ಸುದ್ದಿಗಳು

ಅನಂತ್ ನಾಗ್ ರನ್ನೇ ಮೆಚ್ಚಿಸಿದ ‘ವೀಕೆಂಡ್’ ಖದರ್!

ಬೆಂಗಳೂರು, ಮೇ.22:

ಹಿರಿಯ ನಟ ಅನಂತ್ ನಾಗ್ ಅವರು ಒಂದು ಸಿನಿಮಾದಲ್ಲಿ ನಟಿಸಲು ಅವರದ್ದೇ ಆದ ಕೆಲವೊಂದು ರೀತಿ ರಿವಾಜುಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ಕೇವಲ ತಮ್ಮ ಪಾತ್ರವನ್ನು ಮಾತ್ರ ನೋಡೋದಿಲ್ಲ. ಬದಲಾಗಿ ಇಡೀ ಚಿತ್ರದ ಕಥೆಯನ್ನು, ಪಾತ್ರಗಳನ್ನು ಪರಿಶೀಲಿಸಿದ ನಂತರವಷ್ಟೇ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಇಷ್ಟೆಲ್ಲ ಆಗಿ ಅವರು ಒಪ್ಪಿಕೊಂಡರೇನೇ ಕಥೆ ಚೆನ್ನಾಗಿದೆ ಅಂತರ್ಥ. ಅವರೇ ಕಥೆಯನ್ನು ಮೆಚ್ಚಿಕೊಳ್ಳುತ್ತಾರೆಂದರೆ ಅದು ಆ ಸಿನಿಮಾದ ಯಶಸ್ಸಿನ ಸ್ಪಷ್ಟವಾದ ಮುನ್ಸೂಚನೆ ಅನ್ನೋದರಲ್ಲಿ ಯಾವ ಡೌಟೂ ಇಲ್ಲ!

ಸದ್ಯ ಈ ವಾರವೇ ಬಿಡುಗಡೆಯಾಗಲಿರೋ ವೀಕೆಂಡ್ ಚಿತ್ರವನ್ನೂ ಕೂಡಾ ಅನಂತ್ ನಾಗ್ ಅವರು ಆರಂಭಿಕವಾಗಿಯೇ ಮೆಚ್ಚಿಕೊಂಡಿದ್ದರಂತೆ. ಅಂಥಾ ಮೆಚ್ಚುಗೆಯೊಂದಿಗೇ ಈ ಸಿನಿಮಾದಲ್ಲವರು ನಟಿಸಲು ಒಪ್ಪಿಕೊಂಡು ಇಡೀ ಚಿತ್ರವನ್ನು ಜೊತೆಗಿದ್ದು ಪೊರೆದಿದ್ದಾರೆ.

ಶೃಂಗೇರಿ ಸುರೇಶ್ ಬಹಳಷ್ಟು ವರ್ಷಗಳಿಂದಲೂ ಅನಂತ್ ನಾಗ್ ಅವರಿಗೆ ಪರಿಚಿತರು. ಅನಂತ್ ಸುರೇಶ್ ರ ಕಾರ್ಯವೈಖರಿಯನ್ನು ಹತ್ತಾರು ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಆದ್ದರಿಂದಲೇ ಈ ಚಿತ್ರದ ಬಗ್ಗೆಯೂ ಆರಂಭದಲ್ಲಿಯೇ ಅವರು ಗಾಢವಾದ ಭರವಸೆಯನ್ನೇ ಹೊಂದಿದ್ದರು. ಚಿತ್ರೀಕರಣ ಮುಕ್ತಾಯವಾದ ದಿನ ಸುರೇಶ್ ಅವರನ್ನು ಹತ್ತಿರ ಕರೆದು ಸ್ಕ್ರಿಫ್ಟ್ ಗಿಂತಲೂ ಸಿನಿಮಾ ಚೆನ್ನಾಗಿ ಮಾಡಿದ್ದೀರೆಂಬ ಮೆಚ್ಚುಗೆಯನ್ನೂ ಅನಂತ್ ನಾಗ್ ಸೂಚಿಸಿದ್ದರಂತೆ.

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಡಿ ಮಂಜುನಾಥ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಕಾಫಿ ಪುಡಿ ಸ್ಕ್ರಬ್ ಕೇಳಿದ್ದೀರಾ..? 

#balkaninews #weekendkannadamovie #weekendmovietrailer #weekendmovieteaser #weekendmovieinanantnag

 

Tags