ಸುದ್ದಿಗಳು

ನೋಡುಗರಿಗೆ ಮನವಿ ಮಾಡಿಕೊಂಡ ‘ಯಜಮಾನ’ ಚಿತ್ರತಂಡ…

ಚಿತ್ರದ ಯಾವುದೇ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು

ಬೆಂಗಳೂರು,ಡಿ.1: ನಟ ದರ್ಶನ್ ಅಭಿನಯಿಸುತ್ತಿರುವ ‘ಯಜಮಾನ’ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಕೆಲದಿನಗಳ ಹಿಂದೆಯಷ್ಟೇ ವಿದೇಶಕ್ಕೆ ತೆರಳಿ ಅಲ್ಲಿ ಹಾಡಿನ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಇದೀಗ ವಾಪಸ್ಸಾಗಿದೆ.

ಚಿತ್ರತಂಡದಿಂದ ಮನವಿ

ಈಗ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಪೈರಸಿ ದೊಡ್ಡ ಪಿಡುಗಾದರೆ, ಚಿತ್ರದ ಕೆಲವು ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ‘ಯಜಮಾನ’ ಚಿತ್ರತಂಡದವರು ಒಂದು ಮನವಿ ಮಾಡಿಕೊಂಡಿದ್ದಾರೆ.

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕಾ ಅಭಿನಯದ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ಹಾಗೂ ಯಾವುದೇ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದೆಂದು ಮನವಿ ಮಾಡಿಕೊಳ್ಳುತ್ತೇವೆ”

ಇನ್ನು ಇತ್ತಿಚೆಗಷ್ಟೇ ವಿದೇಶದಲ್ಲಿ ನಡೆಯುತ್ತಿದ್ದ ಈ ಚಿತ್ರದ ಹಾಡಿನ ಚಿತ್ರೀಕರಣವು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಹೀಗಾಗಿ ಈ ಬಗ್ಗೆ ನಿರ್ಮಾಪಕರು ಮತ್ತು ನಾಯಕಿ ರಶ್ಮಿಕಾ ಟ್ವೀಟ್ ಮಾಡಿದ್ದು, ಪೈರಸಿ ಮಾಡುವವರ ಬಗ್ಗೆ ಮಾತನಾಡುತ್ತಾ, ಮನವಿ ಮಾಡಿಕೊಂಡಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು ಸದ್ಯ ಮುಕ್ತಾಯದ ಹಂತದಲ್ಲಿದೆ ‘ಯಜಮಾನ’ ಚಿತ್ರ. ಇನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನೊಬ್ಬ ಫೋಟೋ ತೆಗೆದಿದ್ದ ಎಂದು ನಟ ದರ್ಶನ್ ಗೂ ಆ ಕಲಾವಿದನಿಗೂ ದೊಡ್ಡ ವಿವಾದವೇ ಏರ್ಪಟ್ಟಿತ್ತು.

“ಬೃಹತ್ ಮೊತ್ತದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಹೀಗಾಗಿ ಯಾರೂ ಕೂಡಾ, ನಮ್ಮ ಮತ್ತು ಯಾವುದೇ ಚಿತ್ರದ ಹಾಡುಗಳನ್ನಾಗಲಿ, ಅಥವಾ ದೃಶ್ಯವನ್ನಾಗಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬಾರದು. ಇದರಿಂದ ಬರೀ ಲೈಕ್, ಕಮೆಂಟ್ಸ್ ಸಿಗುತ್ತದೆ ಅಷ್ಟೇ. ಆದರೆ ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡುತ್ತಾರಾ? ಇದರಿಂದ ನಿರ್ಮಾಪಕರ ಕಥೆ ಏನಾಗುತ್ತದೆ. ದಯವಿಟ್ಟು ಯೋಚಿಸಿ” ಎಂದು ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ.

Tags