ಸುದ್ದಿಗಳು

‘ವೀಕೆಂಡ್ ವಿತ್ ರಮೇಶ್ 4’ – ಈ ವಾರದ ಅತಿಥಿ ಯಾರು ಅಂತ ಗೊತ್ತಾಯ್ತಾ?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರದ ಸಾಧಕರು ಯಾರು ಇರಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಹೌದು, ಈ ವಾರದ ಸಾಧಕರ ಭಾವಚಿತ್ರವನ್ನು ಬಿಡುಗಡೆ ಮಾಡಿರುವ ಜೀ ಕನ್ನಡ ವಾಹಿನಿ, ಮುಖವನ್ನು ಬ್ಲರ್ ಮಾಡಿ ‘ಈ ವಾರದ ಸಾಧಕ ಯಾರೆಂದು ಗುರುತಿಸಿ’ ಎಂದು ಕೇಳಿದ್ದಾರೆ.

ಆದರೆ ಬಹುತೇಕರಿಗೆ ಆ ಭಾವಚಿತ್ರ ಯಾರದ್ದು ಎಂಬುದು ಗೊತ್ತಾಗಿದೆ. ಹೌದು, ಖ್ಯಾತ ಹಾಸ್ಯ ನಟ ಶರಣ್ ಅವರು ಈ ವಾರ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

Image result for ವೀಕೆಂಡ್ ಸಾಧಕರ ಸೀಟಿನಲ್ಲಿ ಈ ವಾರ ಕನ್ನಡದ ಖ್ಯಾತ ನಟ

ಈಗಾಗಲೇ ಶರಣ್ ಅವರ ಎಪಿಸೋಡ್ ರೆಕಾರ್ಡ್ ಮುಗಿದಿದ್ದು, ಶರಣ್ ಸಂಚಿಕೆಯ ರೆಕಾರ್ಡಿಂಗ್‌ ದಿನದ ಕೆಲವು ಫೋಟೋಗಳು ಕೂಡ ಬಹಿರಂಗವಾಗಿತ್ತು. ಶರಣ್ ಮಕ್ಕಳು, ಸಹೋದರಿ ಶ್ರುತಿ ಮಗಳು ಸೇರಿದಂತೆ ಹಲವರು ಈ ಶೋನಲ್ಲಿ ಭಾಗವಹಿಸಿದ್ದರು.

ಚಿತ್ರರಂಗದಲ್ಲಿ ಸುಮಾರು 24ವರ್ಷಗಳಿಂದ ನಿರಂತರ ಕಲಾಸೇವೆ ಮಾಡಿಕೊಂಡು ಬಂದಿರುವ ಶರಣ್ ಅವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಅನೇಕರು ಕಾಯುತ್ತಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಕಲಾವಿದನಾಗಿ, ಕಾಮಿಡಿ ನಟನಾಗಿ ಕಾಣಿಸಿಕೊಂಡಿರುವ ಶರಣ್ ‘ರಾಂಬೊ’ ಚಿತ್ರದಿಂದ ನಾಯಕನಾಗಿ ಮಿಂಚುತ್ತಿದ್ದು, ‘ವೀಕೆಂಡ್ ವಿತ್ ರಮೇಶ್’ ಸಾಧಕರ ಕುರ್ಚಿಯಲ್ಲಿ ಕುಳಿತು ಮತ್ತಷ್ಟು ವಿಚಾರಗಳನ್ನು, ಸಿಹಿ ಕಹಿ ಅನುಭವನ್ನುಗಳನ್ನು ಹಂಚಿಕೊಳ್ಳಲಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲಂಕರಿಸಿದ ಕಾಮಿಡಿ ಕಿಂಗ್ ಶರಣ್

 

#balkaninews #weekendwithramesh4 #sharan #comedyactor #ztvkannada #sharannstagram #sharantwitter

Tags