ಸುದ್ದಿಗಳು

೮೦೦ ಥಿಯೇಟರ್ ನಲ್ಲಿ ಯಜಮಾನ

ಬೆಂಗಳೂರು,ಫೆ.22: ಯಜಮಾನನ ಬರುವಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೀಗ ರಾಜ್ಯಾದ್ಯಂತ ಸುಮಾರು ೮೦೦ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.

ಯಜಮಾನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೂಡ ಸಾಕಷ್ಟು ಸುದ್ದಿಯಾಗಿದೆ. ಸಿನಿಮಾ ಪೋಸ್ಟರ್ ಟ್ರೇಲರ್ ಹಾಡುಗಳಂತೂ ಅಭಿಮಾನಿಗಳಲ್ಲಿ ಕಾತುರತೆಯನ್ನು ಹೆಚ್ಚಿಸಿದೆ. ಇದೀಗ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಮಾರ್ಚ್ ೧ ರಂದು ಅಬ್ಬರಿಸಲಿದ್ದಾನೆ ಯಜಮಾನ. ಈ ಬೆನ್ನಲ್ಲೇ ಇದೀಗ ಈ ಸಿನಿಮಾ ಸುಮಾರು ೮೦೦ ಥಿಯೇಟರ್ ಗಳಲ್ಲಿ ಬಿಡುಗಡೆಗೆ ರೆಡಿಯಾಗಿದೆ ಈ ಸಿನಿಮಾ.

ಸಿನಿಮಾ ಗೆ ಅಭಿಮಾನಿಗಳು ವೈಟಿಂಗ್

ಯಜಮಾನ ಬರುವಾಗ ದೊಡ್ಡ ಸೌಂಡ್ ಮಾಡೇ ಮಾಡ್ತಾನೆ ಅನ್ನೋ ಮಾತುಗಳು ಸದ್ಯ ಬಾರೀ ಓಡಾಡುತ್ತಿವೆ. ಅದಕ್ಕೆ ಕಾರಣ ಅಭಿಮಾನಿಗಳು ದರ್ಶನ್ ಮೇಲೆ ಇಟ್ಟುರುವ ಅಭಿಮಾನ. ದರ್ಶನ್ ಯಾವುದೇ ಸಿನಿಮಾ ಬಂದರೂ ಕೂಡ ಅಭಿಮಾನಗಳು ದೊಡ್ಡ ಹೈಪ್ ಕೊಟ್ಟು ಸಿನಿಮಾಗಳನ್ನು ಗೆಲ್ಲಿಸಿದ್ದಾರೆ ಇದೀಗ ಯಜಮಾನ ಸಿನಿಮಾಗೂ ಕೂಡ ದೊಡ್ಡ ಹೈಪ್ ಸಿಗುತ್ತಿದೆ‌.

Related image

೮೦೦ ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಅಬ್ಬರ

ಇನ್ನು ಈ ಸಿನಿಮಾ ಮಾರ್ಚ್ ಒಂದಕ್ಕೆ ಅಬ್ಬರಿಸಲಿದ್ದಾನೆ. ಅಷ್ಟೆ ಅಲ್ಲ ಈ‌ ಸಿನಿಮಾ ೮೦೦ ಕ್ಕೂ ಅಧಿಕ ಸಿನಿಮಾ ಥಿಯೇಟರ್ ಗಳಲ್ಲಿ ತೆರೆ ಕಾಣೋದಿಕ್ಕೆ ರೆಡಿಯಾಗಿದೆ ಅಂತಾ ವರದಿಯಾಗಿದೆ. ಇನ್ನು ಈ ಸಿನಿಮಾ ನೋಡೋದಿಕ್ಕೆ ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ದರ್ಶನ್ ಜೊತೆಗೆ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿದ್ದಾರೆ. ಪಿ ಕುಮಾರ್ ಹಾಗೂ ವಿ.ಹರಿಕೃಷ್ಣ ಸಿನಿಮಾ ನಿರ್ದೇಶಕ ಮಾಡಿದ್ದಾರೆ.

ನಾಳೆಯಿಂದ ವಿದೇಶಗಳಲ್ಲಿ ‘ಬೆಲ್ ಬಾಟಂ’ ರಿಲೀಸ್

#yajamana #sandalwood #darshan #darshanmovies

Tags