ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ

ಹಳ್ಳಿಗೂ ಮತ್ತು ಮುಂಬೈಗೂ ಇವನು ‘ಯಜಮಾನ’

ಬೆಂಗಳೂರು.ಮಾ.02: ಒಂದು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರವೊಂದು ರಿಲೀಸ್ ಆಗಿದೆ. ಸಹಜವಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಇದರೊಂದಿಗೆ ಚಿತ್ರದ ಹಾಡುಗಳು, ಟ್ರೈಲರ್, ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಆಗಿವೆ. ಹೀಗಾಗಿ ‘ಯಜಮಾನ’ ಎಲ್ಲರಿಗೂ ಇಷ್ಟವಾದನೇ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ಈ ‘ಯಜಮಾನ’ ಎಲ್ಲರಿಗೂ ಇಷ್ಟವಾಗುತ್ತಾನೆ. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ರಂಜಿಸುತ್ತಾನೆ.

ಕಥಾಹಂದರ

ಚಿತ್ರದ ಕಥೆ ನಡೆಯುವುದು ಹುಲಿದುರ್ಗ ಎಂಬ ಊರಿನಲ್ಲಿ. ಇಲ್ಲಿನ ಜನರು ಗಾಣವೇ ನಮ್ಮ ಪ್ರಾಣ ಎಂದು ನೈಸರ್ಗಿಕವಾಗಿ ಎಣ್ಣೆ ಉತ್ಪಾದನೆ ಮಾಡುತ್ತಿರುತ್ತಾರೆ. ನಾಯಕ ಕೃಷ್ಣ ಸಹ (ದರ್ಶನ್) ಹುಲಿದುರ್ಗದ ನಂದಿ ಇದ್ದಂತೆ. ಆದರೆ, ಈ ಊರಿನವರ ಎಣ್ಣೆಯಿಂದಾಗಿ ‘ಗೋಲ್ಡನ್ ಈಗಲ್’ ಎಂಬ ಇಂಟರ್ ನ್ಯಾಷನಲ್ ಆಯಿಲ್ ಕಂಪೆನಿಗೆ ಮತ್ತು ಕಂಪೆನಿಯ ಮಾಲೀಕ ದೇವಿ ಶೆಟ್ಟಿಗೆ ಇಲ್ಲಿನ ಮುಳುವಾಗಿರುತ್ತದೆ. ತನ್ನದೇ ಏಕಸ್ವಾಮ್ಯ ಸಾಧಿಸಲು ಹುಲಿದುರ್ಗದ ಬ್ರ್ಯಾಂಡ್ ಎಣೆಯನ್ನು ಕೈವಶ ಮಾಡಿಕೊಳ್ಳಲು ಮುಂದಾಗುತ್ತಾನೆ.

ಕಾರ್ಪೊರೇಟ್ ಕಂಪೆನಿಯ ಬುದ್ಧಿ ತಿಳಿದುಕೊಂಡಿರುವ ಕೃಷ್ಣ ಊರ ಜನರಿಗೆ ಬುದ್ದಿ ಹೇಳಿದರೂ ಸಹ ಊರಿನವರು ಕೇಳುವುದಿಲ್ಲ. ಹಣದ ಆಸೆಯಿಂದ ಅವರೆಲ್ಲರೂ ದೇವಿಶೆಟ್ಟಿಗೆ ಕೈಜೋಡಿಸುತ್ತಾರೆ. ಮುಂದೆ ಪಶ್ಚಾತಾಪವನ್ನು ಪಡುತ್ತಾರೆ. ಆನಂತರದಲ್ಲಿ ಕೃಷ್ಣ ತನ್ನ ಊರನ್ನು ಹೇಗೆ ಕಾಪಾಡುತ್ತಾನೆ ಎಂಬುವುದರ ಜೊತೆಗೆ ರೈತರ ಇಂದಿನ ಪ್ರಸ್ತುತತೆ.. ರೈತರ ಗೋಳಿನ ಹಿಂದಿರುವ ಕಾರಣ.. ಗುಡಿಕೈಗಾರಿಕೆ.. ಕುಲಕಸುಬುಗಳ ಕುರಿತು ಹೇಳಲಾಗುತ್ತದೆ.

ಮನರಂಜನೆ ಗ್ಯಾರಂಟಿ

ಎಲ್ಲಾ ರೀತಿಯಿಂದಲೂ ಇದೊಂದು ಮನರಂಜನೆಯ ಅಂಶಗಳ ಮಿಶ್ರಣವೆಂದು ಹೇಳಿ ಬಿಡಬಹುದು. ಅಂದ ಹಾಗೆ ಇಲ್ಲಿ ‘ಯಜಮಾನ’ ಎಂದರೆ ಬೆಳೆ ಬೆಳೆದ ರೈತ. ಹೌದು, ಚಿತ್ರದಲ್ಲಿ ಕೆಲವು ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದ್ದಾರೆ ನಿರ್ದೇಶಕರಾದ ವಿ.ಹರಿಕೃಷ್ಣ ಮತ್ತು ಪಿ. ಕುಮಾರ್.

ಚಿತ್ರದಲ್ಲಿ ಕೃಷ್ಣನಾಗಿ ದರ್ಶನ್, ಕಾವೇರಿಯಾಗಿ ರಶ್ಮಿಕಾ, ಗಂಗಾ ಆಗಿ ತಾನ್ಯಾ, ಮಿಠಾಯಿ ಸೂರಿ ಆಗಿ ಧನಂಜಯ್, ಪುಲ್ಲಾ ರೆಡ್ಡಿಯಾಗಿ ರವಿಶಂಕರ್, ಕ್ಯಾಪ್ಟನ್ ಜಗನ್ ಮೋಹನ್ ಆಗಿ ಸಾಧುಕೋಕಿಲ, ಹುಲಿಕರ್ ಹುಲಿಯಪ್ಪ ನಾಯಕನಾಗಿ ದೇವರಾಜ್.. ಹೀಗೆ ಚಿತ್ರದಲ್ಲಿನ ಅನೇಕ ಪಾತ್ರಗಳು ಮನಸೂರೆಗೊಳ್ಳುತ್ತವೆ.

ಹಾಗೆಯೇ ಚಿತ್ರದಲ್ಲಿ ಮಜಾ ನೀಡುವ ಹಾಡುಗಳಿವೆ, ಥ್ರಿಲ್ ನೀಡುವ ಫೈಟುಗಳ ಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ ಈ ಸಿನಿಮಾ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ. ಉಳಿದಂತೆ, ದೇವರಾಜ್, ರವಿಶಂಕರ್, ದತ್ತಣ್ಣ, ಸಾಧು ಕೋಕಿಲ, ಸಂಜು ಬಸಯ್ಯ ಹೀಗೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿದೆ. ಕೊಟ್ಟ ಕಾಸಿಗೆ ಮೋಸ ಮಾಡುವವನಲ್ಲ ಈ ಯಜಮಾನ.

ಮೂಹೂರ್ತ ಆಚರಿಸಿಕೊಂಡ ‘ಸನ್ಮಾನ್ಯ’

#yajamana, #balkaninews #filmnews, #kannadasuddigalu ,#reviews, #darshan, #rashmikamandanna

Tags