ಸುದ್ದಿಗಳು

ಶತದಿನ ಪೂರೈಸಿದ ‘ಯಜಮಾನ’: ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ

ಪಿ ಕುಮಾರ್ ಮತ್ತು ವಿ ಹರಿಕೃಷ್ಣ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಯಜಮಾನ’ ಚಿತ್ರವು ಭರ್ಜರಿ ಶತದಿನವನ್ನು ಪೂರೈಸಿ 125 ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ  ಸಿನಿಮಾದ ಶತದಿನೋತ್ಸವ ಕಾರ್ಯಕ್ರಮ ನಡೆಯಿತು.

ಇನ್ನು ಈ ಕಾರ್ಯಕ್ರಮದಲ್ಲಿ ಚಿತ್ರದ ಗೆಲುವಿಗೆ ಕಾರಣರಾದ ಇಡೀ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಹಾಗೆಯೇ ಎಲ್ಲರಿಗೂ ನೆನೆಪಿನ ಕಾಣಿಕೆ ಮೂಲಕ ಧನ್ಯವಾದ ತಿಳಿಸಲಾಯಿತು.

ಈ ಚಿತ್ರವು ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಧನಂಜಯ್, ಶಂಕರ್ ಅಶ್ವಥ್, ಸಂಜು ಬಸಯ್ಯ, ಸಾಧುಕೋಕಿಲ, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇವರುಗಳು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಕ್ಕೆ ಆಗಮಿಸಿ ಮೆರಗು ತಂದರು.

ಇಷ್ಟು ದಿನಗಳ ಕಾಲ ಮ್ಯೂಸಿಕ್ ನಲ್ಲಿ ಮ್ಯಾಜಿಕ್ ಮಾಡಿದ್ದ ವಿ.ಹರಿಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಪ್ರೇಕ್ಷಕರ ಮನ ಗೆದ್ದಿದ್ದು, ಸದ್ಯದಲ್ಲಿಯೇ ಎರಡನೇಯ ಚಿತ್ರದ ಕುರಿತು ಮಾಹಿತಿ ನೀಡಲಿದ್ದಾರೆ.

ಇನ್ನು ಈ ವರ್ಷ ತೆರೆ ಕಂಡ ಚಿತ್ರಗಳಲ್ಲಿ ‘ಯಜಮಾನ’ ಚಿತ್ರವೂ ಸಹ ಶತದಿನ ಪೂರೈಸಿರುವುದರೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಇದೀಗ ಹಂಡ್ರೆಡ್ ಡೇಸ್ ಕಂಪ್ಲೀಟ್ ಮಾಡಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ರವರು ಚಿತ್ರಕ್ಕಾಗಿ ದುಡಿದ ಎಲ್ಲರಿಗೂ ಧನ್ಯವಾದ ಹೇಳಲು ಸಮಾರಂಭ ಏರ್ಪಡಿಸಿ, ನೆನಪಿನ ಕಾಣಿಕೆ ನೀಡಿ, ಸತ್ಕರಿಸಿದ್ದಾರೆ.

ಇನ್ನು ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡ ದರ್ಶನ್ ರ ಮಗ ವಿನೀಶ್, ಶರಣ್, ಪ್ರೇಮ್, ಪ್ರಜ್ವಲ್ ದೇವರಾಜ್ ರಿಗೂ ನೆನಪಿನ ಕಾಣಿಕೆ ನೀಡಲಾಯಿತು.ಅಂದ ಹಾಗೆ ಈ ಚಿತ್ರವು ಅಮೇಜಾನ್ ಪ್ರೈಮ್ ನಲ್ಲೂ ನೋಡಲು ಲಭ್ಯವಿದ್ದು, ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

 

‘ಆದಿತ್ಯ ವರ್ಮಾ’ ಟೀಸರ್:’ಅರ್ಜುನ್ ರೆಡ್ಡಿ’ ರಿಮೇಕ್ ನಲ್ಲಿ ಮಿಂಚಿದ ಧ್ರುವ ವಿಕ್ರಮ್ !!

#yajamana, #movie, #100days, #celebration., #party, #balkaninews #filmnews, #darshan, #rashmikamandanna, #tanyahope, #vineesh #sharan, #prajwal

Tags