ಸುದ್ದಿಗಳು

ಭರ್ಜರಿ 75 ನೇ ದಿನಗಳನ್ನು ಪೂರೈಸಿದ ‘ಯಜಮಾನ’: ಹರ್ಷ ವ್ಯಕ್ತಪಡಿಸಿದ ಚಿತ್ರತಂಡ

‘ಬೆಲ್ ಬಾಟಂ’ ಬಳಿಕ 100 ದಿನದತ್ತ ಮುನ್ನುಗ್ಗುತ್ತಿರುವ ಈ ವರ್ಷದ ಸಿನಿಮಾ

ಬೆಂಗಳೂರು.ಮೇ.15: ಡಿ-ಬಾಸ್ ದರ್ಶನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ನಟಿಸಿರುವ ‘ಯಜಮಾನ’ ಚಿತ್ರವು ಇಂದು 11 ನೇಯ ವಾರಕ್ಕೆ ಕಾಲಿಟ್ಟಿದ್ದು, ಇವತ್ತು ಭರ್ಜರಿ 75ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇನ್ನು ಎಲ್ಲರಿಗೂ ತಿಳಿದಿರುವಂತೆ ಈ ಚಿತ್ರವೀಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲೂ ನೋಡುವುದಕ್ಕೆ ಲಭ್ಯವಿದ್ದು, ಅಲ್ಲಿಯೂ ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದ ಹಾಗೆ ಈ ಚಿತ್ರವು ಮಾರ್ಚ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.

ಈ ವರ್ಷ ತೆರೆ ಕಂಡ ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಾಯಕ ನಟರಾಗಿ ನಟಿಸಿದ್ದ ‘ಬೆಲ್ ಬಾಟಂ’ ಯಶಸ್ವಿ ಶತದಿನದತ್ತ ಮುನ್ನುಗ್ಗುತ್ತಿದೆ. ಇದೇ ವೇಳೆ ದರ್ಶನ್ ನಟನೆಯ ‘ಯಜಮಾನ’ ಚಿತ್ರವು ಸಹ ಇಂದು ಯಶಸ್ವಿ 75 ದಿನಗಳನ್ನು ಪೂರೈಸಿದ್ದು,100 ನೇ ದಿನದತ್ತ ಮುನ್ನುಗ್ಗುತ್ತಿದೆ. ಹಾಗೆಯೇ ಈ ಮೂಲಕ ದರ್ಶನ್ ರಿಗೊಂದು ಈ ಸಿನಿಮಾ ಮತ್ತೊಂದು ಬಿಗ್ ಬ್ರೇಕ್ ನೀಡಿದೆ.

ಚಿತ್ರದಲ್ಲಿ ದರ್ಶನ್ , ರಶ್ಮಿಕಾ ಮಂದಣ್ಣ, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ದೇವರಾಜ್, ಸಂಜು ಬಸಯ್ಯ, ಶಿವರಾಜ್ ಕೆ ಆರ್ ಪೇಟೆ, ಸಾಧುಕೋಕಿಲಾ, ಮಂಡ್ಯ ರಮೇಶ್,ದತ್ತಣ್ಣ ಸೇರಿದಂತೆ ಹಲವಾರು ಮಂದಿಯ ದೊಡ್ಡ ತಾರಾಗಣವೇ ಇದೆ.

ಇದು ದರ್ಶನ್ ನಟನೆಯ 51 ನೇ ಚಿತ್ರವಾಗಿದ್ದು, 50 ನೇ ಸಿನಿಮಾ ‘ಕುರುಕ್ಷೇತ್ರ’ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಇದಾದ ಬಳಿಕ ‘ಒಡೆಯ’ ಸಿನಿಮಾ ಕೂಡಾ ಇದೇ ವರ್ಷ ತೆರೆ ಕಾಣಲಿದ್ದು, ‘ರಾಬರ್ಟ್’ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ವೀಕೆಂಡ್ನಲ್ಲಿ ಜೀವನ ಸಾಧಕರು!!

#yajamana, #75days, #filmnews, #balkaninews, #darshan, #filmnews, #kannadasuddigalu, #tanyahop, #rashmikamandanna

Tags