ಸುದ್ದಿಗಳು

ಯದುವೀರ ಕೃಷ್ಣದತ್ತರ ವೈಭವೋಪೇತ  ಖಾಸಗೀ ದಸರಾ ದರ್ಬಾರ್

ಯದುವೀರ ಒಡೆಯರ್ ರಾಜ್ಯ ಪ್ರವಾಸೋದ್ಯಮಕ್ಕೇ ಬ್ರಾಂಡ್ ಅಂಬಾಸೆಡರ್!

BALKANI DASARA-2018

ಯದುವಂಶದ  ಅರಸರಾದ  ಮುಮ್ಮಡಿ ಕೃಷ್ಣರಾಜ  ಒಡೆಯರ್, ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಆಡಳಿತ ನಡೆಸಿದ ಮೈಸೂರು ರಾಜ್ಯ ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ ಕೇಂದ್ರ ಸರಕಾರದ ಹಿಡಿತಕ್ಕೆ ಒಳಪಟ್ಟಿತು. ಆನಂತರ ರಾಜಮನೆತನದವರು ಖಾಸಗಿ ದರ್ಬಾರ್ ನ್ನು ತಮ್ಮ ಅರಮನೆಯ ಒಳಭಾಗದಲ್ಲೇ ನಡೆಸಲಾರಂಭಿಸಿದರು.

ಶ‍್ರೀಕಂಠದತ್ತ ನರಸಿಂಹರಾಜ ಒಡೆಯರ್  ರವರ ಕಾಲದಲ್ಲಿ ಕಳೆದ 40-42 ವರ್ಷಗಳೂ ನಡೆದುಕೊಂಡು ಬಂದ ಈ ಖಾಸಗೀ ದರ್ಬಾರ್ , ಈಗ್ಗೆ 2-3 ವರ್ಷಗಳಿಂದ ಯದುವೀರ ಕೃಷ್ಣದತ್ತ ಚಾಮರಾಜ  ಒಡೆಯರ್  ಈ ಭವ್ಯ ಪದ್ಧತಿಯನ್ನು ಸಾಂಗೋಪಾಂಗವಾಗಿ ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ.

ಪ್ರಸ್ತುತ  ಕರ್ನಾಟಕ ಮೈತ್ರಿ ಸರಕಾರ  ಯದುವೀರ ಒಡೆಯರ್ ರವರನ್ನು ರಾಜ್ಯದ ಪ್ರವಾಸೋದ್ಯಮಕ್ಕೇ ಬ್ರಾಂಡ್ ರಾಯಭಾರಿಯನ್ನಾಗಿ  ನೇಮಿಸಿರುವುದು ರಾಜಮನೆತನಕ್ಕೆ ಸಂದ ದೊಡ್ಡ ಗೌರವವೇ ಸರಿ! ಎಂದಿನಂತೆ ಈ ಬಾರಿಯೂ ಯದುವೀರ ಕೃಷ್ಣದತ್ತ ಒಡೆಯರ್  ನವರಾತ್ರಿ 2018ರ ಧಾರ್ಮಿಕ ಕಲಾಪಗಳನ್ನು ಬಹು ಧರ್ಮ ಶ್ರದ್ಧೆಯಿಂದ ನೆರವೇರಿಸಿಕೊಂಡು  ನಡೆದಿದ್ದಾರೆ.

ಬುಧವಾರ ತುಲಾ ಲಗ್ನದಲ್ಲಿ ಕಲಶ ಪೂಜೆಯ ಸಹಿತ  ಆರಂಭವಾದ  ಯದುವೀರ ಕೃಷ್ಣದತ್ತ ಒಡೆಯರ್  ರವರ ಖಾಸಗೀ ದರ್ಬಾರ್,  ಸಮಸ್ತ ಊಳಿಗದವರಿಂದಾವೃತವಾಗಿ ಯಾವತ್ತಿನ ವಿಜೃಂಭಣೆಯಿಂದಲೇ ಜರುಗಿತು. ಅರಮನೆಯ ಅಂಬಾವಿಲಾಸದೊಳಗಿಂದ ಅಧೀಕೃತ ಅರಮನೆಯ ಬಾಂಡ್ ಸೆಟ್ ನುಡಿಸುತ್ತಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಎಂಬ ಮೈಸೂರು ವಾಸುದೇವಾಚಾರ್ಯರ ಕೃತಿಯೊಂದಿಗೆ ಪೂಜಾಕಲಾಪ ಕಳೆಗಟ್ಟಿತ್ತು.

ಹೌದು ಮೈಸೂರ ಯದುವಂಶದರಸರಿಗೆ ತಮ್ಮ ಕುಲದೇವತೆ ಬೆಟ್ಟದ ತಾಯಿ ಚಾಮುಂಡೇಶ‍್ವರಿಯ ಆರಾಧನೆ ಮಾಡುವುದೆಂದರೆ ಪರಮ ಭಕ್ತಿ.   ತಲೆತಲಾಂತರದಿಂದ ಬೆಟ್ಟದ ತಾಯಿಗೆ ನಡೆದುಕೊಂಡು ಬರುತ್ತಿರುವ  ಈ ರಾಜವಂಶ ದ ಮೂರು-ನಾಲ್ಕು ಪೀಳಿಗೆಯವರು ಅನುಭವಿಸಿದ ಶಾಪವನ್ನು ತೊಡೆದುಹಾಕಿ ಮೈಸೂರರಸರಿಗೆ ಮಕ್ಕಾಳಾಗುವ ಹಾಗೇ ವರವನ್ನಿತ್ತಿದ್ದಾಳೆ ಶ್ರೀ ಚಾಮುಂಡಾಂಬೆ..!!

ಸೂಕ್ತ ಮುಹೂರ್ತದಲ್ಲಿಸಿಂಹಾಸನ ವನ್ನೇರಿದ  ಯದುಕುಲ ರಾಜವಂಶ ಪ್ರತಿನಿಧಿ ಯದುವೀರ ಕೃಷ್ಣದತ್ತ ಒಡೆಯರ್ ಅರಮನೆಯೊಳಗೇ ಸಿಂಹಾಸನದ ಮೇಲೇ ನಿಂತು ರಾಜಗೌರವ ಸ್ವೀಕರಿಸಿದರು. ಆನಂತರ ತಮ್ಮ ಖಾಸಗೀ ದರ್ಬಾರ್ ಉದ್ದೇಶಿಸಿ ನೆರೆದವರನ್ನು ಸಂಭೋಧಿಸಿ ನವರಾತ್ರಿ ಶುಭಾಶಯಗಳನ್ನು ಹಾರೈಸಿದರು.

ಆ ಹೊತ್ತಿಗಾಗಲೇ ಮೈಸೂರ ಚಾಮುಂಡೀ ಬೆಟ್ಟದ ಮೇಲೆ ಮಹಿಷಾಸುರ ಮರ್ದಿನಿಯ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ದಸರಾ ಹಬ್ಬದ  ಉತ್ಸವಗಳನ್ನು ರಾಜ್ಯ ಸರಕಾರದ ಪರವಾಗಿ ಉದ್ಘಾಟಿಸಿ ಮೈಸೂರ ಅರಮನೆಗೂ ಆಗಮಿಸಿ ಯದುವೀರರ ದರ್ಬಾರ್ನಲ್ಲೂ ಪಾಲ್ಗೊಂಡರು ಇನ್ಫೋಸಿಸ್  ಟೆಕ್ನಾಲಜೀಸ್ ಸಮೂಹ ಸಂಸ್ಥಗಳ ಸಹಸಂಸ್ಥಾಪಕಿ ಶ್ರೀಮತಿ ಸುಧಾ ನಾರಾಯಣಮೂರ್ತಿ. ಈ ರೀತಿ ನಡೆದದ್ದು ಇದೇ ಮೊದಲು.

ಅತ್ತ ಯುದುವೀರರ ಖಾಸಗೀ ದರ್ಬಾರನ್ನು ರಾಣಿ ತ್ರಿಶಿಕಾ ದೇವಿಯವರು  ತಮ್ಮ ಸುಪುತ್ರ ಆದ್ಯವೀರರ ಜೊತೆಗೆ  ಸಾವಧಾನಚಿತ್ತದಿಂದ ಪರದೆಯ ಹಿಂದೆಯೇ ಕುಳಿತು ರಾಜಮಾತೆ ಪ್ರಮೋದಾದೇವಿಯವರೊಡನೆ ವೀಕ್ಷಿಸಿದರು.

ಡಾ||.ಪಿ.ವಿ.ಸುದರ್ಶನ ಭಾರತೀಯ, editor@balkaninews.com

Tags