ಸುದ್ದಿಗಳು

ಫೋಟೋ ವೈರಲ್: ಜಸ್ಪ್ರೀತ್ ಬುಮ್ರಾ ಜೊತೆ ಇರುವ ಆ ಚೆಲುವೆ ಯಾರಿರಬಹುದು?

ಮಲೆಯಾಳಂ ನಟಿ ಅನುಪಮಾ ಹಾಗೂ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಡುವೆ ಪ್ರೀತಿ ಇರಬಹುದಾ ಎಂದು ಸಿನಿರಸಿಕರು ಶಂಕೆ ವ್ಯಕ್ತಪಡಿಸಿದ್ದರು. ಇದೀಗ ಇದರ ಬೆನ್ನಲ್ಲೇ ಬುಮ್ರಾ ಟ್ವಿಟರ್‌ನಲ್ಲಿ ಹಾಕಿರುವ ಫೋಟೋವೊಂದು ವೈರಲ್‌ ಆಗಿದೆ.

ಹೌದು, ನಿನ್ನೆಯಷ್ಟೇ ಬುಮ್ರಾ ಟ್ವಿಟರ್ ಖಾತೆಯಲ್ಲಿ ಹಾಕಿರುವ ಫೋಟೋದಲ್ಲಿ ಮಹಿಳೆಯೊಬ್ಬರ ಹೆಗಲ ಮೇಲೆ ಕೈ ಇಟ್ಟಿರುವುದು ಕಂಡುಬರುತ್ತದೆ. ಜೊತೆಗೆ ‘ಯಾವಾಗಲೂ ನನ್ನನ್ನು ಬೆಂಬಲಿಸುವ ಹೆಗಲು ಇದು’ ಎಂದು ಬರೆದುಕೊಂಡಿದ್ದಾರೆ.

ಈ ಫೋಟೊ ನೋಡಿದ ಅನೇಕರು ಇದು ಅನುಪಮಾ ಪರಮೇಶ್ವರನ್ ಅವರೇನಾ? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇಲ್ಲ ಇದು ಬೂಮ್ರಾ ತಾಯಿ ಎಂದಿದ್ದಾರೆ.  ಒಟ್ಟಿನಲ್ಲಿ ಬುಮ್ರಾ ಹಾಕಿರುವ ಫೋಟೊ ಇದೀಗ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿದೆ.

ಬುಮ್ರಾ ಮೇಲೆ ಇಂತದ್ದೊಂದು ಊಹೆಗಳು ಆರಂಭವಾಗಿದ್ದು, ಟ್ವಿಟರ್ ನಲ್ಲಿ ಬುಮ್ರಾ ಅನುಪಮಾ ಅವರನ್ನು ಫಾಲೋ ಮಾಡಿದ ನಂತರ. ಏಕೆಂದರೆ ಅವರು ಫಾಲೋ ಮಾಡುತ್ತಿರುವುದು ಕೇವಲ 25 ಜನರನ್ನು. ಅದರಲ್ಲಿ ಬಹುತೇಕ ಕ್ರಿಕೆಟಿಗರನ್ನೇ ಫಾಲೋ ಮಾಡುತ್ತಿರುವುದರ ಜೊತೆಗೆ ನಟಿ ಅನುಪಮಾ ಅವರನ್ನು ಮಾತ್ರ ಬುಮ್ರಾ ಫಾಲೋ ಮಾಡುತ್ತಿರುವುದು ಇಬ್ಬರ ನಡುವೆ ಪ್ರೇಮಾಂಕುರವಾಗಿರಬಹುದಾ ಎನ್ನುವ ಮಾತುಗಳು ಕೇಳಿಬಂದಿತ್ತು.

ಆದರೆ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಅನುಪಮಾ ನಾವಿಬ್ಬರು ಉತ್ತಮ ಸ್ನೇಹಿತರು. ಈ ರೀತಿಯ ಸುದ್ದಿ ಹಬ್ಬಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.

 

View this post on Instagram

 

The shoulder that always supports me, no matter what❤🤗

A post shared by jasprit bumrah (@jaspritb1) on

 

#balkaninews #jaspritbumra #anupamaparameswaran #photoviral

Tags