಿಗಳು

ಘೋಲ್ ಯಶಸ್ಸು- ಹಾರರ್ ಸರಣಿಗಳಿಗೆ ಹೆಚ್ಚಿದ ಬೇಡಿಕೆ…

‘ದಿ ರಿಟರ್ನ್ಡ್ ವೆಬ್’ ಸರಣಿಯ ಕಥಾ ವಸ್ತು...

ವೆಬ್ ಸರಣಿಯಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ನೆಟ್ ಫ್ಲಿಕ್ಸ್, ಮತ್ತು ಅಮೆಜಾನ್ ಪ್ರೈಮ್…

ಮುಂಬೈ,ಆ.29: ಇದೀಗ ವೆಬ್ ಸರಣಿಗಳ ಯುಗ ಆರಂಭವಾಗಿದ್ದು, ವೆಬ್ ಸರಣಿಗಳು ಪ್ರೇಕ್ಷಕನಿಗೆ ರುಚಿಸಿದ ಹಿನ್ನೆಲೆಯಲ್ಲಿ, ವೆಬ್ ಸರಣಿಗಳ ಮೇಲೆ ಬಂಡವಾಳ ಹೂಡಲು ನಿರ್ಮಾಪಕರು ತಾ ಮುಂದು ನಾ ಮುಂದು ಎನ್ನುತ್ತಾರೆ. ಅದರಲ್ಲೂ ವೆಬ್ ಸರಣಿಯಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ನೆಟ್ ಫ್ಲಿಕ್ಸ್, ಮತ್ತು ಅಮೆಜಾನ್ ಪ್ರೈಮ್. ಈ ನಡುವೆ ವೆಬ್ ಸರಣಿಗಳಲ್ಲಿ ಘೋಲ್ ಮೂಲಕ ಹಾರರ್ ಸರಣಿಯೊಂದು ಪರಿಯವಾಗಿದ್ದು, ಜನರನ್ನು ಹೆದರಿಸುವಲ್ಲಿ ಹಾರರ್ ಚಿತ್ರ ಘೋಲ್ ಯಶಸ್ವಿಯಾಗಿದೆ.

ರಾಧಿಕಾ ಆಪ್ಟೆ ನಟನೆಯ ಘೋಲ್ ಯಶಸ್ವಿಯಾಗಿದ್ದೆ ತಡ, ಇದೀಗ ಮತ್ತಷ್ಟು ಹಾರರ್ ಸರಣಿಗಳನ್ನು ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ಈ ನಡುವೆ ಸದ್ಯಕ್ಕೆ ಗಮನ ಸೆಳೆಯುತ್ತಿರುವ ಹಾರರ್ ಚಿತ್ರಗಳಲ್ಲಿ ಪ್ರಮುಖವಾದವುಗಳ ವಿವರ ಇಲ್ಲಿದೆ..

 ದಿ ಎಕ್ಸಾರ್ಸಿಸ್ಟ್

‘ದಿ ಎಕ್ಸಾರ್ಸಿಸ್ಟ್’ ಶೀರ್ಷಿಕೆಯ ಸಿನಿಮಾವೊಂದು ತೆರೆಕಂಡಿತ್ತು. ಈ ಸಿನಿಮಾದ ಮುಂದುವರೆದ ಭಾಗದಂತಿರುವ ಈ ಸರಣಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸರಣಿಯ ನಿರೂಪಣಾ ಶೈಲಿ, ಚಿತ್ರೀಕರಣ ನಡೆದ ಸ್ಥಳ ಪ್ರೇಕ್ಷಕನ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ.

 ಪೆನ್ನಿ ಡ್ರೆಡ್ಫುಲ್

19ನೇ ಶತಮಾನದಲ್ಲಿ ಲಂಡನ್ ನಲ್ಲಿ ನಡೆಯುವ ಕಥೆಯೇ  ‘ಪೆನ್ನಿ ಡ್ರೆಡ್ ಫುಲ್’. ವೆಬ್ ಸರಣಿಯ ಮೇಕಿಂಗ್ ಈಗಾಗಲೇ ಗಮನ ಸೆಳೆದಿದ್ದು, ಅದ್ಬುತ  ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಮೂರು ಸೀಸನ್‌ ಗಳಲ್ಲಿ ಐದು ಪ್ರಮುಖ ಪಾತ್ರಗಳಿವೆ. ನೆಟ್‌ಫ್ಲಿಕ್ಸ್‌ ಮತ್ತು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಪೆನ್ನಿ ಡ್ರೆಡ್‌ಫುಲ್‌ ನೋಡಬಹುದಾಗಿದೆ..

 ಅಮೆರಿಕನ್ ಹಾರರ್ಸ್ಟೋರಿ

ರಿಯಾನ್ ಮರ್ಫಿ ನಿರ್ದೇಶನದ ‘ಅಮೆರಿಕನ್‌ ಹಾರರ್ ಸ್ಟೋರಿ’ ಅತ್ಯಂತ ಭಯಾನಕವಾದ ಕತೆಯನ್ನು ಹೊಂದಿದ್ದು, ನೋಡುಗರನ್ನು ನಿಜವಾಗಿಯೇ ಹೆದರಿಸುವಲ್ಲಿ ಯಶಸ್ವಿಯಾಗಲಿದೆ. ಇದರ ಪ್ರತಿ ಸರಣಿಯಲ್ಲೂ ಹೊಸದಾದ ಕತೆಯೇ ಇರುವುದರಿಂದ, ಪ್ರೇಕ್ಷಕನಿಗೆ ಇಷ್ಟವಾಗಿದೆ.

ದಿ ರಿಟರ್ನ್ಡ್

ಸತ್ತ ವ್ಯಕ್ತಿಯೊಬ್ಬ ಮರಳಿ ಬಂದಾಗ ಏನಾಗುತ್ತದೆ. ಮನೆ ಮಂದಿ ಎದುರಿಸಬೇಕಾದ ಸಂಕಷ್ಟಗಳು ಎಂಥಾಹದ್ದು ಎಂಬುದನ್ನು’ ದಿ ರಿಟರ್ನ್ಡ್ ವೆಬ್’ ಸರಣಿಯ ಕಥಾ ವಸ್ತು.

Image result for the returns

ಬೇಟ್ಸ್ಮೋಟೆಲ್

ಆಲ್ಫ್ರೆಡ್‌ ಹಿಚ್‌ ಕಾಕ್‌ ನಿರ್ದೇಶನದಲ್ಲಿ ಬೇಟ್ಸ್ ಮೋಟೆಲ್ ಮೂಡಿಬರುತ್ತಿದೆ. ದ್ವಿವ್ಯಕ್ತಿತ್ವದ ವ್ಯಕ್ತಿಯ ಪಾತ್ರ ಇಲ್ಲಿ ಪ್ರಮುಖವಾದರೆ, ಭೂತ-ಪ್ರೇತಾತ್ಮಗಳು ಇಲ್ಲಿ ನಮ್ಮೊಳಗಿರನ ರಾಕ್ಷಸ ಗುಣಗಳು ಹೇಗೆ ನಮ್ಮನ್ನು ಹೆದರಿಸುತ್ತದೆ ಎಂಬುದನ್ನು ‘ಬೇಟ್ಸ್ ಮೋಟೆಲ್’ ತೋರಿಸಿಕೊಟ್ಟಿದೆ.

Tags