ಸುದ್ದಿಗಳು

ಸಾಧಕರ ಸೀಟ್ ಅಲಂಕರಿಸಿದ ನಟ, ನಿರ್ದೇಶಕ ಟಿ ಎಸ್ ನಾಗಾಭರಣ

ಬೆಂಗಳೂರು, ಮೇ.25:

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್. ಕಳೆದ ಮೂರು ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು, ಇತ್ತೀಚೆಗಷ್ಟೇ ಸೀಸನ್ 4ರನ್ನು ಶುರು ಮಾಡಿದ್ದರು. ಈ ಸೀಸನ್ ಕೂಡ ಬಹಳಷ್ಟು ಯಶಸ್ಸನ್ನು ಗಳಿಸಿ ಮುಂದುವರೆಯುತ್ತಿದೆ. ಇದೀಗ ಹೊಸ ವಿಷಯವೇನೆಂದರೆ, ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಸಾಧಕರ ಸೀಟ್ ಗೆ  ನಟ, ನಿರ್ದೇಶಕ, ನಿರ್ಮಾಪಕ ಟಿ ಎಸ್ ನಾಗಾಭರಣ ಆಗಮಿಸಿದ್ದಾರೆ.

ಹೌದು, ಟಿ. ಎಸ್. ನಾಗಾಭರಣ ಕನ್ನಡ ಚಿತ್ರರಂಗದ  ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರು. ಇವರು ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಚಿತ್ರಗಳಿಗೆ ನಿರ್ದೇಶನ ಮಾಡುವ ಮೂಲಕ ಅಂತಾರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಮಟ್ಟದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಕಸ್ಮಿಕ, ಬಂಗಾರದ ಜಿಂಕೆ, ಚಿನ್ನಾರಿಮುತ್ತ, ಜನುಮದ ಜೋಡಿ, ಚಿಗುರಿದ ಕನಸು, ನೀಲ, ಕಲ್ಲರಳಿ ಹೂವಾಗಿ, ಹೀಗೆ ಸಧಭೀರುಚಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುವ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಈ ಸಿನಿಮಾಗಳು ಜೀವಂತವಾಗಿರಿಸುವಂತೆ ಮಾಡಿದ್ದಾರೆ.  ಇಷ್ಟೇ ಅಲ್ಲದೇ ಹಲವಾರು ಧಾರಾವಾಹಿಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಸದ್ಯ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರು ಸಾಧಕರ ಸೀಟ್ ಅಲಂಕರಿಸಿರುವುದು ಅವರ ಅಭಿಮಾನಿಗಳಿಗೆ ಖುಷಿಉಂಟುಮಾಡಿದೆ

ಈಗಾಗಲೇ ಈ ಸೀಸನ್ ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗಡೆ, ರಾಘವೇಂದ್ರ ರಾಜ್ ಕುಮಾರ್, ಪ್ರೇಮಾ, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ಶಶಿಕುಮಾರ್ ಈ ಕಾರ್ಯಕ್ರಮಕ್ಕೆ ಬಂದು ಹೊಸ ಮೆರುಗನ್ನುತಂದಿದ್ದಾರೆ.

ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರರ ಸಿಕ್ಸ್ ಫ್ಯಾಕ್ ತಯಾರಿ…!!!

#weekendwithramesh #rameshmovies #tsnagabharana #pannagabharana #weekendwithrameshseason4intsnbharana

 

Tags