ಆರೋಗ್ಯವೈರಲ್ ನ್ಯೂಸ್ಸುದ್ದಿಗಳು

ಮಹಾಮಾರಿ ಕೊರೊನಾಗೆ ಜಪಾನ್ ಬಳಿ ಇದೆ ಮದ್ದು?

ಕೊನೆಗೂ ತಜ್ಞರ ಸಂಶೋಧನೆ ಯಶಸ್ವಿ

ಇಡಿ ವಿಶ್ವವೇ ಕೊರೊನಾ ಸೊಂಕಿನ ಭೀತಿಯಲ್ಲಿ ನಲುಗುತ್ತಿದೆ. ಇಟಲಿ, ಚೈನಾದಂತಹ ದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾವು-ನೋವುಗಳಾಗಿವೆ. ಸದ್ಯಕ್ಕೆ ಮಹಾಮಾರಿ ಕೊರೊನಾ ಭಾರತಕ್ಕೆ ಕಾಲಿಟ್ಟಿದ್ದು, ಸೋಂಕು ತಗುಲಿದವರ ಸಂಖ್ಯೆ ೫೦೦ರ ಗಡಿ ದಾಟಿದೆ. ಸಾವಿನ ಸಂಖ್ಯೆ ೩೩ಕ್ಕೆ ಏರಿದೆ.

ಕೊರೊನಾ ಇನ್ನಷ್ಟು ಹರಡದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದಿಟ್ಡ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಜನ ಸಾಮಾನ್ಯರು ೨೧ ದಿನಗಳ ಕಾಲ ಗೃಹ ಬಂಧನಕ್ಕೊಳಗಾಗಿದ್ದಾರೆ. ಈ ನಡುವೆ ವೈಜ್ಞಾನಿಕ ವಾಗಿ ಕೊರೊನಾ ನಾಶ ಪಡಿಸಲು ಮದ್ದು ಕಂಡುಹಿಡಿಯುವ ಪ್ರಯತ್ನದಲ್ಲಿ ವಿಜ್ಞಾನಿಗಳು ತೊಡಗಿಕೊಂಡಿದ್ದಾರೆ. ಜಪಾನ್ ದೇಶದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುತ್ತಿರುವ ತಜ್ಞರು ಕೋವಿಡ್-19 ತಡೆಗಟ್ಟಲು ಔಷಧ ಕಂಡುಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಹೌದು ಅತ್ಯಂತ ಆಧುನಿಕ ತಂತ್ರಜ್ಞಾನದ ಮೂಲಕ ಕೊರೊನಾ ವೈರಸ್ ನಿರ್ಮೂಲನೆಗೆ ಮದ್ದು ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಈ ವಿಷಯದ ಬಗ್ಗೆ ಅಧಿಕೃತವಾಗಿ ಜಪಾನ್ ಎಲ್ಲೂ ಘೋಷಣೆ ಮಾಡಿಲ್ಲ. ಆದರೆ ಜಪಾನ್‌ನ ವಿಜ್ಞಾನಿಗಳು ಔಷದಿ ಕಂಡುಹಿಡಿದಿರುವ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದು ಕೇವಲ ರೂಮರ್ ಎಂದು ಒಂದು ಬಳಗ ಹೇಳುತ್ತಿದೆ. ಆದರೆ ಔಷಧಿಯ ಸಂಶೋಧನೆಯಲ್ಲಿ ಜಪಾನ್ ತೊಡಗಿಕೊಂಡಿರುವುದು ಸತ್ಯ ಎಂದು ವಾದಿಸುವ ಬಳಗ ಹೇಳುತ್ತಿದೆ.

ಕೊರೊನಾ ವಿರುದ್ಧ ಮದ್ದು ಕಂಡುಹಿಡಿದಿರುವುದು ನಿಜವೋ ಅಥವಾ ಗಾಳಿಸುದ್ದಿಯೋ ಎಂಬುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಈ ವಿಷಯ ನಿಜವಾದರೆ, ಖಂಡಿತವಾಗಿ ಕೊರೊನಾ ವೈರಸ್ ನಿರ್ಮೂಲನೆ ಮಾಡಲು ಈ ಮದ್ದು ಸಹಾಯಕಾರಿಯಾಗುತ್ತದೆ. ವಿಶ್ವಕ್ಕೆ ಅಂಟಿಕೊಂಡಿರುವ ಕೊರೊನಾ ಕಂಟಕ ಬೇಗ ನಿವಾರಣೆಯಾಗಲಿ, ಈ ಮಹಾಮಾರಿ ಸೋಂಕಿಗೆ ಆದಷ್ಟು ಬೇಗ ಮದ್ದು ಸಿಗಲಿ ಎಂದು ಜನಸಾಮಾನ್ಯ ಆಶಿಸುತ್ತಿದ್ದಾನೆ.

#CORONAVIRUS #ಮಹಾಮಾರಿ #ಕೊರೊನಾ

‘ನಕ್ಷೆ’ ಹುಡುಕಾಟದಲ್ಲಿ ‘ದಿಯಾ’

Tags