ಸುದ್ದಿಗಳು

ಗಣೇಶ್ ನಾಯಕತ್ವದ ‘ವೇರ್ ಈಸ್ ಮೈ ಕನ್ನಡಕ’ ಚಿತ್ರಕ್ಕೆ ಮುಹೂರ್ತ

ವಿಶೇಷವೆಂದರೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಚಿತ್ರದಲ್ಲಿ ನಟನೆ

ಬೆಂಗಳೂರು.ಫೆ.10

‘ಚಮಕ್’ ಹಾಗೂ ‘ಆರೆಂಜ್’ ಚಿತ್ರಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಬ್ಯುಸಿಯಾಗಿದ್ದಾರೆ. ಈಗಾಗಲೇ ‘ಗಿಮಿಕ್’, ‘ಗೀತಾ’, ‘99’ ಚಿತ್ರಗಳಲ್ಲಿ ನಟಿಸುತ್ತಿದ್ದು, ಈಗ ಸದ್ದಿಲ್ಲದೇ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದುವೇ ‘ವೇರ್ ಈಸ್ ಮೈ ಕನ್ನಡಕ’.

ಚಿತ್ರದ ಬಗ್ಗೆ

ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ಬಾಲಿವುಡ್ ನ ಪತ್ರಲೇಖಾ ಕಾಣಿಸಿಕೊಳ್ಳುತ್ತಿದ್ದು, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ವಿಶೇಷ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ದಿಲ್ಲದೇ ಈ ಚಿತ್ರಕ್ಕೆ ಮುಹೂರ್ತವಾಗಿದ್ದು, ಬರುವ ಏಪ್ರೀಲ್ ನಲ್ಲಿ ಸಿನಿಮಾ ಶುರುವಾಗಲಿದೆ. ಚಿತ್ರವನ್ನು ಲಂಡನ್ ಮತ್ತು ಯೂರೋಪ್ ನಲ್ಲಿ ಶೂಟಿಂಗ್ ಮಾಡಲಾಗುತ್ತದೆ.

ನೈಜ ಘಟನೆ ಆಧಾರಿತ ಸಿನಿಮಾ

ಅಂದ ಹಾಗೆ ಇದೊಂದು ನಿಜ ಜೀವನದ ಕುರಿತು ರಾಜ್ ಮತ್ತು ದಾಮಿನಿ ದಂಪತಿಗಳು ಈ ಚಿತ್ರವನ್ನು ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಚಿತ್ರೀಕರಣ ಶುರು ಮಾಡಿ ಈ ವರ್ಷದ ಅಂತ್ಯಕ್ಕೆ ತೆರೆಗೆ ತರುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

“ಗಣೇಶ್ ನಟನೆಯ ಚಿತ್ರಗಳು ಬಾಲಿವುಡ್ ಗೆ ಡಬ್ ಆಗಿರುವುದನ್ನು ನೋಡಿದ್ದೇವೆ. ಆ ಚಿತ್ರಗಳಲ್ಲಿನ ಅವರ ಕಾಮಿಡಿ ಟೈಮಿಂಗ್ ಹಾಗೂ ಹ್ಯೂಮರಸ್ ನಿಂದಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ. ಈ ಚಿತ್ರದ ಮೂಲಕ ಪತ್ರಲೇಖಾ ಹಾಗೂ ಅರ್ಬಾಜ್ ಖಾನ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ” ಎಂದು ನಿರ್ದೇಶಕರಾದ ರಾಜ್ ಮತ್ತು ದಾಮಿನಿ ದಂಪತಿಗಳು ಹೇಳುತ್ತಾರೆ.

ಕಥೆ ಇಷ್ಟವಾಯ್ತು

“ಪ್ರಾದೇಶಿಕ ಭಾಷೆಯಗಳಲ್ಲಿ ಅಭಿನಯಿಸಬೇಕೆಂಬ ಆಸೆಯೂ ಇದೆ.. ಎರಡು ತೆಲುಗು ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದು, ಇದೇ ನನ್ನ ಮೊದಲ ಕನ್ನಡ ಚಿತ್ರ.. ತುಂಬಾ ಉತ್ತಮ ಕಥೆಯುಳ್ಳ ಚಿತ್ರದಲ್ಲಿ ನಟಿಸುತಿರುವುದು ಖುಷಿಯಾಗುತ್ತಿದೆ” ಎಂದು ಅರ್ಬಾಜ್ ಖಾನ್ ಹೇಳಿದ್ದಾರೆ.

ರಾಣಾ ದಗ್ಗುಬಾಟಿಗೆ ಧನ್ಯವಾದ ಹೇಳಿದ ಯಶ್!!

#whereismykannadaka, #balkaninews #ganesh, #filmnews, #arbajakhan, #patralekha

Tags