ಸುದ್ದಿಗಳು

ವಿಜಯ್ ರಾಘವೇಂದ್ರ, ಸಾಯಿಕುಮಾರ್ ಅಭಿನಯದ ‘ಯದಾ ಯದಾ ಹೀ ಧರ್ಮಸ್ಯ’ ಸಿನಿಮಾ ಆಡಿಯೋ ಲಾಂಚ್

ಬೆಂಗಳೂರು, ಮಾ.25:

ವಿಜಯ್ ರಾಘವೇಂದ್ರ ನೆಗಟೀವ್ ಶೇಡ್‌ ನಲ್ಲಿ ಕಾಣಿಸಿಕೊಂಡ ಮೊದಲ ಸಿನಿಮಾ ‘ಯದಾ ಯದಾ ಹೀ ಧರ್ಮಸ್ಯ’. ಈಗಾಗಲೇ ಪೋಸ್ಟರ್ ಮೂಲಕವೇ ಬಾರೀ ಸದ್ದು ಮಾಡಿರುವ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇದೀಗ ಆಡಿಯೋ ಲಾಂಚ್ ಮಾಡಿದೆ ಸಿನಿಮಾ ತಂಡ.

‘ಯದಾ ಯದಾ ಹೀ ಧರ್ಮಸ್ಯ’ ಆಡಿಯೋ ಬಿಡುಗಡೆ

ಹೌದು, ಸಾಯಿಕುಮಾರ್ ಹಾಗೂ ವಿಜಯ್ ರಾಘವೇಂದ್ರ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ‘ಯದಾ ಯದಾ ಹೀ ಧರ್ಮಸ್ಯ’ ಸಿನಿಮಾ ಆಡಿಯೋ ಲಾಂಚ್ ಮಾಡಲಾಗಿದೆ. ಇತ್ತೀಚೆಗೆ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಇನ್ನೂ ಟೈಟಲ್‌ ನಲ್ಲಿಯೇ ಖಡಕ್ ಹೊಂದಿರುವ ಈ ಸಿನಿಮಾ ಪೋಸ್ಟರ್, ಟ್ರೇಲರ್‌ ನಿಂದಲೇ ಬಾರೀ ಸದ್ದು ಮಾಡಿತ್ತು. ಚಾಕೋಲೇಟ್ ಹೀರೋ ಮೊದಲ ಬಾರಿಗೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ವಿರಾಜ್ ನಿರ್ದೇಶನದ ಸಿನಿಮಾ

ಸದ್ಯ ಈ ಸಿನಿಮಾವನ್ನು ವಿರಾಜ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರಾವ್ಯ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಇನ್ನೇನು ತೆರೆ ಕಾಣುವುದಕ್ಕೆ ರೆಡಿಯಾಗಿದೆ. ಇನ್ನೂ ಈ ಸಿನಿಮಾದಲ್ಲಿ ಸಾಧು ಕೋಕಿಲ, ಉಮೇಶ್, ಗಡ್ಡಪ್ಪ, ಪ್ರಥಮ್, ಪದ್ಮಾ ವಾಸಂತಿ ಸೇರಿದಂತೆ ದೊಡ್ಡ ತಾರಾಗಣವಿದೆ.

ಇನ್ನೂ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಮತ್ತು ಪರಾಗ್ ಸಂಗೀತ ಸಂಯೋಜಿರೋ ಹಾಡುಗಳಿವೆ. ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇರುವ ಈ ಸಿನಿಮಾ ಬಿಡುಗಡೆಯಾದ ನಂತರ ಹೇಗೆಲ್ಲಾ ಸದ್ದು ಮಾಡುತ್ತೆ ಅಂತಾ ಕಾದು ನೋಡಬೇಕು.

ಕಿರುತೆರೆಯಿಂದ ಬೆಳ್ಳಿತೆರೆಗೆ ಭರತ್ ಬೋಪಣ್ಣ

#balkaninews #sandalwood #vijayraghavendra #vijayraghavendramovies #saikumar #saikumarandvijayraghavendra #yadhayadhahedharmasyakannadamovie #audiolaunch

Tags