ಸುದ್ದಿಗಳು

ಕಾಜಲ್ ಏಕೆ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿದ್ದಾರೆ?

ಇತ್ತೀಚಿಗೆ ಕಾಜಲ್ ಅಗರ್ವಾಲ್ ಚಿತ್ರಗಳು ಒಂದಾದ ಮೇಲೊಂದರಂತೆ ಒಂದು ಫ್ಲಾಪ್ ಆಗುತ್ತಲೇ ಇವೆ. ಈ ವರ್ಷದ ಆರಂಭದಲ್ಲಿ, ಅವರು ನಟಿಸಿದ ‘ಸೀತಾ’ ಎಂಬ ಕಾಮಿಡಿ ಚಿತ್ರ ಹೇಳಹೆಸರಿಲ್ಲದಂತೆ ಮಕಾಡೆ ಮಲಗಿತು. ಆದರೆ ಈ ಚಿತ್ರದ ನಂತರ, ಕಾಜಲ್ ಶರ್ವಾನಂದ್ ಅವರ ‘ರಣರಂಗಂ’ ಚಿತ್ರದಲ್ಲಿ ಹಿಟ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

‘ರಣರಂಗಂ’ ಒಂದೆರಡು ದಿನಗಳ ಹಿಂದೆಯೇ ಬಿಡುಗಡೆಯಾಯಿತು. ಅದನ್ನು ನೋಡಿದ ನಂತರ, ಕಾಜಲ್ ಈ ಚಿತ್ರಕ್ಕೆ ಏಕೆ ಸಹಿ ಹಾಕಿದ್ದಾರೆಂದು ಈಗ ಎಲ್ಲರೂ ಯೋಚಿಸಿದ್ದಾರೆ. ಏಕೆಂದರೆ ಆಕೆಯ ಪಾತ್ರಕ್ಕೆ ಚಿತ್ರದಲ್ಲಿ ಅಷ್ಟು ಅವಕಾಶವಿಲ್ಲ.

ಚಿತ್ರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಬಂದು ಹೋಗುವ ಕಾಜಲ್ ಪಾತ್ರ ನೋಡಿದವರು ಇದೀಗ ನೆಗೆಟಿವ್ ಆಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ. ಸದ್ಯ ಕಾಜಲ್ ಅವರ ಕೈಯಲ್ಲಿ ಬೇರೆ ಚಿತ್ರವಿಲ್ಲ, ಆದರೆ ಮಂಚು ವಿಷ್ಣು ನಟನೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಮಂಚು ವಿಷ್ಣು ಅವರಿಗೆ ತಂಗಿಯಾಗಿ.

ಇದನ್ನೆಲ್ಲಾ ಗಮನಿಸಿದ ಕಾಜಲ್ ಅಭಿಮಾನಿಗಳು ಕಾಜಲ್ ಏಕೆ ತನ್ನ ವೃತ್ತಿಜೀವನದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾಳೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಆದರೆ ಕಾಜಲ್ ಗೆ ದೊಡ್ಡ ಆಫರ್ ಗಳು ಬರುತ್ತಿಲ್ಲವಾ ಅಥವಾ ಆಕೆಯೇ ಅಂತಹ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾಳಾ ಎಂಬುದು ಶೀಘ್ರದಲ್ಲಿಯೇ ತಿಳಿಯಲಿದೆ.

ಆನ್‌ಲೈನ್‌ನಲ್ಲಿ ಫುಲ್ ಲೀಕ್ ಆಯ್ತು ಆದಿವಿ ಶೇಶ್ ನಟನೆಯ ಚಿತ್ರ!!

#balkaninews #kajalaggarwal # tollywoodnews

Tags