ಸುದ್ದಿಗಳು

‘ವೀಕೆಂಡ್’: ಬರೀ ಮೋಜು ಮಸ್ತಿಯೊಂದಿಗೆ ಇಲ್ಲಿದೆ ಬದುಕಿನ ಪಾಠ!

ಬೆಂಗಳೂರು, ಮೇ.23:

ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸಿರೋ ಚಿತ್ರ ವೀಕೆಂಡ್. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ರಸಪಾಕದಂತೆ ರೂಪುಗೊಂಡಿರೋ ಈ ಚಿತ್ರ ಯುವ ಸಮುದಾಯದ ಮನೋಭೂಮಿಕೆಯ ಬೇಸಿನ ರಸವತ್ತಾದ ಕಥಾ ಹಂದರವನ್ನು ಹೊಂದಿದೆ. ನಾನಾ ಥರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿರುವ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಡಿ ಮಂಜುನಾಥ್ ನಿರ್ಮಾಣ ಮಾಡಿರೋ ವೀಕೆಂಡ್ ಸಮ್ಮೋಹಕವಾದ ಕಥಾ ಹಂದರವನ್ನೊಳಗೊಂಡಿದೆ. ವೀಕೆಂಡ್ ಎಂಬ ಶಬ್ಧ ಕಿವಿ ಸೋಕುತ್ತಲೇ ಯುವ ಆವೇಗ, ಹುಮ್ಮಸ್ಸಿನ ಚಿತ್ರಗಳು ಕಣ್ಮುಂದೆ ಬರುತ್ತವೆ. ಹಾಗಾದರೆ ಈ ವೀಕೆಂಡ್ ಚಿತ್ರದಲ್ಲಿ ಬರೀ ಅಂಥಾ ಕಥಾ ಹಂದರ ಮಾತ್ರವೇ ಇದೆಯಾ ಅಂತ ನೋಡ ಹೋದರೆ ರೋಚಕವಾದ ಒಂದಷ್ಟು ಸಂಗತಿಗಳು ಜಾಹೀರಾಗುತ್ತವೆ.

ವೀಕೆಂಡ್ ಮಸ್ತಿ ಅತಿಯಾದರೆ ಅನಾರೋಗ್ಯಕರವಾದ ಬೆಳವಣಿಗೆಗಳೂ ಸಂಭವಿಸುತ್ತವೆ. ಇದರೊಂದಿಗೆ ಆರ್ಥಿಕ ಸಂಕಷ್ಟವೂ ಜೊತೆಯಾದರೆ ಪರಿಸ್ಥಿತಿ ಪ್ರತಿಕೂಲವಾಗುತ್ತೆ. ಪಕ್ಕಾ ಕಮರ್ಶಿಯಲ್ ಜಾಡಿನ ಈ ಸಿನಿಮಾದಲ್ಲಿ ಬದುಕಿನ ಪಾಠಗಳೂ ಇವೆ. ಯುವ ಸಮೂಹಕ್ಕೊಂದು ಮೌಲ್ಯಯುತವಾದ ಸಂದೇಶವೂ ಇದೆ. ಅದೆಲ್ಲವನ್ನೂ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಮೂಲಕ ಹೇಳಲಾಗಿದೆಯಂತೆ.

 

ಚುನಾವಣೆ ಕಾವು ಒಂದೆಡೆಯಾದರೆ ಮತ್ತೊಂದೆಡೆ ‘ಮಿಟೂ’,ಈ ನಟಿಗೂ ಖ್ಯಾತ ನಟನಿಂದ ಲೈಂಗಿಕ ಕಿರುಕುಳ!!

#balkaninews #weekendmovie #weekendkannadamovie #anantnagmovies #sanjanaburli

 

Tags