ಸುದ್ದಿಗಳು

ಡಿ.ಟಿ.ಎಸ್ ಕಾರ್ಯದಲ್ಲಿ ಹೊಸಬರ ‘ವೀಕೆಂಡ್’

ಗಾಂಧಿನಗರಕ್ಕೆ ಮತ್ತೊಂದು ಹೊಸಬರ ಸಿನಿಮಾ

ಬೆಂಗಳೂರು.ಫೆ.14

ವೀಕೆಂಡ್ ಎಂದರೆ ಕೆಲವರಿಗೆ ರಜಾ. ಅಂತವರು ಮಜಾ ಮಸ್ತಿ ಅಂತ ಕಾಲ ಕಳೆಯುತ್ತಾರೆ. ಅಂತವರ ಕುರಿತಂತೆ ಚಂದನವನದಲ್ಲೊಂದು ಸಿನಿಮಾ ಶುರುವಾಗಿದೆ. ಚಿತ್ರದ ಹೆಸರು ‘ವೀಕೆಂಡ್’.

ಚಿತ್ರದ ಬಗ್ಗೆ

ನವ ಪ್ರತಿಭೆಗಳಾದ ಮಿಲಿಂದ್ ಹಾಗೂ ಸಂಜನಾ ಬುರ್ಲಿ ‘ವೀಕೆಂಡ್’ ಚಿತ್ರಕ್ಕೆ ನಾಯಕ-ನಾಯಕಿಯರಾಗಿದ್ದು, ಶೃಂಗೇರಿ ಸುರೇಶ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಚಿತ್ರದ ಡಿ.ಟಿ.ಎಸ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲಿಯೇ ಪ್ರಥಮ್ ಪ್ರತಿ ಹೊರ ಬರಲಿದೆ.

ಹೊಸಬರ ತಂಡ

ಬಹುತೇಕ ಹೊಸಬರೇ ತುಂಬಿಕೊಂಡಿರುವ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಉಳಿದಂತೆ ಗೋಪಿನಾಥ್ ಭಟ್, ಅವಿನಾಶ್, ನಾಗಭೂಷಣ್, ನೀನಾಸಂ ರಘು ಮುಂತಾದವರು ಬಣ್ಣ ಹಚ್ಚಲಿದ್ದಾರೆ.

“ ಚಿತ್ರದಲ್ಲಿ ನಾನು ನಾಯಕನ ಅಜ್ಜನ ಪಾತ್ರ ಮಾಡುತ್ತಿದ್ದೇನೆ. ಪ್ರಸ್ತುತ ಟೆಕ್ಕಿಗಳ ಲೈಫ್ ಸ್ಟೈಲ್ ಹೇಗಿದೆ. ವಾರದ ಕೊನೆಯಲ್ಲಿ ಅವರು ಹೇಗೆ ಮೋಜು ಮಾಸ್ತಿ ಮಾಡುತ್ತಾರೆ ಎಂಬುದು ಈ ಚಿತ್ರದ ಒನ್ ಲೈನ್ ಸ್ಟೋರಿ” ಎಂದು ಅನಂತ್ ನಾಗ್ ಹೇಳುತ್ತಾರೆ.

ಈ ವೀಕೆಂಡ್ ಮಸ್ತಿಗೆ ತನ್ನ ಮೊಮ್ಮಗ ಅಟ್ರ್ಯಾಕ್ಟ್ ಆಗದ ಹಾಗೆ ತಾತ (ಅನಂತ್ ನಾಗ್ ) ಹೇಗೆ ನೋಡಿಕೊಳ್ಳುತ್ತಾನೆ. ರಾಯಲ್ ಲೈಫ್ ಲೀಡ್ ಮಾಡುವ ಟೆಕ್ಕಿಗಳು ಆಕಸ್ಮಾತಾಗಿ ಕೆಲಸ ಕಳೆದು ಕೊಂಡರೆ ಹಣಕ್ಕಾಗಿ ಯಾವ ರೀತಿ ಪರಿತಪಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ

ಚಿತ್ರದಲ್ಲಿ ಒಂದು ಫೈಟ್ ಮತ್ತು ಚೇಸಿಂಗ್ ದೃಶ್ಯ ಚಿತ್ರದ ಹೈಲೈಟ್ ಆಗಿದ್ದು, ಚಿತ್ರವನ್ನು ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮನೋಜ್ ಸಂಗೀತ ನೀಡಿದ್ದಾರೆ. ಮಂಜುನಾಥ್ ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪ್ರೇಮಲೋಕದ ರಣಧೀರನಿಗೆ ಇವತ್ತು ಡಬಲ್ ಸಂಭ್ರಮ

#weekend, #balkaninews #filmnews, #kannadasuddigalu #ananthanaga

Tags