ಸುದ್ದಿಗಳು

ಚಿತ್ರರಂಗಕ್ಕೆ ಒಬ್ಬನೇ ‘ಯಜಮಾನ’, ಅದು ಸಾಹಸಸಿಂಹ ವಿಷ್ಣುವರ್ಧನ್ ಮಾತ್ರ : ನಟ ದರ್ಶನ್

‘ಯಜಮಾನ’ ಪತ್ರಿಕಾಗೋಷ್ಟಿಯಲ್ಲಿ ದರ್ಶನ್ ಹೇಳಿಕೆ

ಬೆಂಗಳೂರು.ಫೆ.20

ನಿನ್ನೆ ಸಂಜೆ ‘ಯಜಮಾನ’ ಚಿತ್ರದ ಪತ್ರಿಕಾಗೋಷ್ಟಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡದವರು ಚಿತ್ರದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ತಿಂಗಳು ಅಂದರೆ, ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

‘ಯಜಮಾನ’ ಅವರೊಬ್ಬರೇ..

ಈಗಾಗಲೇ ಚಿತ್ರದ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿದ್ದವು. ಏಕೆಂದರೆ, ಈ ಚಿತ್ರ ಸೆಟ್ಟೇರಿದ ಬಳಿಕ ಟೈಟಲ್ ಕುರಿತಂತೆ ಅನೇಕ ಚರ್ಚೆಗಳಾದವು. ಈಗ ಈ ಚರ್ಚೆಗೆ ಸ್ಪಷ್ಟನೆ ನೀಡಿ ದರ್ಶನ್ ಬ್ರೇಕ್ ಹಾಕಿದ್ದಾರೆ.

“ನಮ್ಮ ಚಿತ್ರವನ್ನು ಡಾ. ವಿಷ್ಣು ಸರ್ ಅವರ ‘ಯಜಮಾನ’ ಚಿತ್ರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಮಾಡಲಿ, ಆದರೆ ನಮ್ಮ ಚಿತ್ರಕ್ಕೂ ಆ ಚಿತ್ರಕ್ಕೂ ಹೋಲಿಕೆ ಇಲ್ಲಾ, ಇದೇ ಬೇರೆ ಅದೇ ಬೇರೆ, ಇನ್ನು ‘ಯಜಮಾನ’ ಯಾರು ಎಂಬ ಪ್ರಶ್ನೆ ಎದ್ದಿದೆ. ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ವಿಷ್ಣುದಾದ ಮಾತ್ರ”

ಈ ಹಿಂದೆ ಡಾ. ವಿಷ್ಣುವರ್ಧನ್ ಅಭಿನಯದಲ್ಲಿ ಮೂಡಿ ಬಂದಿದ್ದ ‘ಯಜಮಾನ’ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದೇ ಹೆಸರಿನಲ್ಲಿ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ.

ಚಿತ್ರದ ಬಗ್ಗೆ

‘ಯಜಮಾನ’ ಚಿತ್ರವನ್ನು ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಿಸಿದ್ದು, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್ ಮತ್ತು ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದು, ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಬಂತು ಮಕ್ಕಳಿಂದ ವಿಶೇಷವಾದ ಗಿಫ್ಟ್

#yajamana, #balkaninews #filmnews, #kannadasuddigalu #darshan, #devaraj,

Tags

Related Articles