ಸುದ್ದಿಗಳು

‘ಯಜಮಾನ’ ಚಿತ್ರವನ್ನು ಯಾರಾದರೂ ಪೈರಸಿ ಮಾಡಿದರೆ ಮಿಸ್ ಮಾಡದೇ ಮಾಹಿತಿ ನೀಡಿ

ಈಗಾಗಲೇ ಫೇಸ್ಬುಕ್ ನಲ್ಲಿ ಚಿತ್ರದ ಕೆಲವು ದೃಶ್ಯಗಳು ಓಡಾಡುತ್ತಿವೆ

ಬೆಂಗಳೂರು.ಮಾ.01: ದರ್ಶನ್ ನಟನೆಯ ಬಹುನಿರೀಕ್ಷಿತ ಚಿತ್ರವಾದ ‘ಯಜಮಾನ’ ಇಂದು ರಾಜ್ಯಾದ್ಯಂತ ಸುಮಾರು 600 ಪ್ಲಸ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಈಗಾಗಲೇ ಈ ಸಿನಿಮಾ ಬೆಳಿಗ್ಗೆ ಆರು ಘಂಟೆಯಿಂದಲೇ ಪ್ರದರ್ಶನ ಶುರುವಾಗಿದ್ದು ಕೆಲವು ಅಭಿಮಾನಿಗಳು ಚಿತ್ರದ ಕೆಲವು ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಪೈರಸಿಗೆ ಹೀಗೆ ಮಾಡಿ

ಸಾಮಾನ್ಯವಾಗಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಬೇಕಾದರೆ, ಅದರ ವಿಡಿಯೋಗಳನ್ನು ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಹರಿದುಬಿಡುತ್ತಾರೆ. ಇದನ್ನು ತಡೆಯಲು ‘ಯಜಮಾನ’ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ.

ಹೌದು, ಈ ಚಿತ್ರವನ್ನು ಯಾರಾದರೂ ಫೇಸ್ ಬುಕ್ ಲೈವ್, ವಿಡಿಯೋ, ವಾಟ್ಸಾಪ್ ಸ್ಟೇಟಸ್, ಹೀಗೆ ಯಾವುದಾದರು ಚಟುವಟಿಕೆ ಕಂಡು ಬಂದರೆ ಕೂಡಲೇ 9384601685 ನಂಬರ್ ಗೆ ತಿಳಿಸಿ ಅಥವಾ info@copyrightmedia.in ಗೆ ತಿಳಿಸಬಹುದಾಗಿದೆ.

ಸಿನಿಮಾ ಕಳ್ಳರು

ಏಕೆಂದರೆ, ಈಗ ಸಿನಿಮಾ ಕಳ್ಳರು ಎಲ್ಲ ಚಿತ್ರರಂಗಗಳಿಗೆ ತಲೆನೋವಾಗಿದ್ದಾರೆ. ಥಿಯೇಟರ್ಗಳಿಗೆ ಕಾಲಿಟ್ಟ ಸಿನಿಮಾಗಳನ್ನು ಕ್ಷಣಾರ್ಧದಲ್ಲೇ ಪೈರಸಿ ಮಾಡುತ್ತಿದ್ದಾರೆ. ಕೋಟ್ಯಾಂತರ ರೂ. ಖರ್ಚು ಮಾಡಿದ ಚಿತ್ರಗಳು ಪೈರಸಿಯಿಂದ ಸಂಕಷ್ಟಕ್ಕೆ ಸಿಲುಕುತ್ತಿವೆ. ಹೀಗಾಗಿ ಈ ಚಿತ್ರಕ್ಕೂ ಹಾಗೆ ಆಗದಿರಲಿ. ಹಾಗೆಯೇ ಚಿತ್ರತಂಡದವರು ಇಂತವರ ವಿರುದ್ದ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ದರ್ಶನ್ ಅಭಿಮಾನಿಗಳು

ಇನ್ನು ದರ್ಶನ್ ಅಭಿಮಾನಿಗಳು ಸಹ ‘ಯಜಮಾನ’ನ ಪೈರಸಿ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ‘ಎಚ್ಚರ… ಎಚ್ಚರ.. ಪೈರಸಿ ಮಾಡುವ ಮುನ್ನ ಎಚ್ಚರ’ ಎಂದು ಪೈರಸಿ ಮಾಡುವವರಿಗೆ ಎಚ್ಚರಿಗೆ ಸಂದೇಶ ನೀಡುತ್ತಿದ್ದಾರೆ.

ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್, ಧನಂಜಯ್, ಶರತ್ ಲೋಹಿತಾಶ್ವ, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದು, ವಿ.ಹರಿಕೃಷ್ಣ ಮತ್ತು ಪಿ.ಕುಮಾರ್ ಜಂಟಿಯಾಗಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಪಯಣಕ್ಕೆ 42 ವರ್ಷ..!!!

#yajamana, #balkaninews #filmnews, #kannadasuddigalu, #darshan, #rashmikamandanna

Tags