ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ವಿಡಿಯೋ ವೈರಲ್ : ರಾಜಾರೋಷವಾಗಿ ಸಾಲು ಸಾಲಾಗಿ ರಸ್ತೆ ದಾಟಿದ ಕಾಡುಕೋಣಗಳು

ನೀವು ಎಂದಾದರೂ ಚಿಕ್ಕಮಗಳೂರು ಕಡೆ ಪ್ರವಾಸ ಕೈಗೊಂಡರೆ ಈ ದೃಶ್ಯ ನೋಡಲು ಖಂಡಿತವಾಗಿ ಅವಕಾಶ ಸಿಗುತ್ತದೆ.

ಅದ್ಯಾವ ದೃಶ್ಯ ಅಂತೀರಾ? ಕಾಡು ಕೋಣಗಳ ಹಿಂಡು ನೋಡುವುದು. ಹೌದು, ಅಲ್ಲಿನ ನಿವಾಸಿಗಳಿಗೆ ಈ ದೃಶ್ಯ ನೋಡುವುದು ಕಾಮನ್. ಆದರೆ ಹೊರಗಿನವರಿಗೆ ಇದು ಅಪರೂಪ.

ಅಂದಹಾಗೆ ಮತ್ತೆ ಕಾಡುಕೋಣಗಳ‌ ದಂಡು ಕಾಫಿ ತೋಟದಲ್ಲಿ‌ ಬೀಡುಬಿಟ್ಟಿರುವ ಬಗ್ಗೆ ಈಗ ಮತ್ತೆ ವರದಿಯಾಗಿದೆ.

ಹೌದು, ಜಾವಳಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಸುಮಾರು 8 ಕಾಡುಕೋಣಗಳು ಕಾಣಿಸಿಕೊಂಡಿದ್ದು, ಇವು ಕಾಫಿ ತೋಟಗಳನ್ನು ಹಾನಿ ಮಾಡಿವೆಯಂತೆ.

ರಾಜರೋಷವಾಗಿ ಕಾಡುಕೋಣಗಳು ಸಾಲು ಸಾಲಾಗಿ ರಸ್ತೆ ದಾಟುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಚಿಕ್ಕಮಗಳೂರಿಗರಿಗೆ ಇಷ್ಟು ದಿನ ಗುಡ್ಡ ಕುಸಿತದ ಭೀತಿ ಎದುರಾಗಿತ್ತು. ಆದರೀಗ ಕಾಡು ಪ್ರಾಣಿಗಳ ಭೀತಿ.

ಈ ಕಾಡುಕೋಣಗಳ ದಂಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಹೊರನಾಡು ರಸ್ತೆಯಲ್ಲಿರುವ ಜಾವಳಿಯಲ್ಲಿ ಕಾಣಿಸಿಕೊಂಡಿದೆಯಂತೆ.

ಕಾಳಗಕ್ಕಿಳಿದ ಕಾಳಿಂಗ-ಹೆಬ್ಬಾವು: ಕೊನೆಗೆ ಆಗಿದ್ದೇನು?

#balkaninews #wildbuffalo #videoviral #chikkamagaluru

Tags