ಸುದ್ದಿಗಳು

ಪ್ರೇಕ್ಷಕರನ್ನು ಮತ್ತೆ ರಂಜಿಸಲು ವೀಕೆಂಡ್ ವಿತ್ ರಮೇಶ್ ಜೊತೆಗೆ ಬರುತ್ತಿದ್ದಾರೆ ರಮೇಶ್ ಅರವಿಂದ್

ಬೆಂಗಳೂರು, ಮಾ.18:

ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಮೆಚ್ಚುಗೆ ಗಳಿಸಿದ ಹಾಗೂ ಫೇಮಸ್ ಆದ ರಿಯಾಲಿಟಿ ಶೋಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು. ಪ್ರೇಕ್ಷಕರನ್ನು ಇದ್ದು ಇಲ್ಲದಂತೆ ಕಾಡಿದ, ವಾರಂತ್ಯದಲ್ಲಿ ಟಿವಿ ಎದುರು ಕೂರುವಂತೆ ಮೋಡಿ ಮಾಡಿದ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮುಗಿದಾಗ ಜನ ಬೇಸರಗೊಂಡಿದ್ದರು. ಆದರೆ ಇದೀಗ ರಮೇಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಪ್ರೇಕ್ಷಕರ ಮನಗೆದ್ದ ಈ ರಿಯಾಲಿಟಿ ಶೋ ಮತ್ತೆ ಶುರುವಾಗಲಿದೆಯಂತೆ.

ವಿಕೆಂಡ್ ವಿತ್ ರಮೇಶ್ ಕಾರ್ಯಾಕ್ರಮದ ಗತ್ತೆ ರಮೇಶ್

ಅಂದಹಾಗೆ ರಮೇಶ್ ಅರವಿಂದ್ ಅವರು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ಅಳಿಸಿ, ನಗಿಸಿದ್ದು ಇದೆ. ಆದರೆ ವಿಕೆಂಡ್ ವಿತ್ ಕಾರ್ಯಕ್ರಮ ಗಮನ ಸೆಳೆದಿದ್ದೇ ರಮೇಶ್ ಅರವಿಂದ್ ಅವರ ನಿರೂಪಣೆಯ ಶೈಲಿಯಿಂದ. ಪ್ರೇಕ್ಷಕರನ್ನು ಮೋಡಿ ಮಾಡುವ, ಅತಿಥಿಗಳನ್ನು ಭಾವನಾ ಲೋಕಕ್ಕೆ ಕೊಂಡೊಯ್ಯುವ ವಿಭಿನ್ನ ಪ್ರಯತ್ನವನ್ನು ರಮೇಶ್ ಮಾಡುತ್ತಾರೆ. ಹೀಗಾಗಿಯೇ ಈ ಕಾರ್ಯಕ್ರಮ ಕ್ಲಿಕ್ ಆಗಿದೆ.

ವಿಕೆಂಡ್ ವಿತ್ ರಮೇಶ್ ನ ನಾಲ್ಕನೇ ಆವೃತ್ತಿ ಶೀಘ್ರದಲ್ಲಿ ಆರಂಭವಾಗಲಿದ್ದು, ಈ ಕುರಿತಂತೆ ಹೇಳಿಕೊಂಡಿರುವ ರಮೇಶ್, ಮತ್ತೆ ನಿಮ್ಮ ಮುಂದೆ ಬರಲು ಖುಷಿಯಾಗುತ್ತಿದೆ. ಪ್ರವಾಸ ಮುಗಿಸಿ ವಾಪಾಸ್ ಮನೆಗೆ ಬಂದಾಗ ಆಗುವ ಅನುಭವ ಇದೀಗವಾಗುತ್ತಿದೆ. ವೀಕೆಂಡ್ ವಿತ್ ರಮೇಶ್ ಜನರಲ್ಲಿ ಒಂದು ಹೊಸ ಕನಸನ್ನು ಬಿತ್ತಿದೆ. ಇಲ್ಲಿನ ಕೆಂಪು ಕುರ್ಚಿ ಜನರಲ್ಲಿ ಭರವಸೆಯನ್ನು ಮೂಡಿಸಿದೆ ಎಂದು ರಮೇಶ್ ಹೇಳಿಕೊಂಡಿದ್ದಾರೆ.

ಈ ಹಿಂದಿನ ಸಂಚೆಕೆಯಲ್ಲೂ ಹಲವು ಮಂದಿ ತಾರೆಯರು , ಸೆಲೆಬ್ರಿಟಿಗಳು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದರು. ಅಂದಹಾಗೆ ಇದೊಂದು ರಿಯಾಲಿಟಿ ಶೋವಾದರೂ ಇದು ಗೇಮ್ ಅಲ್ಲ. ಇಲ್ಲಿ ಸೆಲೆಬ್ರಿಟಿಗಳ ಒಂದು ಇಡೀ ಜೀವನದ ಪುಟವನ್ನು ತಿರುವಿ ಹಾಕಲಾಗುತ್ತದೆ. ಇಲ್ಲಿ ಅದೆಷ್ಟೋ ಮಂದಿ ಭಾವುಕರಾಗಿ ಕಣ್ಮೀರಾಕಿದ್ದು ಇದೆ. ಇನ್ನೂ ಕೆಲವರು ಎಷ್ಟೋ ವರ್ಷದ ಗೆಳೆತನವನ್ನು ಮುರಿದು ದೂರವಾದವರು , ಈ ವೇದಿಕೆಯಲ್ಲಿ ಹತ್ತಿರವಾಗಿದ್ದು ಇದೆ.

‘ಟಗರು’ ಸಂಭಾಷಣೆಕಾರ ಮಾಸ್ತಿ ಜೊತೆ ಬಾಲ್ಕನಿ ಚಿಟ್ ಚಾಟ್!!

#zeekannada #weekendwithramesh #ramesharavind #ramesharavindmovies #weekendwithrameshseason4

Tags