ಸುದ್ದಿಗಳು

ಧೂಳೆಬ್ಬಿಸಿದ ‘ಯಜಮಾನ’ ಚಿತ್ರದ ಮೋಷನ್ ಪೋಸ್ಟರ್ …!

20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟ ಮೊದಲ ನೋಟ

ಬೆಂಗಳೂರು,ನ,20: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ‘ಯಜಮಾನ’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸಾಕಷ್ಟು ದಿನಗಳೇ ಆಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಯಜಮಾನ ‘ ಸಿನಿಮಾ ಟೈಟಲನ್ನೇ ದರ್ಶನ್ ಅವರ ಈ ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಸಾರಥಿ ಮ್ಯಾನರಿಸಂಗೆ ತಕ್ಕಂತೆ ಈ ಮೋಷನ್ ಪೋಸ್ಟರನ್ನು ಕ್ರಿಯೇಟಿವ್ ಆಗಿ ಮಾಡಲಾಗಿದೆ.

ಸೆ 23 ರಂದು ‘ಯಜಮಾನ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿತ್ತು…!

ಸೆಪ್ಟೆಂಬರ್ 23 ರಂದು ‘ಯಜಮಾನ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ನಟ ದರ್ಶನ್ ಟ್ವಿಟ್ಟರ್ ನಲ್ಲಿ ಸೆಪ್ಟೆಂಬರ್ 19 ರಂದು ತಾವು ಹಿಂದೆ ತಿರುಗಿ ನಿಂತಿದ್ದು, ಹಿಂದೆ ಶರ್ಟ್ ಮೇಲೆ “First Look On” ಸೆಪ್ಟೆಂಬರ್ 23 ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತದೆ ಎಂದು ಫೋಟೋ ಹಾಕಿ ಹೇಳಿದ್ದರು. ಅದರಂತೆ ಒಂದು ದಿನ ಮುಂಚಿತವಾಗಿಯೇ ಶನಿವಾರ ಯೂಟ್ಯೂಬ್ ನಲ್ಲಿ ‘ಯಜಮಾನ’ ಸಿನಿಮಾ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಗೊಳಿಸಿದರು.

20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ …!

ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ 1.86 ಲಕ್ಷ ವ್ಯೂವ್ಸ್ ಕಂಡಿದ್ದು,ಸುಮಾರು 25 ಸಾವಿರ ಲೈಕ್ ಪಡೆದುಕೊಂಡಿತ್ತು. ಮೋಷನ್ ಪೋಸ್ಟರ್ ನಲ್ಲಿ ದರ್ಶನ್ ರೈತನಾಗಿ ಮಿಂಚಿದ್ದಾರೆ. ಅದಕ್ಕೆ ತಕ್ಕಂತೆ ಅವರ ಸುತ್ತ ಎತ್ತುಗಳು ಇದ್ದು, ಭೂಮಿ ತೂಕದ ಆನೆ ಎಂದು ಟೈಟಲ್ ಕೂಡ ಕೊಟ್ಟಿದ್ದಾರೆ. ಅವರ ಪೋಸ್ಟರ್ ಗಾಗಿ ಸಂಗೀತ ಮಾಡಿದ್ದು, ಮೋಷನ್ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಯಜಮಾನ’ ಚಿತ್ರದ ಮೋಷನ್ ಪೋಸ್ಟರ್ 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

Tags

Related Articles