ಸುದ್ದಿಗಳು

ಬಿಡುಗಡೆಗೂ ಮೊದಲೇ “ಯಜಮಾನ” ನಿಗೆ ಹಾರ ತುರಾಯಿ

ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ

ಬೆಂಗಳೂರು, ಅ.03: ‘ಯಜಮಾನ’ ಚಿತ್ರೀಕರಣ ಸದ್ಯ ಸ್ಥಗಿತಗೊಂಡಿದೆ. ಆದರೆ ಅಭಿಮಾನಿಗಳಿಗೆ ಮಾತ್ರ ಯಜಮಾನನ ಪೂಜೆ ನಿತ್ಯ ಅನ್ನುವಂತಾಗಿದೆ.

ರಿಲೀಸ್ ಗೂ ಮೊದಲೇ ಹವಾ ಸೃಷ್ಟಿ

ಸದ್ಯ ದರ್ಶನ್ ಇತ್ತೀಚೆಗೆ ನಡೆದ ಅಪಘಾತದಿಂದ  ಸುಧಾರಿಸಿಕೊಳ್ಳುತ್ತಿದ್ದಾರೆ.. ಅವರ ಎಲ್ಲಾ ಸಿನಿಮಾ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ. ಆದರೆ ಅಭಿಮಾನಿಗಳು ಮಾತ್ರ ಅವರ ಸಿನಿಮಾಗಳ ಪೋಸ್ಟರ್ ಹಾಕಿ ಸಂಭ್ರಮಿಸುತ್ತಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಯಜಮಾನನ ಪ್ರೀತಿ

ಹೌದು, ಯಜಮಾನ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಈ ಸಿನಿಮಾ ಚಿತ್ರೀಕರಣ ಹೀಗಿರುವಾಗ ಅಪಘಾತ ದಿಂದ ದರ್ಶನ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಮತ್ತೆ ದರ್ಶನ್ ಯಾವಾಗ ವಾಪಸ್ ಆಗುತ್ತಾರೆ ಅನ್ನುವುದು ಗೊತ್ತಿಲ್ಲ‌ ಆದರೆ ಯಜಮಾನ ಸಿನಿಮಾ ಪೋಸ್ಟರ್ ಗೆ ಹಾರ ಹಾಕಿ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ಈ ಸಿನಿಮಾ ಬಿಡುಗಡೆ ದಿನಾಂಕ ಕೂಡ ಇನ್ನೂ ನಿಗದಿಯಾಗಿಲ್ಲ. ಆದರೂ ಕೂಡ ಯಜಮಾನನ ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ.

ಪೋಸ್ಟರ್ ಗೆ ಹಾರ ಹಾಕಿದ ಅಭಿಮಾನಿಗಳು

ಇನ್ನು ಈ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಈಗಾಗಲೇ ಬಿಡುಗಡೆಯಾಗಿದೆ‌. ಈ ಪೋಸ್ಟರ್ ಅನ್ನೇ ಕಟ್ ಔಟ್ ಮಾಡಿಸಿ ಬ್ಯಾನರ್ ಹಾಕಿದ್ದಾರೆ ಅಭಿಮಾನಿಗಳು. ಸದ್ಯ ಈ ಅಭಿಮಾನಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಈ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Tags