ಸುದ್ದಿಗಳು

ವೀಕೆಂಡ್ನಲ್ಲಿ ಜೀವನ ಸಾಧಕರು!!

ಬೆಂಗಳೂರು,ಮೇ.15: ವೀಕೆಂಡ್ ವಿತ್ ರಮೇಶ್‌ ನ ಶ್ರೀಮುರುಳಿಯ ನಂತರ ಸುಧಾ ಮೂರ್ತಿ, ನಾರಾಯಣ ಮೂರ್ತಿ ಸ್ಥಾನ ಅಲಂಕರಿಸಲಿದ್ದಾರಂತೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಜನಪ್ರಿಯ ಕಾರ್ಯಕ್ರಮವಾಗಿದೆ. ಅದೆಷ್ಟೋ ಮಂದಿ ಸಾಧಕರ ಜೀವನ ಕಥೆಗಳನ್ನು, ಕಷ್ಟನಷ್ಟಗಳನ್ನು, ಹಾಗೂ ಅವರ ಜೀವನದ ಮುಖ್ಯ ಘಟ್ಟಗಳನ್ನು, ಯಾರೀಗೂ ತಿಳಿಯದೇ ಇರುವ ವಿಚಾರಗಳು ಈ ಕಾರ್ಯಕ್ರಮದಲ್ಲಿ ಗೊತ್ತಾಗಿದೆ. ಈಗಾಗಲೇ ಅನೇಕರು ಬಂದು ಈ ಸೀಟ್‌ ನಲ್ಲಿ ತಮ್ಮ ಜೀವನ ಕಥೆ ಹಂಚಿಕೊಂಡಿದ್ದಾರೆ. ಇದೀಗ ಈ ಸೀಟ್‌ಗೆ ಬಾರೀ ನಿರೀಕ್ಷೆಯ ಸಾಧಕರು ಬರುತ್ತಿದ್ದಾರೆ.

ಮುಂದಿನ ಸಾಧಕರು ಯಾರು ಗೊತ್ತಾ..?

ಹೌದು, ವೀಕೆಂಡ್ ವಿಥ್ ರಮೇಶ್ ನಾಲ್ಕನೇ ಆವೃತ್ತಿ ಪ್ರಾರಂಭವಾಗಿದ್ದು, ಮೊದಲ ಅತಿಥಿಯಾಗಿ ಡಾ.ವೀರೇಂದ್ರ ಹೆಗಡೆಯವರು ಸ್ಥಾನ ಅಲಂಕಾರ ಮಾಡಿದ್ದರು. ನಂತರ ರಾಘವೇಂದ್ರ ರಾಜ್‌ಕುಮಾರ್, ರಾಘಣ್ಣ, ಶಶಿಕುಮಾರ್ ವಿನಯಪ್ರಸಾದ್ ತಮ್ಮ ಜೀವನ ಕಥೆಗಳನ್ನು ಹೇಳಿಕೊಂಡಿದ್ದರು. ಇದೀಗ ಶ್ರೀ ಮುರುಳಿ ಈ ಸೀಟ್‌ ಗೆ ಬರಲಿದ್ದಾರಂತೆ. ಸದ್ಯ ಈ ನಟನ ನಂತರ ಇನ್ಫೋಸಿಸ್ನ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿಯವರು ಈ ಸೀಟ್‌ ನಲ್ಲಿ ಕೂರುತ್ತಾರಂತೆ.

Image result for sudha murthy and narayana murthy

ಒಂದೇ ಎಪಿಸೋಡ್ನಲ್ಲಿ ಇಬ್ಬರು ಸಾಧಕರು

ಜೀವನದಲ್ಲಿ ಸಾಧನೆ ಮಾಡಿ, ಅದೆಷ್ಟೋ ಮಂದಿಗೆ ನೆರಳಾಗಿ ಇನ್ನೊದಿಷ್ಟು ಮಂದಿಗೆ ಮಾದರಿಯಾಗಿರುವ ಇನ್ಫೋಸಿಸ್ ಫೌಂಡೇಷನ್‌ನ ಸಂಸ್ಥಾಪಕರಾಗಿರುವ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿಯವರನ್ನು ಕೆಂಪು ಖುರ್ಚಿ ಮೇಲೆ ಕೂರಿಸಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಇನ್ನು ಒಂದೇ ಎಪಿಸೋಡ್‌ನಲ್ಲಿ ಇಬ್ಬರು ಸಾಧನಕರನ್ನು ನೋಡುವ ಭಾಗ್ಯ ಕನ್ನಡಿಗರದ್ದು. ನಿಜಕ್ಕೂ ಈ ಇಬ್ಬರು ಸಾಧಕರು ಆ ಖುರ್ಚಿಗೆ ಸರಿಯಾದವರು ಅನ್ನೋದು ಹಲವರ ಮಾತು.

ನಿಖಿಲ್ ಗೆ ಚಿತ್ರ ನಿರ್ಮಿಸಲು ಮುಂದಾದ ಲೈಕಾ ಪ್ರೊಡಕ್ಷನ್ಸ್..!

#sandalwood #weekendwithramesh #sudhamurthy #narayanamurthy

Tags