ಸುದ್ದಿಗಳು

ವೀಕೆಂಡ್ ವಿತ್ ರಮೇಶ್: ಈ ವಾರದ ಸಾಧಕನ ಕಂಡು ವೀಕ್ಷಕರಿಗೆ ಬೇಸರವಾಗಿದ್ದೇಕೆ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್‍ ರಮೇಶ್. ಈ ಕಾರ್ಯಕ್ರಮದ ಬಗ್ಗೆ ಇದೀಗ ವೀಕ್ಷಕರು ಬೇಸರವ್ಯಕ್ತಪಡಿಸಿದ್ದಾರೆ. ಯಾಕೆ ಅಂಥದ್ದೇನಾಯಿತು ಅಂತೀರಾ?

ವೀಕ್ಷಕರು ವೀಕೆಂಡ್ ವಿತ್‍ ರಮೇಶ್ ಪ್ರಾರಂಭವಾದಾಗಿನಿಂದ ಇದು ಸ್ಯಾಂಡಲ್ ವುಡ್ ಸ್ಟಾರ್ ಗಳದ್ದೇ ಕಾರ್ಯಕ್ರಮವಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದ್ದರು. ಆದರೂ ವಾಹಿನಿ ಮತ್ತೆ ಮತ್ತೆ ಸಿನಿಮಾ ನಟರನ್ನೇ ಕರೆಸಿಕೊಳ್ಳುತ್ತಿದೆ.

ಈ ವಾರದ ಸಾಧಕನಾಗಿ ಶರಣ್ ಅವರನ್ನು ಸಾಧಕರ ಸೀಟ್ ಗೆ ಕರೆಸಿರುವುದು ನೋಡಿ ವೀಕ್ಷಕರು ಸಿಡಿಮಿಡಿಗೊಂಡಿದ್ದಾರೆ.

Image result for week end with ramesh sharan

“ನಟರು ಯಾವುದೇ ಕಾರಣಕ್ಕೂ ಸಾಧಕರು ಆಗುವುದಿಲ್ಲ.  ಸೈನಿಕರನ್ನು ಕರೆದುಕೊಂಡು ಬನ್ನಿ ಅಲ್ಲಿವರೆಗೊ ನಿಮ್ಮ ಪ್ರೋಗ್ರಾಂ  ನೋಡುವುದಿಲ್ಲ,  ವೀಕೆಂಡ್ ವಿತ್‍ ರಮೇಶ್ ಟೈಟಲ್ ಚೇಂಜ್ ಮಾಡಿ, ವೀಕೆಂಡ್ ವಿಥ್ ಸಿನಿ ಆರ್ಟಿಸ್ಟ್ ಅಂಥ ಮಾಡಿ” ಎಂದು ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲದೇ, ಹಲವು ಸಾಹಿತಿಗಳು, ಕ್ರೀಡಾ ಸಾಧಕರು ಮತ್ತು ಸೈನಿಕರ ಹೆಸರನ್ನು ಪಟ್ಟಿ ಮಾಡಿ ಇವರನ್ನೆಲ್ಲಾ ಕರೆಸಿ ಎಂದು ಫೇಸ್ ಬುಕ್ ನಲ್ಲಿ ತಾಕೀತು ಮಾಡಿದ್ದಾರೆ.

‘ವೀಕೆಂಡ್ ವಿತ್ ರಮೇಶ್ 4’ – ಈ ವಾರದ ಅತಿಥಿ ಯಾರು ಅಂತ ಗೊತ್ತಾಯ್ತಾ?

#balkaninews #weekendwithramesh #viewers #specialguest#sharan #sharanmovies

Tags