ಸುದ್ದಿಗಳು

ಯಜಮಾನ ಚಿತ್ರದ ಹಾಡಿನ ತುಣುಕು ಲೀಕ್ !! ರಶ್ಮಿಕಾ ಟ್ವೀಟ್ ಏನು??

ಸಿನಿಮಾದ ಈ ಹಾಡನ್ನು ಎಲ್ಲಿಯೂ ಲೀಕ್ ಮಾಡಬೇಡಿ

ಬೆಂಗಳೂರು,ಡಿ.1: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದ ಚಿತ್ರೀಕರಣ ಸ್ವೀಡನ್‍ ನಲ್ಲಿ ಇತ್ತೀಚೆಗ ನಡೆದಿತ್ತು.. ‘ಯಜಮಾನ’ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಹಾಗೂ ರಶ್ಮಿಕಾಳ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು.. ಇದೇ ವೇಳೆ ಕಿಡಿಗೇಡಿಗಳು ತಮ್ಮ ಇನ್ನೊಂದು ಬುದ್ಧಿ ತೋರಿಸಿದ್ದಾರೆ.. ಈ ಹಾಡಿನಲ್ಲಿ ದರ್ಶನ್ ಹಾಗೂ ರಶ್ಮಿಕಾ ಅವರು ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಿರುವುದನ್ನುಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದರು..

Image result for yajamana darshan and rashmika

ಈ ರೀತಿ ಮಾಡುವುದು ಸರಿಯಲ್ಲ!
ಇತ್ತೀಚೆಗೆಯಷ್ಟೇ ಬೆಂಗಳೂರಿನಲ್ಲಿ ಅಂತಹದ್ದೇ ಸನ್ನಿವೇಶ ನಡೆದಿತ್ತು.. ಆಗ ದರ್ಶನ್ ಅಭಿಂಆನಿಯೊಬ್ಬರಿಗೆ ಬುದ್ಧಿ ಮಾತು ಹೇಳಿದ್ದರು.. ಇದೀಗ ಮತ್ತೆ ಅದೇ ರೀತಿಯ ಮತ್ತೊಂದು ಘಟನೆ ನಡೆದಿರುವುದರಿಂದ ದರ್ಶನ್ ಹಾಗೂ ರಶ್ಮಿಕಾ ಅಭಿಮಾನಿಗಳು ಈ ರೀತಿ ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದರು.. ಇದಕ್ಕೆ ರಶ್ಮಿಕಾ ಕೂಡ ಸಹಮತ ಸೂಚಿಸಿದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಈ ಹಾಡನ್ನು ಎಲ್ಲಿಯೂ ಲೀಕ್​​ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ..

Tags