ಸುದ್ದಿಗಳು

‘ಯಜಮಾನ’ 100 ಡೇಸ್: ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ನಟಿಸಿರುವ ‘ಯಜಮಾನ’ ಚಿತ್ರವು ಇಂದು ಭರ್ಜರಿ 100 ದಿನಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹೌದು, ‘ಯಜಮಾನ’ ಚಿತ್ರವು ಯಶಸ್ವಿ 15 ನೇ ವಾರಕ್ಕೆ ಕಾಲಿಟ್ಟು, ಇಂದು ಶತದಿನವನ್ನು ಪೂರೈಸಿದೆ. ಈಗಲೂ ಸಹ ಈ ಸಿನಿಮಾ ತುಂಬು ಗೃಹದಿಂದ ಪ್ರದರ್ಶನವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಅಭಿಮಾನಿಗಳ ಮಚ್ಚಿಗೆಯ ಮಹಾಪೂರವೆ ಹರಿದು ಬರುತ್ತಿದೆ.

ಅಂದ ಹಾಗೆ ಈ ಚಿತ್ರವು ಮಾರ್ಚ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಇನ್ನು ಕೂಡ ಸಾಕಷ್ಟು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ ಎಲ್ಲರಿಗೂ ತಿಳಿದಿರುವಂತೆ ಈ ಚಿತ್ರವೀಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲೂ ನೋಡುವುದಕ್ಕೆ ಲಭ್ಯವಿದ್ದು, ಅಲ್ಲಿಯೂ ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ವಿಶೇಷವೆಂದರೆ, ಈ ಚಿತ್ರವನ್ನು ವಿ ಹರಿಕೃಷ್ಣ ಮತ್ತು ಕೆ. ಕುಮಾರ್ ಅಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಜೊತೆಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಚಿತ್ರದಲ್ಲಿ ದರ್ಶನ್ , ರಶ್ಮಿಕಾ ಮಂದಣ್ಣ, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ದೇವರಾಜ್, ಸಂಜು ಬಸಯ್ಯ, ಶಿವರಾಜ್ ಕೆ ಆರ್ ಪೇಟೆ, ಸಾಧುಕೋಕಿಲಾ, ಮಂಡ್ಯ ರಮೇಶ್, ದತ್ತಣ್ಣ ಸೇರಿದಂತೆ ಹಲವಾರು ಮಂದಿಯ ದೊಡ್ಡ ತಾರಾಗಣವೇ ಇದೆ.

ಇದು ದರ್ಶನ್ ನಟನೆಯ 51 ನೇ ಚಿತ್ರವಾಗಿದ್ದು, 50 ನೇ ಸಿನಿಮಾ ‘ಕುರುಕ್ಷೇತ್ರ’ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಇದಾದ ಬಳಿಕ ‘ಒಡೆಯ’ ಸಿನಿಮಾ ಕೂಡಾ ಇದೇ ವರ್ಷ ತೆರೆ ಕಾಣಲಿದ್ದು, ‘ರಾಬರ್ಟ್’ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಮನೆಯಲ್ಲಿ ಕಡಿಮೆ ಸಮಯದಲ್ಲಿ ತಯಾರಿಸಿ ಖಾರ ಹಾಗೂ ಸಿಹಿ ಶಂಕರ ಪೌಳಿ

#yajamana, #100days, #celebration, #balkaninews #filmnews, #kannadasuddigalu, #darsan #rashmikamandanna,

Tags