ಸುದ್ದಿಗಳು

ಬಾಲ್ಕನಿ ವಾರಭವಿಷ್ಯ: 14-1-2019 ಸೋಮವಾರದಿಂದ 19-1-2019 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷ ವಾರದ ಆರಂಭದಲ್ಲಿ ತಾಯಿಯ ಅಧೀನದಲ್ಲಿರುವಿರಿ ಮತ್ತು ತಾಯಿಯ ದೃಢ ನಿರ್ಧಾರಗಳಿಂದ ಒಳಿತಾಗುವುದು. ಈ ನಡುವೆ ಮನಸ್ತಪಾವೂ ಆಗುವುದು. ವಾರದ ಮಧ್ಯದಲ್ಲಿ ಉಲ್ಲಾಸ ಹಾಗು ಲವಲವಿಕೆಯಿಂದ ಎಲ್ಲಾ ಕೆಲಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಅತಿಯಾದ ಜಾಣ್ಮೆಯಿಂದ ಎಲ್ಲಾವನ್ನು ನಿಭಾಯಿಸುವಿರಿ ಹಾಗು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಸ್ನೇಹಿತರೊಂದಿಗೆ ಮೋಜು ಮಸ್ತಿ/ಮನೋರಂಜನಾತ್ಮಕ ಚಟುವಟಿಕೆಗಳಿಗೆ ಹಣವ್ಯಯ. ವಾರಾಂತ್ಯಕ್ಕೆ ಕೊಂಚ ಮಾನಸಿಕ ಒತ್ತಡಕ್ಕೆ ಬೀಳುವಿರಿ ಆತ್ಮ ಸ್ಥೈರ್ಯ ಕಳೆದುಕೊಳ್ಳುವಿರಿ. ಹಿರಿಯ ಅಧಿಕಾರಿಗಳಿಂದ ತೊಂದರೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ. ಹಳೆಯ ವಿಷಯದ ಬಗ್ಗೆ ಅಪ್ರಸ್ತುತ ಚರ್ಚೆ ಮಾಡಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವಿರಿ.

ವೃಷಭ ವಾರದ ಆರಂಭದಲ್ಲಿ ತಾಯಿಯಿಂದ ಲಾಭ. ನಿಮಗೆ ಇಲ್ಲವೆ ನಿಮ್ಮ ಸಂಗಾತಿಗೆ ಭೂಮಿಯಿಂದ ಲಾಭ. ವಾರ ಪೂರ್ತಿ ಭೂಮಿ ಇಲ್ಲವೆ ಕಟ್ಟಡದ ಬಗ್ಗೆ ಚರ್ಚೆಯಾದೀತು. ಮಕ್ಕಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುವ ವಾರ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ನಿಮ್ಮ ತಾಯಿಯ ಮೂಳೆ, ಕಣ್ಣು ಅಥವಾ ಹಲ್ಲಿನ ಸಮಸ್ಯೆಯಿಂದ ಬಳಲುವರು. ಸಂಗಾತಿಗೆ ಉತ್ತಮ ಧನಾರ್ಜನೆ. ವಾರದ ಆರಂಭದಿಂದಲೂ ಸಮಯ ಪರಿಪಾಲನೆಯಲ್ಲಿ ಹಿಂದೆ ಬೀಳುವಿರಿ. ಸೋದರ ಮಾವನ ಆರೋಗ್ಯದಲ್ಲಿ ವ್ಯತ್ಯಾಸ. ಅತೀವ ಬೆನ್ನು ನೋವು ಇಲ್ಲವೆ ಗ್ಯಾಸ್ಟ್ರಿಕ್ ಅಥವಾ ಸ್ಪಾಂಡಿಲೈಟಿಸ್ ನಿಂದ ಬಳಲಬಹುದು. ನೀವು ಮಾಡುವ ಅಡುಗೆಯಲ್ಲಿ ವ್ಯತ್ಯಾಸ. ವಾಹನದಿಂದ ಕಿರಿಕಿರಿ ಅನುಭವಿಸಬಹುದು.

ಮಿಥುನ ಎಂದಿನಂತೆ ಈ ವಾರವೂ ಕೆಲಸಗಳು ವಿಳಂಬವಾಗುವುದು. ಆರೋಗ್ಯದಲ್ಲಿ ವ್ಯತ್ಯಾಸ ಹಾಗು ಹಣವ್ಯಯ. ಕೆಲಸಗಾರರಿಂದ ಕಿರಿಕಿರಿ. ಅವಕಾಶಗಳನ್ನು ಕೈಚೆಲ್ಲುವಿರಿ ನಿಮ್ಮ ಕೆಲಸಕಾರ್ಯಗಳಲ್ಲಿ ಸರ್ಕಾರದ ನಿಯಮಾವಳಿಗಳಿಂದ ತೊಂದರೆ. ವಿದ್ಯಾರ್ಥಿಗಳು ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗುವಿರಿ. ಸಾಲದ ಹೊರೆ ಹೆಚ್ಚುವುದು. ಸಮಯ ಪರಿಪಾಲನೆಯಲ್ಲಿ ಎಡವುವಿರಿ. ಹಾಗಾಗಿ ಅದರ ಪರಿಣಾಮವಾಗಿ ವಾರದ ಅಷ್ಟೂ ಕೆಲಸಗಳಲ್ಲಿ ತೊಂದರೆ ಅನುಭವಿಸುವಿರಿ. ಇಷ್ಟಾದರೂ ಮುಂಬರುವ ಕೆಲಸ ಕಾರ್ಯಗಳಿಗೆ ಪೂರಕವಾಗಿ ಕೆಲವು ಮಾತುಕಥೆಗಳು ಜರುಗಿ ಧೈರ್ಯದಿಂದ ಮುನ್ನುಗ್ಗುವಿರಿ. ವಾಹನ ದಟ್ಟಣೆಯಿಂದ ಕಿರಿಕಿರಿ ಅನಿಭವಿಸುವಿರಿ. ಹನುಮನ ಪ್ರಾರ್ಥನೆಯಿಂದ ಒಳಿತಾಗುವುದು.

ಕಟಕ ಸರ್ಕಾರಿ ಮಟ್ಟದಲ್ಲಿ ತೊಂದರೆ ಅನುಭವಿಸುವಿರಿ ಇಲ್ಲವೆ ನಿಮ್ಮ ಮೇಲಧಿಕಾರಿಗಳ ನಂಬಿಕೆ ಕಳೆದುಕೊಳ್ಳುವಿರಿ. ಈ ವಾರ ಸ್ವಲ್ಪ ಆತ್ಮ ಸ್ಥೈರ್ಯ ಕಳೆದುಕೊಂಡು ಭಯಭೀತರಾಗುವಿರಿ. ಹಾಗಾಗಿಯೂ ವಾರದ ಮಧ್ಯಬಾಗದಲ್ಲಿ ಲವಲವಿಕೆಯಿಂದ ಇರಲು ಪ್ರಯತ್ನ ಪಡುವಿರಿ. ಹಾಗೂ ಸ್ವಲ್ಪ ಲಾಭ ಪಡೆಯುವಿರಿ. ಗುರು-ಹಿರಿಯರ ಹಾಗು ಸ್ನೇಹಿತರ ಬಲ ನಿಮಗೆ ಸಿಗುವುದು. ವಾರಾಂತ್ಯಕ್ಕೆ ವಾಸ್ತವ ಬದುಕಿನಿಂದ ಹೊರಗಿರುವಿರಿ ಇಲ್ಲವೆ ಪ್ರಯಾಣದಿಂದ ಆಯಾಸವಾದೀತು. ದುರ್ಗಿ ಮತ್ತು ಸೂರ್ಯನ ಆರಾಧನೆಯಿಂದ ಒಳಿತು.

ಸಿಂಹ ವಾರದ ಆರಂಭದಲ್ಲಿ ನಿಮಗೆ ಅಥವಾ ನಿಮ್ಮ ಸಂಗಾತಿ ಇಲ್ಲವೆ ತಾಯಿಯ ಆರೋಗ್ಯದಲ್ಲಿ ಏರುಪೇರು. ಭೂಮಿಗೆ ಸಂಬಂಧ ಪಟ್ಟ ವಿಚಾರಗಳು ಚರ್ಚೆಯಾಗುವುದು ಮತ್ತು ಅದರಿಂದ ನಷ್ಟ ಸಂಭವಿಸುವುದು. ವಾರದ ಮಧ್ಯಭಾಗದಲ್ಲಿ ನಿಮ್ಮ ಕೆಲಸ ಕಾರ್ಯದಿಂದ ಮನ್ನಣೆ ದೊರೆಯಲಿದೆ. ವಾಹನ ಬದಲಿಸುವ ವಿಚಾರಗಳು ಚರ್ಚೆಗೆ ಬರಬಹುದು. ನಿಮ್ಮ ಮನೆಗೆ ಸ್ನೇಹಿತರ ಹಾಗು ಕುಟುಂಬ ವರ್ಗದವರು ಭೇಟಿ ಕೊಡಬಹುದು ಇಲ್ಲವೆ ನೀವೇ ಅವರನ್ನು ಭೇಟಿ ಮಾಡುವಿರಿ. ಇಲ್ಲವೆ ಸ್ನೇಹಿತರೊಂದಿಗೆ ಕೂಡಿ ಮನೋರಂಜನೆಯಿಂದ ಕಾಲ ಕಳೆಯುವಿರಿ ಹಾಗು ಅದಕ್ಕಾಗಿ ಹಣ ವ್ಯಯ ಮಾಡುವಿರಿ. ಯಾವುದಾದರೂ ವಸ್ತು ಒಂದನ್ನು ಕಳೆದುಕೊಳ್ಳುವಿರಿ.

ಕನ್ಯಾ ವಾರದ ಆರಂಭದಲ್ಲಿ ಅತ್ಯಂತ ಲವಲವಿಕೆಯಿಂದ ವಾರ ಕಳೆಯುವಿರಿ. ನಿಮ್ಮ ಪ್ರತಿಯೊಂದು ಮಾತಿನಲ್ಲೂ ಅತ್ಯಂತ ಸ್ಪೂರ್ತಿ ಹಾಗು ಶಕ್ತಿ ಕಾಣುವುದು. ವಾರದ ಮಧ್ಯದಲ್ಲಿ ಕೊಂಚ ಮಟ್ಟಿಗೆ ಅನಾರೋಗ್ಯ ಅನುಭವಿಸುವಿರಿ ಇಲ್ಲವೆ ಯಾವುದಾದರೂ ಒಂದು ರೀತಿಯಲ್ಲಿ ನಷ್ಟ ಅನುಭವಿಸುವಿರಿ. ಜನಮನ್ನಣೆ ದೊರೆಯುವ ವಾರ. ಲಾಭಗಳಿಕೆಯ ವಾರ ಇದಾಗಲಿದೆ ಹಾಗು ಸರಿ ಸಮಾನವಾಗಿ ವಸ್ತ್ರಗಳಿಗೆ, ಮನೆಯ ವರ್ಣಾಲಂಕಾರಕ್ಕಾಗಿ ಹಣ ವ್ಯಯ ಮಾಡುವಿರಿ. ನಿಮ್ಮ ಹಳೆಯ ಆಸ್ತಿಯೊಂದನ್ನು ಮಾರಲು ಮಧ್ಯವರ್ತಿಗಳನ್ನು ಸಂಪರ್ಕಿಸುವಿರಿ. ಮಕ್ಕಳ ವಿಚಾರದಲ್ಲಿ ಕೊಂಚ ಶುಭವಲ್ಲ. ಅವರು ಅನಾರೋಗ್ಯಕ್ಕೆ ತುತ್ತಾಗಿ ನಿಮಗೆ ಅವರನ್ನು ನೋಡಿಕೊಳ್ಳಲು ಕೊಂಚ ಶ್ರಮವಾದೀತು

ತುಲಾ ಈ ವಾರ ಕೊಂಚ ಹಳೆಯ ವಿಷಯದ ಬಗ್ಗೆ ಧ್ಯಾನ ಹೆಚ್ಚು. ನಿಮ್ಮ ಮನಸ್ಸಿಗೆ ಅರಿವು ಇರುವ ಋಣಗಳನ್ನು ತೀರಿಸಲು ಓಡಾಡುವಿರಿ ಇಲ್ಲವೆ ಚಿಂತಿಸುವಿರಿ. ಈ ವಾರ ಹಣದ ಒಳ ಹರಿವು ಬರುವ ಸೂಚನೆ ಸಿಗಲಿದೆ. ವಾರದ ಮಧ್ಯ ಭಾಗದಲ್ಲಿ ಅತಿಯಾದ ಕೆಲಸದ ಒತ್ತಡದಿಂದ ಇಲ್ಲವೆ ಕುಟುಂಬದ ಒತ್ತಡದ ವಿಷಯವಾಗಿ ಸ್ತ್ರೀಯರಿಂದ ಮಾನಸಿಕ ಅಶಾಂತಿಯಾದೀತು. ಕೆಲಸ/ವ್ಯವಹಾರದ ಸ್ಥಳದಲ್ಲಿ ಕಿರಿಕಿರಿ. ಆಸ್ತಿ ವಿಚಾರವಾಗಿ ಮಧ್ಯವರ್ತಿಗಳೊಂದಿಗೆ ಮಾತುಕತೆ. ಸರ್ಕಾರದ ನಿಯಮಾವಳಿಗಳಿಂದ ಕೊಂಚ ಹಿನ್ನಡೆ ಅನುಭವಿಸುವಿರಿ. ಮಕ್ಕಳ ಬುದ್ದಿವಂತಿಕೆ ಕಂಡು ಕೊಂಚ ಮನಸ್ಸಿಗೆ ನಿರಾಳ. ಗಣಪತಿ ಪ್ರಾರ್ಥನೆಯಿಂದ ಒಳಿತು.

ವೃಶ್ಚಿಕ ಈ ವಾರ ಬರುವ ಎಲ್ಲಾ ಅಡ್ಡಿ ಆತಂಕಗಳಿಗೆ ಧೈರ್ಯದಿಂದ ಎದೆಯೊಡ್ಡಿ ನಿಲ್ಲುವಿರಿ. ದೈವ ಬಲ/ಕುಟುಂಬದ ಒಲವು ನಿಮ್ಮೊಂದಿಗಿದೆ. ಹಾಗಾಗಿಯೂ ನಿಮ್ಮ ಕುಟುಂಬ ವರ್ಗದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವಿರಿ. ಮಕ್ಕಳೊಂದಿಗೆ ಮಾತಿನ ಚಕಮಕಿ ಮುಂದುವರೆಯುವುದು. ಮಕ್ಕಳ ಸ್ಫೂರ್ತಿಗೆ ಅಡ್ಡಿಯಾಗದಿರಿ. ಉದ್ಯೋಗ/ವ್ಯಾಪಾರ ಸ್ಥಳದಲ್ಲಿ ಸಮಯ ಪರಿಪಾಲನೆಯಲ್ಲಿ ವಿಫಲವಾಗಿ ಹಿನ್ನಡೆ ಅನುಭವಿಸುವಿರಿ. ಯಾವುದಾದರು ವಿಷಯವಾಗಿ ಮಧ್ಯವರ್ತಿಗಳೊಂದಿಗೆ ವ್ಯವಹರಿಸುವಿರಿ ಇಲ್ಲವೆ ಚರ್ಚೆ. ಕುಲ ದೇವರ ಆರಾಧನೆಯಿಂದ ಒಳಿತು.

ಧನಸ್ಸು ನಿಮ್ಮ ಬುದ್ಧಿಗೂ ನಿಮ್ಮ ಕೆಲಸಕ್ಕೂ ತಾಳೆಯಾಗಿತ್ತಿಲ್ಲ. ನಿಮ್ಮ ಆಲೋಚನೆಯ ವೇಗಕ್ಕೆ ನಿಮ್ಮ ಕೆಲಸ ಕಾರ್ಯಗಳು ಸಹಕರಿಸದೆ ನಿಧಾನವಾಗಿ ಚಲಿಸುತ್ತಿದೆ. ಇದರಿಂದಾಗಿ ಸ್ವಲ್ಪ ವಿಚಲಿತರಾಗುತ್ತೀರಿ. ತಾಯಿಯ ಸಹೋದರಿ ಅಥವಾ ಸಹೋದರನನ್ನು ಭೇಟಿಯಾಗುತ್ತಿರಿ. ನಿಮ್ಮ ಕಾರ್ಯ ನಿಮಿತ್ತ ಹಣಕಾಸು ಹೊಂಚಲು ಶ್ರಮಿಸುತ್ತಿರುವ ನಿಮಗೆ ಈ ವಾರ ಹಣದ ಸಹಾಯವೊಂದು ಒದಗಿ ಬರಲಿದೆ. ವಾರಾಂತ್ಯದಲ್ಲಿ  ಅತೀವ ಕೆಲಸದ ಒತ್ತಡದಿಂದ ಇಲ್ಲವೆ ಇರುವ ಕಮಿಟ್ ಮೆಂಟ್ ಗಳ ಹೊರೆಯಿಂದ ಒತ್ತಡಕ್ಕೆ  ಸಿಲುಕುವಿರಿ. ಈ ವಾರ ಧಿಡೀರಾಗಿ ಅಸ್ವಾಭವಿಕವಾಗಿ ಖರ್ಚೊಂದು ಹುಡುಕಿಕೊಂಡು ಬರಲಿದೆ.

ಮಕರ ಈ ವಾರ ಭೂಮಿಯಿಂದ ಲಾಭವಾದರೂ ಆದಾಯ ತೆರಿಗೆ ಇಲ್ಲವೆ ಇತರ ತೆರಿಗೆ ವಿಷಯವಾಗಿ ಕೊಂಚ ಗಲಿಬಿಲಿಯಾಗುವಿರಿ. ಇಲ್ಲವೆ ಸಂಬಂಧ ಪಟ್ಟ ಇಲಾಖೆಯಿಂದ ನೋಟಿಸ್ ಪಡೆಯುವಿರಿ. ಅನವಶ್ಯಕ ಖರ್ಚೊಂದು ಹುಡುಕಿಕೊಂಡು ಬರುವುದು. ವಾರದ ಮಧ್ಯಭಾಗದಲ್ಲಿ ಸಿಹಿಯಾದ ಸುದ್ದಿಯೊಂದು ನಿಮ್ಮನ್ನು ಮುಟ್ಟಲಿದೆ. ವಾಹನವನ್ನು ಖರೀದಿಸಲು ಮುಂದಾಗುವಿರಿ ಇಲ್ಲವೆ ಅದರ ಚರ್ಚೆಯಾದೀತು. ವಾಹನದ ವಿಷಯವಾಗಿ ಸಾಲ ಪಡೆಯಲು  ಬ್ಯಾಂಕ್ ಅರ್ಜಿ ಹಾಕುವಿರಿ. ಇಲ್ಲವೆ ಕುಟುಂಬದ ಸ್ತ್ರೀಯರಿಗಾಗಿ ಒಡವೆ ಇಲ್ಲವೆ ವಸ್ತ್ರ ಕೊಳ್ಳುವಿರಿ.

ಕುಂಭ ನಿದ್ದೆಯಿಲ್ಲದೆ ಬಳಲುವ ವಾರ. ಸುಖ ಭೋಜನ ವಿಶೇಷವಾಗಿ ಮಾಂಸಹಾರಿ. ಕೆಲಸ ಕಾರ್ಯಗಳಿಗೆ/ವ್ಯವಹಾರಗಳಿಗೆ ಕೊಂಚ ವಿರಾಮ ಮಡೆಯುವ ವಾರ. ವಾರದ ಆರಂಭದಲ್ಲಿ ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡುವಿರಿ. ಮನೆಯ ನವೀಕರಣ ಇಲ್ಲವೆ ಮನೆಯನ್ನು ಚೆಂದವಾಗಿ ಕಾಣುವಂತೆ ಮಾಡಲು ಹಣ ಖರ್ಚು ಮಾಡುವಿರಿ. ತಾಯಿಗೆ ಇಲ್ಲವೆ ಸಂಗಾತಿಗೆ ವಸ್ತ್ರ ಖರೀದಿಸುವಿರಿ. ಕುಟುಂಬ ವರ್ಗದವರೊಂದಿಗೆ ಖುಷಿಯಿಂದ ಕಾಲ ಕಳೆಯುವ ವಾರ. ವಾರಾಂತ್ಯಕ್ಕೆ ದಂತ ವೈದ್ಯರನ್ನು ಕಾಣುವ ಇಲ್ಲವೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಿರಿ.

ಮೀನ ಅತಿಯಾದ ಚಳಿ ಇಲ್ಲವೆ ಬದಲಾಗುತ್ತಿರುವ ವಾತಾವರಣದ ಸಲುವಾಗಿ ಅನಾರೋಗ್ಯವಾಗ ಬಹುದು. ಹಿತ-ಮಿತವಾದ ಮಾತು ಸುಖ ಭೋಜನ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಸಹೋದರ – ಸಹೋದರಿಯರನ್ನು ಭೇಟಿ ಮಾಡುವಿರಿ. ಮಕ್ಕಳ ಹಟದ ಸ್ವಭಾವದ ಸಲುವಾಗಿ ಕೊಂಚ ಕಿರಿಕಿರಿ ಅನುಭವಿಸುವಿರಿ. ಅವರ ಕೈಗೆ ಬಹು ಮುಖ್ಯವಾದ ವಸ್ತುಗಳನ್ನು ಈ ವಾರ ಕೊಡದಿರಿ. ಅತಿಯಾದ ವಾಹನ ದಟ್ಟಣೆಯಿಂದ ಕೊಂಚ ಕಿರಿಕಿರಿ ಅನುಭವಿಸುವಿರಿ. ವಾರದ ಮಧ್ಯದಲ್ಲಿ ಇಲ್ಲವೆ ವಾರಾಂತ್ಯಕ್ಕೆ ಸಿನಿಮಾ ನೋಡಿ ಮನೋರಂಜನೆಯನ್ನು ಪಡೆಯುವಿರಿ.

—————————————————*************————————————————————–

ಇನ್ನೂ ಹಲವು ಕಡೆ ಐಟಿ ರೈಡ್ ಮುಂದುವರೆಯುವುದು.

ಜ್ಯೋತಿಷರವಿ ಕೃಬೆಂಗಳೂರು

Tags

Related Articles