ಸುದ್ದಿಗಳು

ಸ್ವೀಡನ್ ಗೆ ಹಾರಲಿದೆ ಯಜಮಾನ ಚಿತ್ರತಂಡ..

ಕೊನೆಯ ಹಂತದಲ್ಲಿ ‘ಯಜಮಾನ’

ಬೆಂಗಳೂರು,ನ.21: ಸದ್ಯ ಕೈ ನೋವಿನಲ್ಲೂ ತಮ್ಮ ಚಿತ್ರೀಕರಣ ಮುಂದುವರೆಸಿದ್ದಾರೆ ನಟ ದರ್ಶನ್. ಸಿನಿಮಾಗಾಗಿ ಸ್ವೀಡನ್‌ ಗೆ ಹೋಗಲಿದೆ ಈ ಚಿತ್ರತಂಡ.

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ಸ್ಟಾರ್ ದರ್ಶನ್ ಆಭಿನಯದ ‘ಯಜಮಾನ’ ಸಿನಿಮಾ ೯೦ರಷ್ಟು ಭಾಗದ ಶೂಟಿಂಗ್ ಮುಗಿದಿದೆ. ಇಷ್ಟೊತ್ತಿಗೆ ಆಗಲೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ದರ್ಶನ್ ಅಫಘಾತವಾಗಿದ್ದರಿಂದ ಕೊಂಚ ತಡವಾಗಿದೆ. ಅಪಘಾತ, ನೋವು ಅಂತಾ ಈ ನಟ ಸುಮ್ಮನಿರದೆ. ಆಕ್ಷನ್ ಸೀನ್‌ಗಳನ್ನು ಬಿಟ್ಟು ಡಬ್ಬಿಂಗ್ ಸೇರಿದಂತೆ ಇನ್ನಿತರ ಕೆಲಸಗಳನ್ನು ಪೂರ್ಣ ಮಾಡಿದ್ದಾರೆ. ಇದೀಗ ಸಿನಿಮಾಗಾಗಿ ಸ್ವೀಡನ್‌ ಗೆ ಹೋಗಲು ರೆಡಿಯಾಗಿದೆ ಸಿನಿಮಾ ತಂಡ.

ಕೊನೆಯ ಹಂತದಲ್ಲಿಯಜಮಾನ’

ಸ್ಯಾಂಡಲ್‌ವುಡ್‌ ನ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಸೆನ್ಶೇಷನಲ್ ಮೂವೀ ‘ಯಜಮಾನ’ ಸಿನಿಮಾ ಇದೀಗ ಮತ್ತೊಂದು ವಿಶೇಷತೆಯಿಂದ ಸಖತ್ ಸೌಂಡ್ ಮಾಡ್ತಿದೆ.. ಚಿತ್ರದ ಟೈಟಲ್ ಹಾಗೂ ಆ ಟೈಟಲ್‌ಗೆ ತಕ್ಕ ನಾಯಕನ ಆಯ್ಕೆ ನಡೆದಾಗಲೇ ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ಹಬ್ಬದಷ್ಟು ಖುಷಿ ತಂದಂತಾಗಿತ್ತು. ಇದೀಗ ಈ ಸಿನಿಮಾ ಮುಗಿಯುವ ಹಂತಕ್ಕೆ ತಲುಪಿದೆ. ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಸ್ವೀಡನ್‌ ಗಾಗಿ ಪ್ರಯಾಣ ಬೆಳೆಸಲಿದ್ದಾರೆ.

Related image

ಹಾಡಿನ ಚಿತ್ರೀಕರಣ

ಸದ್ಯ ಅಪಘಾತದಲ್ಲಿ ಕೈ ಮೂಳೆ ಮುರಿದು ರೆಸ್ಟ್ ಮಾಡುತ್ತಿದ್ದ ದರ್ಶನ್ ಇದೀಗ ಸಿನಿಮಾ ಕಡೆ ಪ್ರಯಾಣ ಬೆಳೆಸಿದ್ದಾರೆ. ಯಜಮಾನ ಸಿನಿಮಾ ಕೊನೆಯ ಶೂಟಿಂಗ್‌ ಗಾಗಿ ‘ಯಜಮಾನ’ ತಂಡ ಸ್ವೀಡನ್‌ಗೆ ಹೋಗಲಿದ್ದಾರೆ. ಮುಂದಿನ ೭ ದಿನಗಳ ಕಾಲ ಸ್ವೀಡನ್‌ನಲ್ಲಿಯೇ ಉಳಿಯಲಿದೆಯಂತೆ ಚಿತ್ರತಂಡ. ಚಿತ್ರದ ಮುಖ್ಯ ಹಾಡಿನ ಚಿತ್ರೀಕರಣ ಅಲ್ಲಿ ನಡೆಯಲಿದೆಯಂತೆ. ಇದೊಂದು ಚಿತ್ರೀಕರಣ ಮುಗಿದರೆ ಸಿನಿಮಾ ತಂಡ ಪೋಸ್ಟ್ ಪ್ರೊಡಕ್ಷನ್‌ ನಲ್ಲಿ ಭಾಗಿಯಾಗಲಿದೆ.

 

Tags

Related Articles