ಸುದ್ದಿಗಳು

‘ಕನ್ನಡ ಕೋಗಿಲೆ ಸೀಸನ್ 2’ ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೆ…?

ಬೆಂಗಳೂರು, ಮಾ.21:

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಹಾಡಿನ ಕಾರ್ಯಕ್ರಮದ ಮೊದಲನೇ ಸೀಸನ್ ಅದ್ದೂರಿಯಾಗಿ ಮುಗಿದಿದ್ದು ಸಂಗೀತ ಪ್ರಿಯರಿಗೆಲ್ಲಾ ತಿಳಿದೇ ಇದೆ. ಇದೀಗ ಕನ್ನಡ ಕೋಗಿಲೆಯ ಎರಡನೇ ಸೀಸನ್ ಆರಂಭವಾಗಿದೆ.

ಸಂಗೀತ ನಿರ್ದೇಶಕ ಸಾಧು ಕೋಕಿಲ, ಗಾಯಕಿ ಅರ್ಚನಾ ಉಡುಪ ಹಾಗೂ ಗಾಯಕ ಚಂದನ್ ಶೆಟ್ಟಿ ತೀರ್ಪುಗಾರರಾಗಿರುವ ಕನ್ನಡ ಕೋಗಿಲೆ ಗೆ ಇದೀಗ ಆರ್ ಜೆ ಯೋರ್ವರ ಎಂಟ್ರಿಯಾಗಿದೆ. ಅದು ನಿರೂಪಕಿಯಾಗಿ.

ಕನ್ನಡ ಕೋಗಿಲೆ ಸೀಸನ್ 1 ರ ನಿರೂಪಕಿಯಾಗಿ ಅನುಪಮಾ  ಗೌಡ ಕಾಣಿಸಿಕೊಂಡಿದ್ದರು. ಅಕ್ಕ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ಅನುಪಮಾ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು. ಬಿಗ್ ಬಾಸ್ ನ ನಂತರ ಕನ್ನಡ ಕೋಗಿಲೆಯ ನಿರೂಪಣೆಯ ಜವಾಬ್ದಾರಿ ಹೊತ್ತ ಅನುಪಮಾ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಇದೀಗ ಕನ್ನಡ ಕೋಗಿಲೆ 2 ರ ನಿರೂಪಕಿಯಾಗಿ ಅನುಪಮಾ ಬದಲಿಗೆ  ಆರ್ ಜೆ ಸಿರಿ ಕಾರ್ಯಕ್ರಮವನ್ನು ಮುನ್ನೆಡೆಸಲಿದ್ದಾರೆ. ರೇಡಿಯೋ ಜಗತ್ತಿನಲ್ಲಿ ಹೆಸರು ಮಾಡಿರುವ ಸಿರಿ ಈಗಾಗಲೇ ಕೆಲ ನಾಟಕಗಳಲ್ಲಿಯೂ ನಟಿಸಿದ್ದಾರೆ. ಇದೀಗ  ‘ಕನ್ನಡ ಕೋಗಿಲೆ ಸೀಸನ್ 2’ ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಗೂ ಸಿರಿ ಕಾಲಿಟ್ಟಿದ್ದಾರೆ. ಇದರಿಂದ ನಟನಾ ಲೋಕಕ್ಕೆ ಹೊಸ ನಿರೂಪಕಿಯ ಆಗಮನವಾಗಿದೆ. ಮಾರ್ಚ್ 23 ರಿಂದ ಕನ್ನಡ ಕೋಗಿಲೆಯ ಸೀಸನ್ 2 ರ ಕಾರ್ಯಕ್ರಮ ಗ್ರಾಂಡ್ ಓಪನಿಂಗ್ ಆಗುತ್ತಿದ್ದು ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ   ಪ್ರಸಾರವಾಗಲಿದೆ.

ಚಿತ್ರರಂಗಕ್ಕೊಬ್ಬ ಮುದ್ದಾದ ಮತ್ತು ರಗಡ್ ಆಗಿರುವ ನಾಯಕ ನಟ ಅರುಣ್ ಕುಮಾರ್

#balkaninews #sandalwood #kannadamovies #rjrisi #kannadakogileseason2 #realityshow

Tags