ಸುದ್ದಿಗಳು

ಸಂಕ್ರಾಂತಿಗೆ ‘ಯಜಮಾನ’ ಚಿತ್ರದ ಮೊದಲ ಹಾಡು!!

ಬೆಂಗಳೂರು,ಜ.9: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ‘ಯಜಮಾನ’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ… ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಯಜಮಾನ ‘ ಸಿನಿಮಾ ಟೈಟಲನ್ನೇ ದರ್ಶನ್ ಅವರ ಈ ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಸಾರಥಿ ಮ್ಯಾನರಿಸಂಗೆ ತಕ್ಕಂತೆ ಈ  ಚಿತ್ರವನ್ನು ಕ್ರಿಯೇಟಿವ್ ಆಗಿ ಮಾಡಲಾಗಿದೆ.

ಚಿತ್ರದ ಮೊದಲ ಹಾಡು

ಈ ಚಿತ್ರದ ಮೊದಲ ಹಾಡು ಇದೇ ಸಂಕ್ರಾಂತಿಗೆ ಜ.15 ರಂದು “ಶಿವನಂದಿ” ಬಿಡಿಗಡೆಯಾಗಲಿದೆ.. ವಿ ಹರಿಕೃಷ್ಣ ಅವರ ಮ್ಯೂಸಿಕ್ ಇದ್ದು, ಚೇತನ್ ಕುಮಾರ್ ಅವರು ಲಿರಿಕ್ಸ್ ಬರೆದಿದ್ದಾರೆ..

ಪಿ.ಕುಮಾರ್ ನಿರ್ದೇಶಿಸುತ್ತಿರೋ ‘ಯಜಮಾನ’

ಪಿ.ಕುಮಾರ್ ನಿರ್ದೇಶಿಸುತ್ತಿರೋ ಯಜಮಾನ ಶೂಟಿಂಗ್ ನಲ್ಲಿ ದರ್ಶನ್ ಇತ್ತೀಚೆಗೆ  ಪಾಲ್ಗೊಂಡಿದ್ದಾರೆ.. ಬೆಂಗಳೂರಿನಲ್ಲಿ ಯಜಮಾನ ಚಿತ್ರತಂಡವು ಹೊಸ ವರ್ಷ ಆಚರಿಸಿದ್ದು, ಇನ್ನು ಹಾಡಿನ ಚಿತ್ರೀಕರಣಕ್ಕಾಗಿ ಹಾಕಿರೋ ಸೂಪರ್ ಸೆಟ್ನಲ್ಲಿ ದರ್ಶನ್ ಭರ್ಜರಿ ಸ್ಪೆಪ್ಸ್  ಕೂಡ ಹಾಕಿದ್ದರು… ಸದ್ಯದಲ್ಲೇ ಶೂಟಿಂಗ್ ಕಂಪ್ಲೀಟ್ ಆಗಲಿದ್ದು ಆದಷ್ಟು ಬೇಗನೇ ಯಜಮಾನನ ಖದರ್ ತೆರೆ ಮೇಲೆ ನೋಡಬಹುದು..

#yajamana #balkaninews #darshan

Tags