ಸುದ್ದಿಗಳು

ಯಜಮಾನ ಸಿನಿಮಾ ಟೈಟಲ್ ಹಾಡು ಬಿಡುಗಡೆ

ಬೆಂಗಳೂರು,ಫೆ.5:

ಯಜಮಾನ ಸಿನಿಮಾದ ಹಾಡುಗಳು ಈಗಾಗಲೇ ಬಾರೀ ಸದ್ದು ಮಾಡಿದ್ದವು. ಇದೀಗ ಈ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

ಸದ್ಯ ಸ್ಯಾಂಡಲ್‌ವುಡ್‌ ನಲ್ಲಿ ನಿರೀಕ್ಷೆಯ ಸಿನಿಮಾಗಳ ಧಮಾಕ ನಡೆಯುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಪ್ರತಿ ನಿತ್ಯ ಒಂದಲ್ಲ ಒಂದು ಸಿನಿಮಾಗಳ ಹಾಡು, ಪೋಸ್ಟರ್ ಸೇರಿದಂತೆ ಹಲವಾರು ವಿಚಾರಗಳು ಅಭಿಮಾನಿಗಳಿಗೆ ರಸದೌತಣ ನೀಡುತ್ತಲೇ ಇವೆ. ಇದೀಗ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಟೈಟಲ್ ಹಾಡು ಬಿಡುಗಡೆಯಾಘಿದ್ದು ಅಭಿಮಾನಿಗಳಿಗೆ ಸಿಹಿಯ ಊರಣ ನೀಡಿದೆ.

ಯಜಮಾನ ಟೈಟಲ್ ಸಾಂಗ್ ಹೇಗಿದೆ ಗೊತ್ತಾ..?

ಸದ್ಯ ಚಿತ್ರಿಕರಣವನ್ನೆಲ್ಲ ಮುಗಿಸಿ ಸದ್ಯ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ ಯಜಮಾನ. ಯಜಮಾನನ್ನು ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿಯೇ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದ್ದು ಯಜಮಾನನ ಆರ್ಭಟ ಹೆಚ್ಚಾಗಲಿದೆ. ಈಗಾಗಲೇ ಈ ಯಜಮಾನ ಚಿತ್ರ ಬಿಡುಗಡೆಯಾದ ಹಾಡುಗಳಿಂದಲೇ ಸಾಕಷ್ಟು ಸೌಂಡ್ ಮಾಡುತ್ತಿತ್ತು. ಇದೀಗ ಈ ಸಿನಿಮಾದ ಟೈಟಲ್ ಟ್ರಾಕ್ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಈ ಹಾಡಿನ ಪೋಸ್ಟರ್ ಗಳು ಅಭಿಮಾನಿಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಇದೀಗ ಈ ಹಾಡು ಕೂಡ ಹಲ್ ಹಚ್ ಮಾಡಿದೆ.

ಅದ್ಬುತವಾಗಿ ಮೂಡಿ ಬಂದ ನಮ್ಮ ಯಜಮಾನ

ಹೌದು, “ಯಾರೇ ಬಂದರೂ, ಎದುಯಾರ್ರೇ ನಿಂತರೂ ಪ್ರೀತಿ ಹಂಚುವ ಯಜಮಾನ, ಜೀವ ಹೋದರು ಜಗವೇನೇ ಅಂದರೂ ಮಾತು ತಪ್ಪದ ಯಜಮಾನ” ಅನ್ನೋ ಹಾಡು ಅದ್ಬುತವಾಗಿದೆ. ಇನ್ನು ಈ ವಿಡಿಯೋದಲ್ಲಿ ಮೇಕಿಂಗ್ ಕೂಡ ತೋರಿಸಲಾಗಿದೆ. ಅಷ್ಟೆ ಅಲ್ಲ ಸಿನಿಮಾ ಶೂಟಿಂಗ್ ನಲ್ಲಿ ನಡೆಯುವ, ಪ್ರಾಣಿಗಳ ಬಗ್ಗೆ ದರ್ಶನ್ ತೋರಿಸುವ ಪ್ರೀತಿ, ಮಾಸ್ ಲುಕ್, ರಶ್ಮಿಕಾ ನಟನೆ, ಹೀಗೆ ಎಲ್ಲವನ್ನು ಈ ಹಾಡಿನ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಹಾಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿದೆ. ಸಂತೋಶ್ ಆನಂದ್ ರಾಮ್ ಈ ಹಾಡನ್ನು ಸಂಯೋಜನೆ ಮಾಡಿದ್ದು, ಅದ್ಬುತವಾಗಿ ಇಂಪು ನೀಡುವಂತಿದೆ. ಸದ್ಯ ಹಾಡುಗಳ ಮೂಲಕವೇ ಇಷ್ಟು ಸದ್ದು ಮಾಡುತ್ತಿರುವ ಈ ಸಿನಿಮಾ ಬಿಡುಗಡೆಯಾದ ನಂತರ ಇನ್ನೆಷ್ಟು ಸದ್ದು ಮಾಡಬಹುದು. ಈಗಾಗಲೇ ಅಭಿಮಾನಿಗಳ ನಿರೀಕ್ಷೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

#titletrack #yajaman #rashmikamandanna

Tags